ETV Bharat / state

ನಿನ್ನೆ ದಿಲ್ಲಿಗೆ ಹೋಗಿದ್ದೆ, ಹೀಗಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ: ಸತೀಶ್ ಜಾರಕಿಹೊಳಿ - ಆಗಸ್ಟ್ 2ಕ್ಕೆ ಹೈಕಮಾಂಡ್ ಮೀಟಿಂಗ್

ಕೇಂದ್ರ ಸರ್ಕಾರದಿಂದ ಬರಬೇಕಿರುವ ಅನುದಾನದ ಕುರಿತು ಸಮಾಲೋಚಿಸಿದ್ದೇನೆ. ಇದರಿಂದ ನಾನು ನಿನ್ನೆ ದೆಹಲಿಗೆ ಹೋಗಿದ್ದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

Satish Jarakiholi
ಸತೀಶ್ ಜಾರಕಿಹೊಳಿ
author img

By

Published : Jul 28, 2023, 3:21 PM IST

ಬೆಂಗಳೂರು: ''ನಿನ್ನೆ ದಿಲ್ಲಿಗೆ ಹೋಗಿದ್ದೆ, ಹೀಗಾಗಿ ಸಚಿವ ಸಂಪುಟ ಹಾಗೂ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಸಭೆ ಶಾಂತವಾಗಿ ನಡೆದಿದೆ'' ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಳೆದ 10 ವರ್ಷದಿಂದ ಹಲವು ಯೋಜನೆಗಳಿಗೆ ಹಣ ಬಿಡುಗಡೆಯಾಗುವುದು ಕೇಂದ್ರ ಸರ್ಕಾರದಿಂದ ಬಾಕಿ ಇದೆ. ಕೇಂದ್ರ ರಾಜ್ಯ ಹೆದ್ದಾರಿ ಸಂಬಂಧ ಪ್ರಸ್ತಾವನೆಗಳು ಬೇರೆ ಬೇರೆ ರೀತಿ ಇದೆ. ಒನ್ ಟು ಒನ್ ಸಭೆ ಸಕ್ಸಸ್ ಆಗಿಲ್ಲ. ತಿಂಗಳಲ್ಲಿ ಎರಡು ಬಾರಿ ಸಭೆ ಮಾಡಿದ್ವಿ. 20 ಪ್ರಸ್ತಾವನೆಗಳು ಬಾಕಿ ಉಳಿದಿವೆ. ಶಿವಮೊಗ್ಗ, ಗದಗ, ರಾಯಚೂರು ರಿಂಗ್ ರೋಡ್​ಗಳಿಗೆ ಪ್ರಪೋಸಲ್ ಬೇರೆ ಬೇರೆ ಇದೆ. ಬೇರೆ ಮಾದರಿಯಲ್ಲಿ ಪ್ರಸ್ತಾವನೆ ಕಳಿಸಿ ಅಂತಾ ