ETV Bharat / state

ಐಎಂಎ ವಂಚನೆಗೆ ಮೊದಲು ಪೊಲೀಸರು ಏನ್​​​ ಮಾಡ್ತಿದ್ರು: ಅಬ್ದುಲ್​​​ ಅಜೀಂ

ಐಎಂಎ ವಂಚನೆ ಬಯಲಾಗುವವರೆಗೂ ಪೊಲೀಸರು ಕಾಯಬೇಕಾಗಿರಲಿಲ್ಲ. ಇನ್ನಾದರೂ ಪೊಲೀಸರ ದೊಡ್ಡ ತಂಡ ರಚಿಸಿ ಸೂಕ್ತ ತನಿಖೆ ನಡೆಯಬೇಕು ಎಂದು ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಲರ್ಸ್ ಕಾಲೋನಿಯಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಆಗ್ರಹಿಸಿದರು.

ಐಎಂಎ ವಂಚನೆಗೆ ಮೊದಲು ಪೊಲೀಸರು ಏನ್ ಮಾಡ್ತಿದ್ರು
author img

By

Published : Jun 11, 2019, 11:36 PM IST

ಬೆಂಗಳೂರು: ಐಎಂಎ ವಂಚನೆ ಬಯಲಾಗುವವರೆಗೂ ಪೊಲೀಸರು ಕಾಯಬೇಕಾಗಿರಲಿಲ್ಲ. ಇನ್ನಾದರೂ ಪೊಲೀಸರ ದೊಡ್ಡ ತಂಡ ರಚಿಸಿ ಸೂಕ್ತ ತನಿಖೆ ನಡೆಯಬೇಕು ಎಂದು ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಲರ್ಸ್ ಕಾಲೋನಿಯಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಬ್ದುಲ್ ಅಜೀಂ ಆಗ್ರಹಿಸಿದರು.

ಅಬ್ದುಲ್​ ಅಜೀಂ, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ

ನಾನೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ. ನಾನು ಐಎಂಎ ಮಾಲೀಕ ಮೊಹಮದ್ ಮನ್ಸೂರ್ ಆಡಿಯೋ ಕೇಳಿಸಿಕೊಂಡೆ. ಮನ್ಸೂರ್ ಆಡಿಯೋದಲ್ಲಿ ಶೇ. 90ರಷ್ಟು ಅಂಶಗಳು ಸತ್ಯ ಇದೆ ಅನ್ಸುತ್ತೆ. ಐಎಂಎ ಇಷ್ಟೆಲ್ಲ ರಿಯಾಯ್ತಿ, ಬಡ್ಡಿ ಕೊಡ್ತಿತ್ತು ಅಂದ್ರೆ ಅನುಮಾನ ಹುಟ್ಟುತ್ತೆ. ಯಾಕೆ ಪೊಲೀಸರು ಸುಮೊಟೋ ದಾಖಲಿಸಿ ತನಿಖೆ ನಡೆಸಲಿಲ್ಲ. ಒಟ್ಟು ಐದು ಸಾವಿರ ಕೋಟಿ ರೂ. ವಂಚನೆ ಆಗಿದೆ. ತಮಿಳುನಾಡು, ಕೇರಳ, ದಾವಣಗೆರೆಯಲ್ಲೂ ಸುಮಾರು ಜನರಿಗೆ ಮೋಸ ಆಗಿದೆ. ಅಲ್ಲಿಯೂ ಸುಮಾರು 4 ಸಾವಿರ ಜನರಿಗೆ ಮೋಸವಾಗಿದೆ. ಒಟ್ಟಾರೆ 3 ಲಕ್ಷ ಜನರಿಗೆ ಮೋಸವಾಗಿದೆ. ಕೇವಲ 5 ಪೊಲೀಸ್ ತಂಡದಿಂದ ತನಿಖೆ ಸಾಧ್ಯವಾಗುವುದಿಲ್ಲ. ಸಿಬಿಐ ಹಾಗೂ ಇತರೆ ಇಲಾಖೆಗಳಿಂದಲೂ ತನಿಖೆ ಆಗಬೇಕು ಎಂದು ಅಬ್ದುಲ್ ಅಜೀಂ ಆಗ್ರಹಿಸಿದರು.

Intro:Body:

1 kn-bng-02-11-ima-reaction-visual-sowmya-7202707_11062019064856_1106f_00011_1028.mp4   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.