ETV Bharat / state

HDK ಮೈತ್ರಿ ಸರ್ಕಾರದ 'ಶಾಲಾ ಸಂಪರ್ಕ ಸೇತು' ಯೋಜನೆಗೆ ಗ್ರಹಣ; ಕಾಮಗಾರಿ ಪ್ರಗತಿ ಕುಂಠಿತ!

ಮಳೆಗಾಲದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶಾಲಾ ವಿದ್ಯಾರ್ಥಿನಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರಿಂದ ಎರಡು ದಿನಗಳ ಕಾಲ ಈ ಭಾಗದಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ 'ಶಾಲಾ ಸಂಪರ್ಕ ಸೇತು' ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದರು.

ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ನಿರ್ಮಾಣವಾದ ಸೇತುವೆ

author img

By

Published : Jun 6, 2021, 4:24 AM IST

ಬೆಂಗಳೂರು: ಎಚ್ ಡಿಕೆ ಮೈತ್ರಿ ಸರ್ಕಾರ ಶಾಲಾ ವಿದ್ಯಾರ್ಥಿಗಳು ನದಿ, ಹಳ್ಳ, ತೊರೆ ದಾಟಲು ಅನುಕೂಲವಾಗುವಂತೆ ಶಾಲಾ ಸಂಪರ್ಕ ಸೇತು ಯೋಜನೆಯನ್ನು ಜಾರಿಗೆ ತಂದಿತ್ತು. ಯೋಜನೆ ಜಾರಿಗೆ ಬಂದು ಮೂರು ವರ್ಷ ಕಳೆದಿದ್ದು, ಮುಂಗಾರು ಪ್ರಾರಂಭವಾಗಿರುವ ಹಿನ್ನೆಲೆ ಸದ್ಯ ಈ ಮಹತ್ವಾಕಾಂಕ್ಷೆಯ ಯೋಜನೆಯ ಸ್ಥಿತಿಗತಿ ಏನಿದೆ ಎಂಬುದರ ವರದಿ ಇಲ್ಲಿದೆ.

2018ರಲ್ಲಿ ಮಲೆನಾಡು ಶಾಲೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನು ಕಾಲುಸಂಕ ದಾಟುವ ಸಂದರ್ಭದಲ್ಲಿ ಅಸುನೀಗಿದ ಸುದ್ದಿಯನ್ನು ಗಮನಿಸಿ, ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಶಾಲಾ ಸಂಪರ್ಕ ಸೇತು ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತಂದಿದ್ದರು. ನದಿ, ಹಳ್ಳ, ತೊರೆಯನ್ನು ವಿದ್ಯಾರ್ಥಿಗಳು, ಮಕ್ಕಳು, ಹಳ್ಳಿಗಾಡಿನ ರೈತರು ಸುರಕ್ಷಿತವಾಗಿ ದಾಟಲು ಅನುಕೂಲವಾಗುವಂತೆ ಶಾಲಾ ಸಂಪರ್ಕ ಸೇತು ಯೋಜನೆಯನ್ನು ಜಾರಿಗೆ ತಂದಿದ್ದರು. ನದಿ, ಹಳ್ಳ, ತೊರೆಗೆ ನಿರ್ಮಿಸಲಾಗಿದ್ದ ಕಾಲುಸಂಕ ಸೇತುವೆಗಳನ್ನು ಬದಲಾಯಿಸಿ, ಶಾಶ್ವತವಾದ ಕಿರುಸೇತುವೆಗಳನ್ನು ನಿರ್ಮಿಸುವಂತೆ ಸೂಚಿಸಿ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿತ್ತು.

ಮಳೆಗಾಲದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಶಾಲಾ ವಿದ್ಯಾರ್ಥಿನಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರಿಂದ ಎರಡು ದಿನಗಳ ಕಾಲ ಈ ಭಾಗದಲ್ಲಿ ವಾಸ್ತವ್ಯ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ 'ಶಾಲಾ ಸಂಪರ್ಕ ಸೇತು' ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದರು. ಮಳೆಗಾಲದ ಸಂದರ್ಭದಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಯ ಹೆಚ್ಚಿನ ಗ್ರಾಮಗಳು ಮುಖ್ಯವಾಹಿನಿಯಿಂದ ಸಂಪರ್ಕ ಕಳೆದುಕೊಂಡು ತೊಂದರೆ ಅನುಭವಿಸುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು.

