ETV Bharat / state

2022ನೇ ಸಾಲಿನ ರಾಜ್ಯ ಬಜೆಟ್​: ಚಿತ್ರರಂಗದ ಬೇಡಿಕೆಗಳೇನು?

2022-2023ನೇ ಸಾಲಿನ ರಾಜ್ಯ ಬಜೆಟ್​​ ಮಾರ್ಚ್‌ 4ರಂದು ವಿಧಾನಸಭೆಯಲ್ಲಿ ಮಂಡನೆಯಾಗಲಿದೆ. ಈ ಬಜೆಟ್​ ಮೇಲೆ ಕನ್ನಡ ಚಿತ್ರರಂಗ ಸಾಕಷ್ಟು ಭರವಸೆ ಇಟ್ಟುಕೊಂಡಿದೆ.

Jayaraj, chairman of Karnataka Film Chamber of Commerce
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್
author img

By

Published : Mar 2, 2022, 7:21 PM IST

ಬೆಂಗಳೂರು: 2022-2023ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಇನ್ನೆರಡು ದಿನಗಳು ಬಾಕಿ ಇವೆ. ಈ ಬಜೆಟ್​ನಲ್ಲಿ ಕನ್ನಡ ಚಿತ್ರರಂಗಕ್ಕೆ ಏನೆಲ್ಲಾ ಸಿಗಬೇಕು ಎಂಬುದರ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್ ಈಟಿವಿ ಭಾರತದ ಜೊತೆ ಮಾತನಾಡಿದರು.

ಫಿಲ್ಮ್ ಸಿಟಿ ನಿರ್ಮಾಣ ಕಾರ್ಯ: ಕೊರೊನಾದಿಂದಾಗಿ ಕನ್ನಡ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ ರಾಜ್ಯ ಸರ್ಕಾರ ನಮ್ಮ ಕೆಲ ಬೇಡಿಕೆಗಳನ್ನು ಪೂರೈಸಲು ಆಗಿಲ್ಲ. ಬಹಳ ಮುಖ್ಯವಾಗಿ ಕನ್ನಡ ಚಿತ್ರರಂಗಕ್ಕೆ ಬೇಕಾಗಿರುವ ಚಿತ್ರ ನಗರಿ ಸ್ಥಾಪನೆಗೆ ಮೊದಲು ಆದ್ಯತೆ ಕೊಡಬೇಕು. ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಜೆಟ್​​ನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂಪಾಯಿ ಅನುದಾನ ಘೋಷಣೆ​​ ಮಾಡಿದ್ದರು. ಆದರೆ ಇಲ್ಲಿವರೆಗೂ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಜಾಗ ಕೊಟ್ಟಿಲ್ಲ. ಮೊದಲು ಇದಕ್ಕೆ ಜಾಗ ನೀಡಿ, ಶಂಕುಸ್ಥಾಪನೆ ಮಾಡಬೇಕು.

175 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಎರಡನೇಯದಾಗಿ ಕೊರೊನಾದಿಂದಾಗಿ ಕನ್ನಡ ಚಿತ್ರರಂಗ ಹಾಗೂ ಸಿನಿಮಾ ನಿರ್ಮಾಪಕರಿಗೆ ದೊಡ್ಡ ನಷ್ಟವಾಗಿದೆ. ಈ ಕಾರಣಕ್ಕೆ 125 ಸಿನಿಮಾಗಳಿಗೆ ಸಬ್ಸಿಡಿ ಕೊಡ್ತಾ ಇದ್ದೀರಾ. ಈಗ 50 ಸಿನಿಮಾಗಳನ್ನು ಹೆಚ್ಚಿಸುವ ಮೂಲಕ ಒಟ್ಟು 175 ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟಾಗ ಕೆಲ ನಿರ್ಮಾಪಕರಿಗೆ ಸಹಾಯ ಆಗುತ್ತೆ.

