ETV Bharat / state

ಕೊರೊನಾ ಸಂಕಷ್ಟ : ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಸರ್ಕಾರ ಮಾಡುತ್ತಿರುವ ಕಸರತ್ತು ಏನು?

author img

By

Published : Apr 7, 2020, 3:58 PM IST

ಲಾಕ್‌ಡೌನ್​ನಿಂದಾಗಿ ಜನರ ಓಡಾಟ, ವ್ಯಾಪಾರ ವಹಿವಾಟುಗಳೆಲ್ಲ ಸ್ತಬ್ದವಾಗಿದೆ‌. ಇದರಿಂದ ರಾಜ್ಯ ಸರ್ಕಾರದ ಎಲ್ಲಾ ಆದಾಯ ಮೂಲಗಳು ಬರಿದಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈಗ ತೆರಿಗೆ ಹೊರತಾಗಿ ಇತರ ಮೂಲಗಳಿಂದ ಸಂಪನ್ಮೂಲ ಕ್ರೂಡೀಕರಣದ ಮೊರೆ ಹೋಗಿದೆ‌.

government resource mobilization?
ಸರ್ಕಾರ ಸಂಪನ್ಮೂಲ ಕ್ರೋಡೀಕರಕ್ಕಾಗಿ ಮಾಡುತ್ತಿರುವ ಕಸರತ್ತು ಏನು?

ಬೆಂಗಳೂರು: ಲಾಕ್‌ಡೌನ್​ನಿಂದಾಗಿ ಜನರ ಓಡಾಟ, ವ್ಯಾಪಾರ ವಹಿವಾಟುಗಳೆಲ್ಲ ಸ್ತಬ್ದವಾಗಿದೆ‌. ಇದರಿಂದ ರಾಜ್ಯ ಸರ್ಕಾರದ ಎಲ್ಲಾ ಆದಾಯ ಮೂಲಗಳು ಬರಿದಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈಗ ತೆರಿಗೆ ಹೊರತಾಗಿ ಇತರ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣದ ಮೊರೆ ಹೋಗಿದೆ‌.

ಸರ್ಕಾರದ ಹಣಕಾಸು ಸಂಗ್ರಹದ ಕಸರತ್ತು ಹೇಗಿದೆ?

ಈಗಾಗಲೇ ಆರ್ಥಿಕ ಇಲಾಖೆ ಸಂಪನ್ಮೂಲದ ಕೊರತೆ ಹಿನ್ನೆಲೆ ವೇತನ, ಸಾಮಾಜಿಕ ಭದ್ರತೆ ಪಿಂಚಣಿ, ಆಹಾರ ಭದ್ರತೆ, ಮೂಲ ಆಡಳಿತಾತ್ಮಕ ವೆಚ್ಚಗಳನ್ನು ಹೊರತು ಪಡಿಸಿ ಬೇರೆ ಯಾವುದಕ್ಕೂ ಹಣ ಖರ್ಚು ಮಾಡದಂತೆ ಇಲಾಖೆಗಳಿಗೆ ನಿರ್ದೇಶನ ನೀಡಿದೆ.

ಇತ್ತ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ನಿರ್ಬಂಧಿತ ಬಳಕೆಗೆ ಸರ್ಕಾರ ಸೂಚನೆ ನೀಡಿದೆ. ಶಾಸಕರು ತಮ್ಮ ನಿಧಿಯಲ್ಲಿರುವ 2 ಕೋಟಿ ರೂ. ವರೆಗಿನ ಹಣವನ್ನು ಕೊರೊನಾ ಸಂಬಂಧಿತ ಅಗತ್ಯ ಕ್ರಮಗಳಿಗೆ ಮಾತ್ರ ಬಳಸಬಹುದಾಗಿದೆ. ಅಥವಾ ಈ ಹಣವನ್ನು ಸಿಎಂ ಕೋವಿಡ್ 19 ಪರಿಹಾರ ನಿಧಿಗೆ ಕೊಡಬಹುದು. ಇದರಿಂದ‌ ಸುಮಾರು 450 ಕೋಟಿ ರೂ. ಹಣ ಬೊಕ್ಕಸಕ್ಕೆ ಬರಲಿದೆ.

ಇನ್ನು ಶಾಸಕರು ಹಾಗೂ ಸಚಿವರುಗಳೂ ತಿಂಗಳ ವೇತನವನ್ನು ಕೋವಿಡ್ ಹೋರಾಟಕ್ಕೆ ನೀಡಲು ಒಪ್ಪಿಕೊಂಡಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರು ಒಂದು ತಿಂಗಳ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದು, ಅದರಿಂದ ಸುಮಾರು 200 ಕೋಟಿ ರೂ. ರಾಜ್ಯದ ಬೊಕ್ಕಸ ಸೇರಲಿದೆ.

ಉಳಿದಂತೆ ಹೊಸ ಯೋಜನೆಗಳ ಅನುದಾನವನ್ನು ಕಡಿತಗೊಳಿಸಿ, ಮಹಾಮಾರಿ ಹೋರಾಟಕ್ಕೆ ಬಳಸಲು ಈಗಾಗಲೇ ನಿರ್ದೇಶಿಸಲಾಗಿದೆ. ಇಲಾಖಾ ಕಾರ್ಯದರ್ಶಿಗಳಿಗೆ ಈಗಾಗಲೇ ಹೊಸ ಯೋಜನೆ ಅನುಷ್ಠಾನಗೊಳಿಸದಂತೆ ಸೂಚನೆ ನೀಡಲಾಗಿದೆ‌. ಬೆಂಗಳೂರಿನಲ್ಲೇ ಸುಮಾರು 4,800 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳ ಜಾರಿಗೆ ಬ್ರೇಕ್ ಹಾಕಲಾಗಿದೆ. ಕೆಲ ಇಲಾಖೆಗಳ ಅನುದಾನವನ್ನು ಕಡಿತಗೊಳಿಸುವ ಬಗ್ಗೆನೂ ಚರ್ಚೆ ನಡೆಯುತ್ತಿದೆ‌.

ನೌಕರರ, ಶಾಸಕರ ವೇತನ ಕಡಿತಕ್ಕೂ ಚಿಂತನೆ :

ತೆಲಂಗಾಣದಲ್ಲಿ ಮಾಡಿರುವಂತೆ ಸರ್ಕಾರಿ ನೌಕರರ ವೇತನದಲ್ಲೂ ಕಡಿತಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಸುಮಾರು ಶೇ 10-ಶೇ 50ರ ವರೆಗೆ ವೇತನ ಕಡಿತ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.