ETV Bharat / state

ಕೋವಿಡ್ 2ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು.. ಯಾವ ಲಕ್ಷಣದ ಮೇಲೆ ನಿಗಾ ಇಡಬೇಕೆಂದು ವೈದ್ಯರು ಹೇಳ್ತಾರೆ ಕೇಳಿ.. - ಮಕ್ಕಳ ಯಾವ ಲಕ್ಷಣದ ಮೇಲೆ ನಿಗಾ ಇಡಬೇಕು..? ವೈದ್ಯರ ಮಾತು

ಮೊದಲ ಅಲೆಯಲ್ಲಿ ಒಂದು ಆಸ್ಪತ್ರೆಯಲ್ಲಿ ಒಂದೋ ಎರಡೋ ಪ್ರಕರಣಗಳು ಕಂಡು ಬರುತಿತ್ತು.‌ ಆದರೆ, ಈಗ ದಿನವೊಂದಕ್ಕೆ 2 ರಿಂದ 3 ಕೇಸ್‌ಗಳು ಕಂಡು ಬರ್ತಿದೆ.‌ ವಾರಕ್ಕೆ 25 ರಿಂದ 30 ಮಕ್ಕಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುತ್ತಿದ್ಧಾರೆ..

what-characteristic-of-children-should-be-monitored-in-covid-2nd-wave
ಕೋವಿಡ್ 2ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು.
author img

By

Published : May 28, 2021, 8:31 PM IST

ಬೆಂಗಳೂರು : ಕೊರೊನಾ ಅಬ್ಬರದ ನಡುವೆಯೇ ದಿನಕ್ಕೊಂದು ಫಂಗಸ್​ ರೋಗ ಕಾಣಿಸಿಕೊಳ್ಳುತ್ತಿದ್ದು, ಜನರ ನಿದ್ದೆಗೆಡುವಂತೆ ಮಾಡಿದೆ. ಅಂದಹಾಗೆ ಕೋವಿಡ್ ಬಂದು ಹೋದ ಮಧ್ಯವಯಸ್ಕರು, ಹಿರಿಯರಿಗೆ ಮಾತ್ರವಲ್ಲದೇ ಸದ್ಯ ಮಕ್ಕಳಿಗೂ ಹೊಸ ಸಮಸ್ಯೆ ಶುರುವಾಗಿದೆ.

ಕೋವಿಡ್ ರಿಕವರಿ ಆದ ಮಕ್ಕಳಲ್ಲಿ MISc( Multi system inflammatory syndrome in children) ಒಂದು ಅಥವಾ ಒಂದೂವರೆ ತಿಂಗಳಲ್ಲಿ ಸಮಸ್ಯೆ ಕಾಣಿಸಿದೆ. ಮೊದಲ ಅಲೆಗಿಂತ‌ 2ನೇ ಅಲೆಯಲ್ಲಿ ಮಕ್ಕಳು ಹೆಚ್ಚು ‌ಸೋಂಕಿಗೆ ತುತ್ತಾಗಿದ್ದಾರೆ.

ಮೊದಲ ಅಲೆಯಲ್ಲಿ ಒಂದು ಆಸ್ಪತ್ರೆಯಲ್ಲಿ ಒಂದೋ ಎರಡೋ ಪ್ರಕರಣ ಕಂಡು ಬರುತಿತ್ತು.‌ ಆದರೆ, ಈಗ ದಿನವೊಂದಕ್ಕೆ 2 ರಿಂದ 3 ಕೇಸ್‌ಗಳು ಕಂಡು ಬರ್ತಿದೆ.‌ ವಾರಕ್ಕೆ 25 ರಿಂದ 30 ಮಕ್ಕಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗುತ್ತಿದ್ಧಾರೆ.

ಕೋವಿಡ್ ತಡೆಗೆ ವೈದ್ಯರ ಸಲಹೆ

ಮಕ್ಕಳಲ್ಲಿ ಕೋವಿಡ್ ಬಂದ ಮೇಲೆ ಆ್ಯಂಟಿಬಾಡಿ ಸೃಷ್ಟಿ ಆಗತ್ತೆ, ಈ ಆ್ಯಂಟಿಬಾಡಿ ನಮ್ಮ ದೇಹದ ಮೇಲೆಯೇ ಪರಿಣಾಮ ಬೀರುವ ಸಮಸ್ಯೆಯನ್ನ MISc ಎನ್ನಲಾಗತ್ತೆ. ನಮ್ಮ ದೇಹವನ್ನ ಪ್ರೊಟೆಕ್ಟ್ ಮಾಡಬೇಕಾದ ಆ್ಯಂಟಿಬಾಡಿ ನಮ್ಮ ದೇಹದ ಮೇಲೆ ದಾಳಿ ಮಾಡುವ ಸಮಸ್ಯೆ ಇದು.

ಹೀಗಾಗಿ, ಕೋವಿಡ್​​​ನಿಂದ ರಿಕವರಿ ಆದ ಮಕ್ಕಳ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸಬೇಕಿದೆ. ಈ ಸಮಸ್ಯೆ ಬಗ್ಗೆ ಭಯಪಡುವ ಅಗತ್ಯ ಇಲ್ಲ, ಈ‌ ಸಮಸ್ಯೆಗೆ ಚಿಕಿತ್ಸೆ ಇದೆ.‌ ಆರಂಭದಲ್ಲಿ ಈ ಸಮಸ್ಯೆಗಳು ಗುರುತಿಸುವುದು ಉತ್ತಮ ಮಾರ್ಗ ಅಂತಾರೆ ಮಕ್ಕಳ ಶ್ವಾಸಕೋಶ ತಜ್ಞ ಡಾ. ಶ್ರೀಕಂಠ ಜೆಟಿ.

ಪೋಷಕರು ಮಕ್ಕಳನ್ನ ಯಾವ ಲಕ್ಷಣಗಳ‌ ಮೇಲೆ ನಿಗಾ ಇಡಬೇಕು?

-ಅತಿಯಾದ ಜ್ವರ (101 ರಿಂದ 103 ಡಿಗ್ರಿ ಜ್ವರ ಕಾಣಿಸಿಕೊಳ್ಳುವುದು)
- ‎ಕಣ್ಣು ಕೆಂಪಾಗುವುದು
- ‎ನಾಲಿಗೆ ಕೆಂಪಾಗುವುದು
- ‎ಮೈ ಮೇಲೆ ಅಲರ್ಜಿ ಕಾಣಿಸಿಕೊಳ್ಳುವುದು
- ‎ಅಂಗೈ, ಪಾದ ಒಡೆದುಕೊಳ್ಳುವುದು
- ಪ್ರಜ್ಞೆ ತಪ್ಪುವುದು
- ಜಾಡೀಸ್ ಇಲ್ಲದೇ ಶ್ವಾಸಕೋಶ ಸೋಂಕು ಆಗುವುದು
- ಹೃದಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರ ವಹಿಸುವುದು ಸೂಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.