ಕಳೆದ ನಾಲ್ಕು ವರ್ಷಗಳಿಂದ‌ ಕನ್ನಡ ಸಿನಿಮಾಗಳಿಗೆ ಜಿಎಸ್​ಟಿ ಹಾಕಲಾಗಿದೆ. ಆ ಜಿಎಸ್​ಟಿ ಹಣವನ್ನು ಆಯಾ ನಿರ್ಮಾಪಕರಿಗೆ ಕೊಡುವಂತೆ ಸಾಕಷ್ಟು ಸಭೆಗಳನ್ನು ಮಾಡಲಾಯಿತು. ಈ ಸಭೆಯ ಚರ್ಚೆಯಂತೆ ಜಿಎಸ್​ಟಿ ಹಣವನ್ನು ನಿರ್ಮಾಪಕರಿಗೆ ಹಿಂದಿರುಗಿಸಿದಾಗ ನಿರ್ಮಾಪಕರಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಸಿನಿಮಾಗಳ ಮೇಲಿನ ವ್ಯಾಟ್​ ತೆರವುಗೊಳಿಸಿ: ಇನ್ನು 2005ರಿಂದ ಸಿನಿಮಾಗಳ ಮೇಲೆ ವ್ಯಾಟ್ ಹಾಕಲಾಗಿದೆ. ಅದನ್ನು 2011ರಿಂದ ತೆಗೆಯುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈ ವ್ಯಾಟ್​ ತೆಗೆದಾಗ ಅದೆಷ್ಟೋ ಸಿನಿಮಾ ನಿರ್ಮಾಪಕರಿಗೆ ಅನುಕೂಲ ಆಗುತ್ತದೆ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಇದನ್ನೂ ಓದಿ: ಧಮ್​ ಇದ್ದರೆ ಮೇಕೆದಾಟು ಯೋಜನೆಗೆ ಏಕೆ ಅನುಮೋದನೆ ಕೊಟ್ಟಿಲ್ಲವೆಂದು ಹೇಳಿ: ಸಿ ಟಿ ರವಿಗೆ ಧ್ರುವನಾರಾಯಣ ಸವಾಲು

25 ಕೋಟಿ ರೂ. ಕ್ಷೇಮನಿಧಿ ಸ್ಥಾಪಿಸಿ: ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ10 ಕೋಟಿ ಕ್ಷೇಮನಿಧಿಯನ್ನು ಸ್ಥಾಪಿಸಲಾಗಿದೆ‌. ಈ 10 ಕೋಟಿ ರೂ.ನಿಂದ ಬರುವ ಬಡ್ಡಿ ಹಣವನ್ನು ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞಾನರು, ವಿತರಕರು ಸೇರಿದಂತೆ ಚಿತ್ರರಂಗದವರಿಗೆ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಯ ಖರ್ಚು ಎಂದು 75 ಸಾವಿರ ರೂ. ಕೊಡಲಾಗುತ್ತಿದೆ. ಇದರಿಂದ 40ಕ್ಕೂ ಹೆಚ್ಚು ಜನರಿಗೆ ಸಹಾಯ ಆಗಿದೆ. ಹೀಗಾಗಿ 10 ಕೋಟಿ ರೂ. ಹಣದ ಜೊತೆಗೆ 15 ಕೋಟಿ ಸೇರಿಸಿ 25 ಕೋಟಿ ಹಣ ಡೇಪಾಸಿಟ್ ಮಾಡಿದಾಗ, ಅದರಿಂದ‌ ಹೆಚ್ಚಿಗೆ ಬಡ್ಡಿ ಹಣ ಬರುತ್ತದೆ, ಇದರಿಂದ ತುಂಬಾ ಜನರಿಗೆ ಅನುಕೂಲ ಆಗುತ್ತೆ ಎಂದರು.

ವಸತಿ ಸೌಲಭ್ಯ ಕಲ್ಪಿಸಿ: ಕನ್ನಡ ಚಿತ್ರರಂಗದ ಎಲ್ಲಾ ವರ್ಗದವರಿಗೆ ವಸತಿ ಕಲ್ಪಿಸುವ ಸೌಲಭ್ಯ ಒದಗಿಸಬೇಕು ಎನ್ನುವುದೂ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳನ್ನು ಜಯರಾಜ್ ಚಿತ್ರರಂಗದ‌ ಪರವಾಗಿ ರಾಜ್ಯ ಸರ್ಕಾರದ ಗಮನಕ್ಕೆ ತಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.