ETV Bharat / state

ಸಿಎಂ ಮಂಡಿಸಲಿರುವ ಬಜೆಟ್​ನಲ್ಲಿ ಹೊಸ ಯೋಜನೆಗಳ ಘೋಷಣೆ ಸಾಧ್ಯತೆ

author img

By

Published : Mar 7, 2021, 6:59 PM IST

Updated : Mar 8, 2021, 7:06 AM IST

ಈ ಬಾರಿಯ ಬಜೆಟ್ ತೆರಿಗೆ ಹೊರೆ ಇಲ್ಲದ ಉತ್ತಮ ಬಜೆಟ್ ಆಗಿರಲಿದೆ ಎಂದು ಸಿಎಂ ಈಗಾಗಲೇ ಮುನ್ಸೂಚನೆ ನೀಡಿದ್ದಾರೆ. ಆದಾಯ ಕೊರತೆಯ ಸಂಕಷ್ಟದ ಮಧ್ಯೆ ಜನಪ್ರಿಯ ದೊಡ್ಡ ಯೋಜನೆಗಳು ಕಷ್ಟ ಸಾಧ್ಯವಾಗಿರುವುದರಿಂದ ಆರ್ಥಿಕ ಇತಿಮಿತಿಯೊಳಗೆ ಕೆಲ ಉತ್ತಮ ಘೋಷಣೆಗಳನ್ನು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

CM's budget
ನಾಳೆ ಸಿಎಂ ಮಂಡಿಸಲಿರುವ ಬಜೆಟ್

ಬೆಂಗಳೂರು: ಆರ್ಥಿಕ ಸಂಕಷ್ಟದ ಇತಿಮಿತಿಯೊಳಗೆ ಸಿಎಂ ಯಡಿಯೂರಪ್ಪ ನಾಳೆ 2021-22ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ. ಆದಾಯ ಕೊರತೆಯ ಹಿನ್ನೆಲೆಯಲ್ಲಿ ದೊಡ್ಡ ಘೋಷಣೆಗಳು ಅನುಮಾನವಾಗಿದ್ದರೂ, ರೈತಸ್ನೇಹಿ, ಅಭಿವೃದ್ಧಿ ಪೂರಕ ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಬಜೆಟ್‌ನಲ್ಲಿ ಸಿಎಂ ಕೆಲ ಹೊಸ ಘೋಷಣೆಗಳನ್ನು ಮಾಡಲಿದ್ದಾರೆ ಎನ್ನಲಾಗಿದೆ.

ಈ ಬಾರಿಯ ಬಜೆಟ್ ತೆರಿಗೆ ಹೊರೆ ಇಲ್ಲದ ಉತ್ತಮ ಬಜೆಟ್ ಆಗಿರಲಿದೆ ಎಂದು ಸಿಎಂ ಈಗಾಗಲೇ ಮುನ್ಸೂಚನೆ ನೀಡಿದ್ದಾರೆ. ಆದಾಯ ಕೊರತೆಯ ಸಂಕಷ್ಟದ ಮಧ್ಯೆ ಜನಪ್ರಿಯ ದೊಡ್ಡ ಯೋಜನೆಗಳು ಕಷ್ಟ ಸಾಧ್ಯವಾಗಿರುವುದರಿಂದ ಆರ್ಥಿಕ ಇತಿಮಿತಿಯೊಳಗೆ ಕೆಲ ಉತ್ತಮ ಘೋಷಣೆಗಳನ್ನು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಮುಖವಾಗಿ ಕೃಷಿ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಬೆಂಗಳೂರು ನಗರ, ಜಲಸಂಪನ್ಮೂಲ, ಮಹಿಳೆ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆಗೆ ಈ ಬಾರಿಯ ಬಜೆಟ್​​ನಲ್ಲಿ ಹೆಚ್ಚಿನ ಆದ್ಯತೆ ನೀಡಲು ಸಿಎಂ ನಿರ್ಧರಿಸಿದ್ದಾರೆ.

ರೈತ ಸ್ನೇಹಿ ಯೋಜನೆ ಘೋಷಣೆ ಸಾಧ್ಯತೆ:

ಈ ಬಾರಿ ಬಜೆಟ್​ನಲ್ಲಿ ಸಿಎಂ ಯಡಿಯೂರಪ್ಪ ರೈತ ಸ್ನೇಹಿ ಕೆಲ ಯೋಜನೆಗಳನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದರಲ್ಲಿ ಪ್ರಮುಖವಾಗಿ ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ರೈತರಿಗೆ ಡೀಸೆಲ್ ಸಬ್ಸಿಡಿ ನೀಡುವ ಹೊಸ ಯೋಜನೆಯನ್ನು ಸಿಎಂ ಇಂದಿನ ಬಜೆಟ್​ನಲ್ಲಿ ಘೋಷಿಸಲಿದ್ದಾರೆ ಎನ್ನಲಾಗಿದೆ.

