ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ತಿರುವುಗಳನ್ನು ನಾವು ನೋಡುತ್ತಿದ್ದೇವೆ. ಅಂತೆಯೇ ಹಲವಾರು ದಿನಗಳ ಹೈಡ್ರಾಮದ ನಂತರ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕುಸಿದು ಬಿದ್ದಿದೆ. ಈ ನಡುವೆ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಪರಮಾಧಿಕಾರ ಬಳಸಿ 3 ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಇದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿದೆ. ಹಾಗಾದ್ರೆ ಸ್ಪೀಕರ್ ಯಾವೆಲ್ಲ ಸಂದರ್ಭದಲ್ಲಿ ಶಾಸಕರನ್ನು ಅನರ್ಹತೆ ಮಾಡಬಹುದು ಎಂಬ ಅಂಶಗಳನ್ನು ನೋಡವುದಾದರೆ
> ವಿಧಾನಸಭಾ ಸದಸ್ಯರು ರಾಜಕೀಯ ಪಕ್ಷವೊಂದರ ಸದಸ್ಯತ್ವಕ್ಕೆ ರಾಜೀನಾಮೆ ನೀಡದೇ ಮತ್ತೊಂದು ಪಕ್ಷ ಸೇರಿದರೆ
> ವಿಪ್ ಅನುಗುಣವಾಗಿ ಮತ ಹಾಕದಿದ್ದರೆ ಅಥವಾ ಮತದಾನ ಪ್ರಕ್ರಿಯೆಗೆ ಗೈರು ಹಾಜರಾದಾಗ
> ಸ್ವತಂತ್ರ ಸದಸ್ಯನೊಬ್ಬ ಚುನಾವಣೆ ಬಳಿಕ ರಾಜಕೀಯ ಪಕ್ಷವನ್ನು ಸೇರಿ ಸಹ ಸದಸ್ಯನಾಗಿದ್ದೇನೆ ಎಂದು ಆ ಶಾಸಕಾಂಗ ಪಕ್ಷದ ನಾಯಕ ಹಾಗೂ ಸ್ಪೀಕರ್ಗೆ ಪತ್ರ ನೀಡಿದ್ದರೆ, ಅದಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನ ಒದಗಿಸಿದ್ದಾಗ.
> ವಿಶ್ವಾಸಮತ ಯಾಚನೆಗೂ 15 ದಿನ ಮೊದಲು ಪಕ್ಷದಿಂದ ಪೂರ್ವಾನುಮತಿ ಪಡೆದ ಸದಸ್ಯರು ವಿಪ್ ಅನುಗುಣವಾಗಿ ಮತ ಹಾಕದಿದ್ದರೆ ಅಥವಾ ಮತದಾನ ಪ್ರಕ್ರಿಯೆಗೆ ಗೈರಾದರೆ ಅನರ್ಹತೆ ಭೀತಿಯಿಂದ ತಪ್ಪಿಸಿಕೊಳ್ಳಬಹುದು. ಆದರೆ ಪಕ್ಷದ ಮುಖ್ಯಸಚೇತಕ ಹಾಗೂ ಶಾಸಕಾಂಗ ಪಕ್ಷದ ನಾಯಕರ ಅನುಮತಿ ಪಡೆಯದೇ ಇದ್ದಾಗ ಅನರ್ಹತೆ ಮಾಡಬಹುದು.
> ಲೋಕಸಭೆಯಲ್ಲಿ ಮತ್ತು ವಿಧಾನಸಭೆಯ ನಾಮಕರಣಗೊಂಡ ಸದಸ್ಯರು, ನಾಮಕರಣಗೊಂಡ 6 ತಿಂಗಳ ನಂತರ ಯಾವುದೇ ಪಕ್ಷ ಸೇರಿದರೆ ಅಂತಹ ಶಾಸಕನನ್ನು ಆ ಪಕ್ಷದ ಕೋರಿಕೆ ಮೆರೆಗೆ ಅನರ್ಹತೆ ಮಾಡಬಹುದು
ಈ ಎಲ್ಲಾ ಅಂಶಗಳ ಮುಖೇನ ಸ್ಪೀಕರ್ ತಮ್ಮ ಅಧಿಕಾರದ ಕಾರ್ಯ ವ್ಯಾಪ್ತಿಯಲ್ಲಿ ಶಾಸಕರನ್ನು ಅನರ್ಹಗೊಳಿಸಬಹುದು.