ETV Bharat / state

ಡ್ರಗ್ಸ್​ ಜಾಲದ ಬಗ್ಗೆ ಜಮೀರ್-ಸಂಬರಗಿ ಜಟಾಪಟಿ: ಇಬ್ಬರಿಗೂ ನೋಟಿಸ್ ನೀಡಲು ಪೊಲೀಸರ ನಿರ್ಧಾರ - jamir ahammad latest news

ಸ್ಯಾಂಡಲ್​​ವುಡ್​​ಗೆ ಡ್ರಗ್ಸ್​ ನಂಟು​ ಆರೋಪ ಪ್ರಕರಣ ಸಂಬಂಧ ಶಾಸಕ ಜಮೀರ್ ಅಹಮ್ಮದ್ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಹೀಗಾಗಿ ಸದ್ಯ ಪ್ರಕರಣ ಸಂಬಂಧ ಇಬ್ಬರ ಹೇಳಿಕೆಯನ್ನು ದಾಖಲಿಸಲು ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ.

West Division Police will issue notice to jamir and prashant
ಜಮೀರ್-ಸಂಬರಗಿ ಜಟಾಪಟಿ; ನೋಟಿಸ್ ನೀಡಲು ಪಶ್ಚಿಮ ವಿಭಾಗ ಪೊಲೀಸರು ನಿರ್ಧಾರ
author img

By

Published : Sep 13, 2020, 11:37 AM IST

ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಅವಹೇಳನಕಾರಿಯಾಗಿ ಮಾತಾನಾಡಿರುವ ಆರೋಪದಡಿ ಚಾಮರಾಜಪೇಟೆ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿತ್ತು. ಸದ್ಯ ಈ ಪ್ರಕರಣದಲ್ಲಿ ಇಬ್ಬರಿಗೂ ಪಶ್ಚಿಮ ವಿಭಾಗ ಪೊಲೀಸರು ನೋಟಿಸ್ ನೀಡಲು ನಿರ್ಧರಿಸಿದ್ದಾರೆ.

ಸ್ಯಾಂಡಲ್​​ವುಡ್​​ಗೆ ಡ್ರಗ್ಸ್​ ನಂಟು​ ಆರೋಪ ಪ್ರಕರಣ ಸಂಬಂಧ ಈ ಇಬ್ಬರು ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಹೀಗಾಗಿ ಸದ್ಯ ಪ್ರಕರಣ ಸಂಬಂಧ ಇಬ್ಬರ ಹೇಳಿಕೆಗಳನ್ನು ದಾಖಲಿಸಲು ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ. ಇಂದು ಭಾನುವಾರವಾದ ಕಾರಣ ನಾಳೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವ ದಿನಾಂಕವನ್ನು ಕೂಡಾ ನೋಟಿಸ್​ನಲ್ಲೇ ತಿಳಿಸುವ ಸಾಧ್ಯತೆಯಿದೆ.

ಶಾಸಕ ಜಮೀರ್ ದೂರು ಹಿನ್ನೆಲೆ: ಪ್ರಶಾಂತ್ ಸಂಬರಗಿ ವಿರುದ್ಧ ಎಫ್​ಐಆರ್​

ಡ್ರಗ್ಸ್​ ಜಾಲದ ಕುರಿತು ಪ್ರಶಾಂತ್ ಸಂಬರಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪ್ರಕರಣದ ಆರೋಪಿಗಳ ಜೊತೆ ಶಾಸಕ ಜಮೀರ್ ಅಹಮ್ಮದ್ ಶ್ರೀಲಂಕಾದ ಕೆಸಿನೋಗೆ ತೆರಳಿದ್ದರು. ಹಾಗೆಯೇ ಬಂಧಿತ ಆರೋಪಿಗಳ ಜೊತೆ ಜಮೀರ್ ಸಂಪರ್ಕ ಹೊಂದಿದ್ದಾರೆ ಎನ್ನುವುದು ಸೇರಿದಂತೆ ಹಲವಾರು ವಿಚಾರಗಳ‌ ಬಗ್ಗೆ ಆರೋಪ‌ ಮಾಡಿದ್ರು.

ಸಂಬರಗಿ ಆರೋಪ ವಿರುದ್ಧ ಕಿಡಿಕಾರಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅವರು ಚಾಮರಾಜಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ಐಪಿಸಿ ಸೆಕ್ಷನ್120(B) ಒಳಸಂಚು, 504 ನಕಲಿ ದಾಖಲೆ, 506 ಬೆದರಿಕೆ, 463, 465ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ತನಿಖೆಯ ದೃಷ್ಟಿಯಿಂದ ಪ್ರಶಾಂತ್ ಸಂಬರಗಿ ಹಾಗೂ ಜಮೀರ್ ಅಹಮ್ಮದ್​​ಗೆ ನೋಟಿಸ್ ನೀಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.