ರೈತರಿಗೆ ಪ್ರತಿ ಲೀಟರ್ ಸುಮಾರು 25 ರೂ.ನಷ್ಟು ಡೀಸೆಲ್ ಸಬ್ಸಿಡಿ ನೀಡುವ ಸಾಧ್ಯತೆ ಇದೆ. ರೈತರು ಈ ಡೀಸೆಲ್ ಸಹಾಯಧನವನ್ನು ನೀರಾವರಿ ಪಂಪ್ ಸೆಟ್ ಅಥವಾ ಟ್ರ್ಯಾಕ್ಟರ್​ಗಳಿಗೆ ಬಳಸಬಹುದಾಗಿದೆ. ಈ ಯೋಜನೆಗೆ ಸುಮಾರು 1,200-1,300 ಕೋಟಿ ರೂ. ಅನುದಾನ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ ರೈತರು ಬಳಸುವ ಇಂಧನಕ್ಕೆ ತೆರಿಗೆ ಕಡಿತಗೊಳಿಸುವ ಚಿಂತನೆಯೂ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜ್ಯ ಬಜೆಟ್ ಮೇಲೆ​ ಸರ್ಕಾರಿ ನೌಕರರ ನಿರೀಕ್ಷೆಗಳೇನು?

ಈ ಬಾರಿಯ ಬಜೆಟ್​ನಲ್ಲಿ ಕೇಂದ್ರ ಸರ್ಕಾರದ 'ಒಂದು ಜಿಲ್ಲೆ ಒಂದು ಬೆಳೆ' ಯೋಜನೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಈಗಾಗಲೇ ಸರ್ಕಾರ ತೋಟಗಾರಿಕೆ ಉತ್ಪನ್ನಗಳಿಗಾಗಿ 20 ಜಿಲ್ಲೆಗಳನ್ನು, ಕೃಷಿ ಉತ್ಪನ್ನಗಳಿಗಾಗಿ 6 ಜಿಲ್ಲೆ, ಸಮುದ್ರ ಉತ್ಪನ್ನಗಳಿಗಾಗಿ 2 ಜಿಲ್ಲೆ, ಕೋಳಿ ಸಾಗಣೆಗಾಗಿ ಮತ್ತು ಬೇಕರಿ ಉತ್ಪನ್ನಗಳಿಗೆ ತಲಾ 1 ಜಿಲ್ಲೆಯನ್ನು ಗುರುತಿಸಿದೆ.

ಈ ಯೋಜನೆಯಡಿ ಜಿಲ್ಲೆಯ ಒಂದು ನಿರ್ದಿಷ್ಟ ಬೆಳೆಯನ್ನು ಗುರುತಿಸಲಾಗುತ್ತದೆ. ಈ ಉತ್ಪನ್ನಗಳನ್ನು ನಿರ್ವಹಿಸುವ ಉದ್ಯಮಿಗಳು ಯೋಜನಾ ವೆಚ್ಚದ ಶೇ.35ರಷ್ಟು ಸಾಲ ಆಧಾರಿತ ಬಂಡವಾಳ ಸಬ್ಸಿಡಿ ಪಡೆಯಲಿದ್ದಾರೆ. ಇದಕ್ಕಾಗಿ ಈ ಬಜೆಟ್​ನಲ್ಲಿ ಸುಮಾರು100 ಕೋಟಿ ರೂ. ಅನುದಾನ ಮೀಸಲಿಡುವ ಸಾಧ್ಯತೆ ಇದೆ.

