ETV Bharat / state

ರಾಜ್ಯದಲ್ಲಿ ಜಾರಿಯಾಗಲಿರುವ ಸರಳೀಕೃತ ನೂತನ ಮರಳು ನೀತಿಯ ವಿಶೇಷತೆ ಏನು?

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತೆಗೆಯುವ ಮರಳಿಗೆ ಶೇ.50ರಷ್ಟು ರಾಜಸ್ವವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.25ರಷ್ಟು ರಾಜಸ್ವವನ್ನು ಸರ್ಕಾರಕ್ಕೆ ಮತ್ತು ಉಳಿದ ಶೇ.25ರಷ್ಟು ರಾಜಸ್ವ ಗ್ರಾಮಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ಮೂಲಸೌಕರ್ಯಗಳು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು.

new sand policy
ನೂತನ ಮರಳು ನೀತಿ
author img

By

Published : Nov 9, 2021, 4:37 AM IST

ಬೆಂಗಳೂರು: ರಾಜ್ಯದಲ್ಲಿ ಸರಳೀಕೃತ ಮರಳು ನೀತಿಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅಷ್ಟಕ್ಕೂ ಈ ನೂತನ ಮರಳು ನೀತಿಯಲ್ಲಿನ ವಿಶೇಷತೆ ಇಲ್ಲಿದೆ.

ಅಗ್ಗದ ದರದಲ್ಲಿ ಗ್ರಾಹಕರಿಗೆ ಮರಳು ಲಭ್ಯವಾಗುವ ನಿಟ್ಟಿನಲ್ಲಿ ಹೊಸ ಮರಳು ನೀತಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಟನ್ ಮರಳಿಗೆ 300 ರೂ. ನಿಗದಿ ಮಾಡಲಾಗಿದೆ. ನದಿ ಪಾತ್ರ ಹಾಗೂ ನಗರ ಪ್ರದೇಶಗಳಲ್ಲಿ ಮರಳು ಮಾರಾಟಕ್ಕೆ ಪ್ರತಿ ಟನ್ ಮರಳಿಗೆ 700 ರೂ. ನಿಗದಿ ಮಾಡಲಾಗಿದೆ. ಸರ್ಕಾರಿ ಯೋಜನೆಗಳು ಮತ್ತು ಬಡವರಿಗೆ ರಿಯಾಯಿತಿ ದರದಲ್ಲಿ ಮರಳು ನೀಡಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತೆಗೆಯುವ ಮರಳಿಗೆ ಶೇ.50ರಷ್ಟು ರಾಜಸ್ವವನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಶೇ.25ರಷ್ಟು ರಾಜಸ್ವವನ್ನು ಸರ್ಕಾರಕ್ಕೆ ಮತ್ತು ಉಳಿದ ಶೇ.25ರಷ್ಟು ರಾಜಸ್ವ ಗ್ರಾಮಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ, ಮೂಲಸೌಕರ್ಯಗಳು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಇನ್ನು, ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ತಾಲೂಕು ಮಟ್ಟದಲ್ಲಿ ಜಿಲ್ಲಾ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ರಾಜ್ಯಮಟ್ಟದ ಸಮಿತಿಯಲ್ಲಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಮರಳುಗಾರಿಕೆಯ ಬಗ್ಗೆ ಸಮಿತಿಯು ನಿಗಾವಹಿಸಲಿದೆ.

ಕರಾವಳಿ ತೀರ ಪ್ರದೇಶದಲ್ಲಿ ಸಂಪ್ರದಾಯದಂತೆ ನದಿ ಮುಳುಗಿ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಆದರೆ ಯಾವುದೇ ಯಂತ್ರೋಪಕರಣ ಬಳಕೆ ಮಾಡುವ ಹಾಗಿಲ್ಲ. ಹೊಸ ನಿಯಮಗಳ ಪ್ರಕಾರ ಸ್ಥಳೀಯ ತೊರೆಗಳು, ಕೆರೆಗಳಿಂದ ತೆಗೆದ ಮರಳನ್ನು ಸ್ಥಳೀಯ ಸಮುದಾಯದ ಕೆಲಸಗಳಿಗೆ, ಕಡಿಮೆ ವಸತಿ ನಿರ್ಮಾಣ ಕಾರ್ಯಗಳಿಗೆ ಅಥವಾ ಸರ್ಕಾರಿ ಕೆಲಸಗಳಿಗೆ ಬಳಸಲು ಅನುಮತಿಸಲಾಗುವುದು. ಪಟ್ಟಾ ಜಮೀನುಗಳಲ್ಲಿ ಮರಳು ತೆಗೆಯುವುದನ್ನು ನಿಷೇಧಿಸಲಾಗಿದೆ. ಪಟ್ಟಾ ಭೂಮಿಯಿಂದ ಮರಳು ತೆಗೆಯಲು ಅನುಮತಿ ನೀಡುವ ಬಗ್ಗೆ ಜಿಲ್ಲಾ ಮರಳು ಸಮಿತಿ ಮಾತ್ರ ತೀರ್ಮಾನ ಕೈಗೊಳ್ಳಲಿದೆ. ಮರಳು ತೆಗೆಯಲು ಮತ್ತು ದಾಸ್ತಾನು ಮಾಡಲು ಪರವಾನಗಿ ಹೊಂದಿರುವ ವ್ಯಕ್ತಿಯು ಕಚೇರಿ, ಕಂಪ್ಯೂಟರ್ ಸೌಲಭ್ಯ, ಕ್ಲೋಸ್ ಸರ್ಕ್ಯೂಟ್ ಕ್ಯಾಮೆರಾ, ತೂಕದ ಸೇತುವೆ, ಮರಳಿನ ಸ್ಟಾಕ್‌ಯಾರ್ಡ್‌ನಲ್ಲಿ ಭದ್ರತೆಯನ್ನು ಸ್ಥಾಪಿಸಬೇಕಾಗಿದೆ..

