ಬೆಂಗಳೂರು: ಬಾಂಗ್ಲಾ ಯುವತಿ ಮೇಲೆ ಯುವಕರಿಂದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ದೂರು ದಾಖಲಿಸಿದ್ದು ವೈಟ್ಫೀಲ್ಡ್ ಎಸಿಪಿ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದ ಮನೋಜ್ ಕುಮಾರ್, ಅಪರಿಚಿತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಂದು ಪ್ರಕರಣ ದಾಖಲಿಸಿದ್ದರು. ಮೇ. 27ರಂದು ಮಧ್ಯಾಹ್ನ ಎಸಿಪಿ ಮೊಬೈಲ್‌ಗೆ ವಿಡಿಯೋ ಬಂದಿದ್ದು, ವಿಡಿಯೋದಲ್ಲಿ ಹೀನ ಕೃತ್ಯವೆಸಗಿರುವುದು ಕಂಡು ಬಂದಿತ್ತು. ಈ ಕೃತ್ಯ ಬೆಂಗಳೂರಲ್ಲಿ ನಡೆದಿರುವ ಬಗ್ಗೆ ಮಾಹಿತಿಯೂ ಸಿಕ್ಕಿತ್ತು. ಈ ಸುಳಿವಿನ ಆಧಾರದ ಮೇಲೆ ಘಟನಾ ಸ್ಥಳದಲ್ಲಿ ಟೀಂ ಸಮೇತ ದಾಳಿ ನೆಡಸಿ 6 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಮಾಡಿದಾಗ ಆರೋಪಿಗಳು ಬಾಂಗ್ಲಾದೇಶದಿಂದ ಅಕ್ರಮವಾಗಿ ಗಡಿದಾಟಿ ಬಂದಿರುವುದಾಗಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ: ಬಾಂಗ್ಲಾ ಯುವತಿ ಅತ್ಯಾಚಾರ ಕೇಸ್: ಬಂಧಿತ ಆರೋಪಿಗಳಲ್ಲಿ ಓರ್ವನಿಗೆ ಕೊರೊನಾ
ಬಳಿಕ ಬೆಂಗಳೂರಿನ ವಿವಿಧ ಕಡೆ ವಾಸ ಮಾಡುತ್ತಿರುವುದಾಗಿ ಹೇಳಿಕೆ ನೀಡಿದ್ದರು. ಆರೋಪಿಯ ಮೂಲಕವೇ ಸಂತ್ರಸ್ತ ಯುವತಿ ಯಾರು ಎನ್ನುವ ಮಾಹಿತಿ ಸಿಕ್ಕಿತ್ತು. ಸಂತ್ರಸ್ತೆ ಮೇಲೆ ಚನ್ನಸಂದ್ರದ ಕನಕನಗರ ಲೇಔಟ್‌ನಲ್ಲಿ ಕೃತ್ಯವೆಸಗಿದ್ದಾಗಿ ಹೇಳಿದ್ದರು. ಎಸಿಪಿ ಮನೋಜ್ ಕುಮಾರ್ ತಮಗೆ ಬಂದಿದ್ದ ವಿಡಿಯೋ ತುಣುಕವೊಂದನ್ನ ಪೆನ್ಡ್ರೈವ್ಗೆ ಹಾಕಿ ಮೇ.27ರ ಸಂಜೆ 7.30ಕ್ಕೆ ದೂರು ಸಲ್ಲಿಸಿದ್ದರು. ಬಳಿಕ ರಾಮಮೂರ್ತಿನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.