ಉಳಿದಂತೆ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರ ವಾರ್ಷಿಕ ಎರಡು ಕಂತಲ್ಲಿ ನೀಡುವ 2,000 ರೂ. ಯೋಜನೆಯನ್ನು ಮುಂದುವರಿಸಲಿದೆ. ಈ ಸಬ್ಸಿಡಿ ಹಣವನ್ನೂ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ:

ಇಂದು ಮಂಡಿಸಲಿರುವ ಬಜೆಟ್‌ನಲ್ಲಿ ಸಿಎಂ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ದೊಡ್ಡ ಯೋಜನೆಗಳ ಘೋಷಣೆ ಅನುಮಾನವಾಗಿದ್ದರೂ, ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಪೆರಿಫರೆಲ್​​ರಿಂಗ್ ರೋಡ್, ನಮ್ಮ ಮೆಟ್ರೋ ಹೊಸ ಮಾರ್ಗ, ಸಬ್ ಅರ್ಬನ್ ರೈಲು ಯೋಜನೆ, ಟೆಂಡರ್ ಶೂರ್ ಯೋಜನೆಯಡಿ ಇನ್ನಷ್ಟು ರಸ್ತೆಗಳ ಸೇರ್ಪಡೆ, ಕಸದ ಸಮಗ್ರ ನಿರ್ವಹಣೆಗಾಗಿ ಹೊಸ ಕಂಪನಿ ಸ್ಥಾಪನೆ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಅನುದಾನ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಗರದಲ್ಲಿ ಪ್ರಸ್ತುತ 80-85 ಸ್ಥಳಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಶುಲ್ಕ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದೇ ರೀತಿ ನಗರದ ಎಲ್ಲಾ ಕಡೆ ಶುಲ್ಕ ಸಂಗ್ರಹ ಕೇಂದ್ರಗಳನ್ನು ಘೋಷಿಸುವ ಸಾಧ್ಯತೆ ಇದೆ. ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ಸಾಮಾನ್ಯ ನಾಗರಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಪಾರ್ಕಿಂಗ್ ಶುಲ್ಕ ನೀತಿ ಘೋಷಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಇತರ ಪ್ರಮುಖ ಘೋಷಣೆ ಸಾಧ್ಯತೆ ಏನಿದೆ?:

  • ಬಡವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆ
  • ಗ್ರಾಮಮಟ್ಟದ “ಗ್ರಾಮ ಅಭಿವೃದ್ಧಿ ಯೋಜನೆ” ಘೋಷಣೆ
  • ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿ ಯೋಜನೆಗೆ 600 ಕೋಟಿ ರೂ. ಅನುದಾನ
  • ಕರಾವಳಿ ಜಿಲ್ಲೆಗಳ ಅಭಿವೃದ್ಧಿಗಾಗಿ ಸಮಗ್ರ ಯೋಜನೆ ರೂಪಿಸಿ 'ಮತ್ಸ್ಯಸಂಪದʼ ಯೋಜನೆಯಡಿ ಹೆಚ್ಚುವರಿ ಅನುದಾನ
  • ಪಿಪಿಪಿ ಮಾದರಿಯಲ್ಲಿ ರಾಜ್ಯಕ್ಕೆ ಕೌಶಲ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದು.
  • ಪ್ರತಿಯೊಂದು ಗ್ರಾಮ ಪಂಚಾಯತ್ ನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಒಂದು ಸ್ಮಾರ್ಟ್ ಶಾಲೆಯನ್ನು ಸ್ಥಾಪನೆ
  • ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಧಿಸಲು ಹೊಸ ನೀತಿ
  • ಕರ್ನಾಟಕ ರಾಜ್ಯ ಪೋಷಣೆ ನೀತಿ ಜಾನುವಾರು ಅಭಿವೃದ್ಧಿಗಾಗಿ ಸಮಗ್ರ ನೀತಿ ಕರ್ನಾಟಕ ಮೇವು ಭದ್ರತೆ ನೀತಿ, ಕರ್ನಾಟಕ ಸಮಗ್ರ ಕುರಿ ಮತ್ತು ಮೇಕೆ ಬೆಳವಣಿಗೆ ನೀತಿ ಹಾಗೂ ನಗರೀಕರಣ ನೀತಿ
  • ನೀರಾವರಿ ಆಯೋಗ ಸ್ಥಾಪನೆ
  • ವಿದ್ಯುತ್ ವಾಹನ ವ್ಯವಸ್ಥೆಗೆ ಹೆಚ್ಚಿನ ಒತ್ತು
  • ನಗರ ಪ್ರದೇಶಗಳಲ್ಲಿ ಮನೆ‌ಮನೆಗೆ ಕುಡಿಯುವ ನೀರಿನ ಕೊಳವೆ ಸಂಪರ್ಕ ಯೋಜನೆಗೆ ಅನುದಾನ

Last Updated : Mar 8, 2021, 7:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.