ಮರಳು ಸಾಗಾಟದ ನಿರ್ಬಂಧಗಳೇನು?:

  • ಮರಳು ಸಾಗಾಟ ಮಾಡುವ ಎಲ್ಲಾ ವಾಹನಗಳು ಜಪಿಎಸ್ ಅಳವಡಿಸಬೇಕು
  • 3 ಟನ್ ಮರಳು ಸಾಗಾಟ ಮಾಡುವ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಲ್ಲ
  • ಸ್ಥಳೀಯ ತೊರೆ, ಕೆರೆಗಳಿಂದ ಸ್ಥಳೀಯ ಉದ್ದೇಶಕ್ಕಾಗಿ ಮರಳನ್ನು ಬಳಸಬಹುದು. ಅದನ್ನು ಟ್ರ್ಯಾಕ್ಟರ್, ಎತ್ತಿನ ಗಾಡಿ ಕೊಂಡಯ್ಯಬಹುದು‌. ಗ್ರಾಮ ಪಂಚಾಯತಿ ಸಾಗಾಟ ಪರವಾನಿಗೆ ನೀಡಬೇಕು
  • ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ಮರಳುಗಾರಿಕೆ ಮತ್ತು ಸಾಗಾಟ ಮಾಡಬಹುದಾಗಿದೆ. ಬಳಿಕದ ಮರಳುಗಾರಿಕೆ, ಸಾಗಾಟ ಕಾನೂನು ಬಾಹಿರವಾಗಲಿದೆ.
  • ಅನುಮತಿ ನೀಡಿದ ಪ್ರದೇಶಗಳಿಂದ ತೆಗೆಯಲಾದ ಮರಳನ್ನು ರಾಜ್ಯದ ಯಾವ ಭಾಗಕ್ಕಾದರೂ ಸಾಗಾಟ ಮಾಡಬಹುದಾಗಿದೆ
  • ಇತರ ರಾಜ್ಯಗಳಿಂದ ಮರಳು ಸಾಗಾಟ ಮಾಡಬೇಕಾದರೆ, ಪ್ರತಿ ಟನ್ ಗೆ 100 ರೂ. ಶುಲ್ಕ ಪಾವತಿ ಮಾಡಬೇಕು

    ಮರಳುಗಾರಿಕೆಗೆ ಎಲ್ಲೆಲ್ಲಿ ನಿಷೇಧ:
  • ಕುಡಿಯುವ ನೀರು ಒದಗಿಸುವ ಬಾವಿಯ 500 ಮೀಟತ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ಇಲ್ಲ
  • ಹರಿಯುವ ನದಿಯಿಂದ ಮರಳು ತೆಗೆಯುವುದು ನಿಷಿದ್ಧ
  • ಸೇತುವೆ ಹಾಗೂ ಹೆದ್ದಾರಿಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ‌ ಇಲ್ಲ
  • ಮರಳುಗಾರಿಕೆಯನ್ನು ಮೂರು ಮೀಟರ್ ಆಳದವರೆಗೆ ಮಾಡಬಹುದು. ನದಿ ತಡದ 7.5 ಮೀಟರ್ ದೂರದ ವರೆಗೆ ಮಾತ್ರ ಮರಳುಗಾರಿಕೆಗೆ ಅವಕಾಶ
  • ಮರಳನ್ನು ಮಾರಾಟ ಮಾಡಲು ಸಂಗ್ರಹ ಮಾಡುವ ಹಾಗಿಲ್ಲ. ಪರವಾನಿಗೆ ಹೊಂದಿದ ವ್ಯಕ್ತಿ ಮಾತ್ರ ಮರಳು ಸಂಗ್ರಹ ಮಾಡಬಹುದು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.