ETV Bharat / state

ದೊರೆಸ್ವಾಮಿ ವಿರುದ್ಧದ ಯತ್ನಾಳ್​​ ಹೇಳಿಕೆ ವಿಚಾರ...ಸಚಿವ ಸಿ.ಟಿ.ರವಿ ಹೇಳಿದ್ದು ಹೀಗೆ

ನಾವು ಯತ್ನಾಳ್‌ ಮಾತನಾಡಿರುವುದನ್ನು ಸಮರ್ಥಿಸುವುದಿಲ್ಲ. ಆದರೆ, ಅವರು ಸಾವರ್ಕರ್​ಗೆ ಅಪಮಾನ‌‌ ಮಾಡುತ್ತಿದ್ದಾರೆ. ಅದನ್ನು ನಾವು ಸಹಿಸುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

Minister CT Ravi
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ
author img

By

Published : Mar 2, 2020, 1:35 PM IST

ಬೆಂಗಳೂರು: ವೀರ ಸಾರ್ವಕರ್ ಬಗ್ಗೆ ಮಾತನಾಡುವುದನ್ನು ಅವರು ಸಮರ್ಥಿಸಿಕೊಳ್ಳುವುದಾದರೆ, ನಾವು ಯತ್ನಾಳ್ ಮಾತನಾಡಿರುವುದನ್ನೂ ಸಮರ್ಥಿಸಿಕೊಳ್ಳುತ್ತೇವೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಆದರೂ ನಾವು ಯತ್ನಾಳ್‌ ಮಾತನಾಡಿರುವುದನ್ನು ಸಮರ್ಥಿಸುವುದಿಲ್ಲ. ಆದರೆ, ಅವರು ಸಾವರ್ಕರ್​ಗೆ ಅಪಮಾನ‌‌ ಮಾಡುತ್ತಿದ್ದಾರೆ. ಅದನ್ನು ನಾವು ಸಹಿಸುವುದಿಲ್ಲ. ನಮಗೆ ಮಹಾತ್ಮ ಗಾಂಧಿಯೂ ಒಂದೇ, ಸಾರ್ವಕರ್ ಅವರೂ ಒಂದೇ. ಸ್ವಾತಂತ್ರ್ಯಕ್ಕಾಗಿ ಗಾಂಧಿ ಅಹಿಂಸಾ ಮಾರ್ಗ ಹಿಡಿದರೆ, ಸಾವರ್ಕರ್ ಕ್ರಾಂತಿಕಾರಿ ದಾರಿ ಹಿಡಿದರು‌. ಸಾವರ್ಕರ್​ಗೆ ಕಾಂಗ್ರೆಸ್​ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ಯತ್ನಾಳ್ ಅವರ ಎಲ್ಲ ಹೇಳಿಕೆಯನ್ನು ನಾವು ಸಮರ್ಥಿಸಲ್ಲ. ಹಾಗಂತ ದೊರೆಸ್ವಾಮಿಯವರ ಮೋದಿ ವಿರುದ್ಧದ ಹೇಳಿಕೆಯನ್ನೂ ನಾವು ಸಮರ್ಥಿಸಲ್ಲ. ಅಮೂಲ್ಯ ನನ್ನ ಮರಿಮೊಮ್ಮಗಳು ಎಂದು ಹೇಳಿರುವುದು ಅವರ ಹಿರಿತನಕ್ಕೆ ಗೌರವ ತರುವುದಿಲ್ಲ. ಯಾವುದೇ ಸ್ವಾತಂತ್ರ್ಯ ಹೋರಾಟಗಾರ ಪಾಕಿಸ್ತಾನ್ ಜಿಂದಾಬಾದ್ ಅನ್ನುವವರನ್ನು ಸಮರ್ಥಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ಅವರ ಆ ತರಹದ ಹೇಳಿಕೆಯಿಂದ ದೊರೆಸ್ವಾಮಿ ಯಾವ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟರು ಎಂಬ ಬಗ್ಗೆ ಜನರಿಗೆ ಅನುಮಾನ ಬರುತ್ತದೆ. ಹಾಗಾಗಿ ದೊಡ್ಡವರು ದೊಡ್ಡವರಾಗಿ ಇದ್ದರೆ, ಯತ್ನಾಳ್ ಆ ಬಗ್ಗೆ ಪ್ರತಿಕ್ರಿಯೆ ನೀಡುವ ಪರಿಸ್ಥಿತಿ ಬರುತ್ತಿರಲಿಲ್ಲ. ದೊಡ್ಡವರು ದೊಡ್ಡವರಾಗಿ ಉಳಿಯದ ಕಾರಣ ಯತ್ನಾಳ್ ಅವರು ಆ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.