ಅದರಂತೆ ಪಾದಚಾರಿಗಳು ಹಾಗೂ ತ್ರಿಚಕ್ರ ವಾಹನ ಸಂಚಾರಕ್ಕೆ ಅನುವಾಗುವಂತೆ 1 ರಿಂದ 3 ಮೀಟರ್‌ ಅಗಲದಲ್ಲಿ ಸೇತುವೆ ವಿನ್ಯಾಸ ರೂಪಿಸಬೇಕು. ಭಾರಿ ವಾಹನಗಳು ಸಂಚರಿಸದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿರ್ಬಂಧಕ ಅಳವಡಿಸುವ ಷರತ್ತಿನೊಂದಿಗೆ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಇದೀಗ ಎಚ್​ಡಿಕೆ ಮೈತ್ರಿ ಸರ್ಕಾರ ಹೋಗಿ ಬಿಎಸ್​ವೈ ಸರ್ಕಾರ ಬಂದಿದ್ದು, ಈ ಮಹಾತ್ವಾಕಾಂಕ್ಷೆ ಯೋಜನೆ ಜಾರಿಯಲ್ಲಿನ ಆರಂಭಿಕ ಪ್ರಗತಿ ವೇಗವನ್ನು ಇದೀಗ ಕಳೆದು ಕೊಂಡಿದೆ.

ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ನಿರ್ಮಾಣವಾದ ಸೇತುವೆ
ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ನಿರ್ಮಾಣವಾದ ಸೇತುವೆ
ಶಾಲಾ ಸಂಪರ್ಕ ಸೇತು ಯೋಜನೆ ವಿವರ:ಮಲೆನಾಡು ಕರಾವಳಿ ಭಾಗದ ಮಕ್ಕಳು ಹಾಗೂ ರೈತರು ಸುರಕ್ಷಿತವಾಗಿ ಹಳ್ಳ, ನದಿ, ತೊರೆ ದಾಟಲು ಶಾಲಾ ಸಂಪರ್ಕ ಸೇತುವೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಗೊಂಡಿದೆ. ಅದರಂತೆ ದಕ್ಷಿಣ ವಲಯದ ಹಾಸನ ಜಿಲ್ಲೆಯಲ್ಲಿ 51, ಕೊಡಗಿನಲ್ಲಿ 342 ಸೇರಿ ಒಟ್ಟು 393 ಶಾಲಾ ಸಂಪರ್ಕ ಸೇತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದಕ್ಕಾಗಿ 35.25 ಕೋಟಿ ರೂ. ಅನುದಾನ ಮೀಸಲಿರಿಸಲಾಗಿತ್ತು. ಕೇಂದ್ರ ವಲಯಕ್ಕೆ ಬರುವ ಶಿವಮೊಗ್ಗ ವಿಭಾಗ 118, ಶಿವಮೊಗ್ಗ ವಿಶೇಷ ವಿಭಾಗದಲ್ಲಿ 34, ಚಿಕ್ಕಮಗಳೂರು 186, ಉಡುಪಿ ವಿಭಾಗ 468, ಮಂಗಳೂರು ವಿಭಾಗದಲ್ಲಿ 302 ಸೇರಿ 1108 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ 65.59 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಉತ್ತರ ವಲಯದಲ್ಲಿ ಶಿರಸಿಯಲ್ಲಿ 93, ಕಾರವಾರ 117, ಬೆಳಗಾವಿ 6 ಸೇರಿ ಒಟ್ಟು 216 ಶಾಲಾ ಸಂಪರ್ಕ ಸೇತು ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಇದಕ್ಕಾಗಿ 32.54 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕಾಮಗಾರಿ ಸ್ಥಿತಿಗತಿ ಹೇಗಿದೆ ನೋಡಿ:ದಕ್ಷಿಣ ವಲಯದಲ್ಲಿ ಮಂಜೂರಾದ 393 ಶಾಲಾ ಸಂಪರ್ಕ ಸೇತು ಕಾಮಗಾರಿಗಳಲ್ಲಿ ಕೇವಲ 150 ಕಾಮಗಾರಿ ಪೂರ್ಣಗೊಂಡಿದೆ. 162 ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲಿ ಇದ್ದರೆ, 81 ಕಾಮಗಾರಿಗಳು ಸ್ಥಳ ಸಮಸ್ಯೆ ಹಿನ್ನೆಲೆ ಪ್ರಾರಂಭವಾಗಿಲ್ಲ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ.ಕೇಂದ್ರ ವಲಯದ ವ್ಯಾಪ್ತಿಗೆ ಬರುವ ಶಿವಮೊಗ್ಗ ವಿಭಾಗದಲ್ಲಿ ಕೈಗೆತ್ತಿಕೊಂಡ 118 ಶಾಲಾ ಸಂಪರ್ಕ ಸೇತುವೆ ಕಾಮಗಾರಿಗಳಲ್ಲಿ 96 ಕಾಮಗಾರಿ ಪೂರ್ಣಗೊಂಡಿದೆ. 22 ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಚಿಕ್ಕಮಗಳೂರು ವಿಭಾಗದಲ್ಲಿ 186 ಕಾಮಗಾರಿಗಳ ಪೈಕಿ 90 ಕಾಮಗಾರಿ ಪೂರ್ಣಗೊಂಡಿದೆ. 78 ಕಾಮಗಾರಿಗಳು ಪ್ರಗತಿಯಲ್ಲಿದೆ. 22 ಕಾಮಗಾರಿಗಳನ್ನು ಸ್ಥಳ ತಕರಾರಿನಿಂದ ಇನ್ನೂ ಕೈಗೆತ್ತಿಕೊಂಡಿಲ್ಲ. ಉಡುಪಿ ವಿಭಾಗದಲ್ಲಿ 468 ಕಾಮಗಾರಿಗಳ ಪೈಕಿ 328 ಕಾಮಗಾರಿ ಪೂರ್ಣಗೊಂಡಿದೆ. 139 ಕಾಮಗಾರಿಗಳ ಪ್ರಗತಿ ಕುಂಟುತ್ತಾ ಸಾಗುತ್ತಿದೆ. ಮಂಗಳೂರು ವಿಭಾಗದಲ್ಲಿ 302 ಕಾಮಗಾರಿಗಳ ಪೈಕಿ 147 ಸೇತುವೆ ಪೂರ್ಣಗೊಂಡಿದೆ. 78 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿದ್ದರೆ, 31 ಕಾಮಗಾರಿ ಟೆಂಡರ್ ಹಂತದಲ್ಲಿದ್ದರೆ, 40 ಕಾಮಗಾರಿಗಳ ಅಂದಾಜು ಪಟ್ಟಿಗೆ ಇನ್ನೂ ಮಂಜೂರಾತಿ ನೀಡಿಲ್ಲ ಎಂದು ಇಲಾಖೆ ತಿಳಿಸಿದೆ.ಉತ್ತರ ವಲಯ ವ್ಯಾಪ್ತಿಯಲ್ಲಿ ಬರುವ ಶಿರಸಿಯಲ್ಲಿ ಮಂಜೂರಾದ 93 ಶಾಲಾ ಸಂಪರ್ಕ ಸೇತು ಕಾಮಗಾರಿಗಳಲ್ಲಿ 54 ಪೂರ್ಣಗೊಂಡಿದೆ. ಪ್ರಗತಿಯಲ್ಲಿರುವ ಕಾಮಗಾರಿ 16 ಇದ್ದು, 9 ಕಾಮಗಾರಿಗಳು ಹುಲಿ ಸಂರಕ್ಷಣಾ ವಲಯಕ್ಕೆ ಬರುವ ಹಿನ್ನೆಲೆ ಸ್ಥಗಿತಗೊಳಿಸಲಾಗಿದೆ. ಇನ್ನು 14 ಕಾಮಗಾರಿಗಳನ್ನು ವಿವಿಧ ಕಾರಣಕ್ಕೆ ಕೈ ಬಿಡಲಾಗಿದೆ. ಕಾರವಾರದಲ್ಲಿ 117 ಕಾಮಗಾರಿಗಳ ಪೈಕಿ 59 ಕಾಮಗಾರಿ ಪೂರ್ಣಗೊಂಡಿದೆ. 33 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿವೆ. ಸುಮಾರು 16 ಸೇತುವೆ ಕಾಮಗಾರಿಗಳಿಗೆ ಅನುದಾನದ ಕೊರತೆ ಎದುರಾಗಿದೆ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. 2021-22 ಸಾಲಿನಲ್ಲಿ ಯಡಿಯೂರಪ್ಪ ಸರ್ಕಾರ ಈ ಯೋಜನೆಗೆ ಯಾವುದೇ ಅನುದಾನ ನೀಡಿಲ್ಲ. ಆರಂಭದ ಒಂದು ವರೆ ವರ್ಷ ಶರವೇಗದಲ್ಲಿ ನಡೆದ ಕಾಮಗಾರಿ ಬಿಜೆಪಿ‌ ಸರ್ಕಾರ ಬಂದ ಬಳಿಕ ತನ್ನ ವೇಗವನ್ನು ಕಳೆದುಕೊಂಡಿದೆ. ಅನುದಾನ ಕೊರತೆಯೂ ಈ ಯೋಜನೆಗೆ ಅಡ್ಡಗಾಲಾಗಿ ಪರಿಣಮಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.