ETV Bharat / state

ತುಂಬಾ ಸೀರಿಯಸ್ ಇದ್ದಾಗ ಮಾತ್ರ ಆಸ್ಪತ್ರೆ ಬೆಡ್ ಅಗತ್ಯ ಬೀಳುತ್ತದೆ: ಗೌರವ್ ಗುಪ್ತಾ - Gaurav gupta talks about hospital bed in bengalore

ಸರ್ಕಾರ ಸಾವಿರ ಬೆಡ್​ಗಳ ಹೊಸ ಐಸಿಯು ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಲಿದೆ. ಇದರಿಂದ ಕೋವಿಡ್ ರೋಗಿಗಳಿಗೆ ಅನುಕೂಲ ಆಗಲಿದೆ. ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಮನವಿಯನ್ನೂ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

gaurav-gupta
ಗೌರವ್ ಗುಪ್ತಾ
author img

By

Published : Apr 22, 2021, 5:50 PM IST

ಬೆಂಗಳೂರು: ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜನರು ಪ್ಯಾನಿಕ್ ಆಗಿ, ಬೆಡ್ ಬೇಕು ಎಂಬ ಕೂಗು ಎದ್ದಿದೆ. ಶೇ. 90 ರಷ್ಟು ಜನರಿಗೆ ಬೆಡ್ ಅಗತ್ಯ ಇರುವುದಿಲ್ಲ. ಮನೆಯ ಆರೈಕೆಯಲ್ಲೇ ಗುಣಮುಖರಾಗಬಹುದು. ತುಂಬಾ ಸೀರಿಯಸ್ ಇದ್ದಾಗ ಮಾತ್ರ ಆಸ್ಪತ್ರೆ ಬೆಡ್ ಅಗತ್ಯ ಬೀಳುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ದಿನಕ್ಕೆ ಹತ್ತು ಸಾವಿರ ಪ್ರಕರಣಗಳು ಕಂಡುಬಂದರೆ 1500 ಜನರಿಗೆ ಮಾತ್ರ ಬೆಡ್ ಅಗತ್ಯ ಬೀಳುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬೆಡ್ ಹೆಚ್ಚಳ ಮಾಡಲು ಪ್ರಯತ್ನಿಸಲಾಗುತ್ತದೆ. ಮೂರು ದಿನದಲ್ಲಿ ಹನ್ನೊಂದು ಸಾವಿರ ಬೆಡ್​ಗಳ ಕನಿಷ್ಠ ಲಭ್ಯತೆ ಇರಬೇಕಿದೆ. 12 ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗುವುದು.‌ ಖಾಸಗಿ ಆಸ್ಪತ್ರೆ, ಹೋಟೆಲ್​ಗಳು ಜಂಟಿಯಾಗಿ ಮೆಡಿಕಲ್ ಫೆಸಿಲಿಟಿಗಳೊಂದಿಗೆ ಸಿಸಿಸಿ ಕೇಂದ್ರ ಆರಂಭಿಸಲಿದ್ದಾರೆ ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳ ಬೆಡ್ ಬುಕ್ಕಿಂಗ್​ಗೆ​ ಒಂದೇ ಹೆಲ್ಪ್​ಲೈನ್​ ಇದ್ದರೆ ಜನರಿಗೆ ಅನುಕೂಲವಾಗಲಿದೆ. ಇದರಿಂದ ಜನರು ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುವುದೂ ತಪ್ಪುತ್ತದೆ. ಈ ಬಗ್ಗೆ ಆರೋಗ್ಯ ಸಚಿವರ ಜೊತೆಗೂ ಚರ್ಚಿಸಲಾಗಿದೆ ಎಂದರು. ಐಸಿಯು ಬೆಡ್ ಲಭ್ಯತೆ ಸೀಮಿತವಾಗಿದೆ. ಈಗಾಗಲೇ 600 ಐಸಿಯು ಬೆಡ್​ಗಳು ಭರ್ತಿಯಾಗಿವೆ. ಐಸಿಯು ಬೆಡ್ ಸಂಖ್ಯೆ ಹೆಚ್ಚಿಸಲಾಗುವುದು. ಕನಿಷ್ಠ 200 ಹೆಚ್ಚಾಗುವ ನಿರೀಕ್ಷೆ ಇದೆ. ಆದರೂ ಐಸಿಯು ಬೆಡ್​ಗಳ ಸಂಖ್ಯೆ ಸಾಲುವುದಿಲ್ಲ ಎಂದು ತಿಳಿಸಿದರು.

ಸರ್ಕಾರದಿಂದ ಹೊಸ ಐಸಿಯು ತಾತ್ಕಾಲಿಕ ಆಸ್ಪತ್ರೆ: ಸರ್ಕಾರ ಸಾವಿರ ಬೆಡ್​ಗಳ ಹೊಸ ಐಸಿಯು ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡಲಿದೆ. ಇದರಿಂದ ಕೋವಿಡ್ ರೋಗಿಗಳಿಗೆ ಅನುಕೂಲ ಆಗಲಿದೆ. ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಮನವಿಯನ್ನೂ ಮಾಡಲಾಗಿದೆ ಎಂದರು.

ಓದಿ: ಸ್ಮಶಾನದ ಸಿಬ್ಬಂದಿಗೆ ಕೊರೊನಾ ಭಯ : ಮೃತದೇಹಗಳನ್ನ ಮಣ್ಣು ಮಾಡಲ್ಲ ಎಂದು ಹಠ ಹಿಡಿದ ನೌಕರರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.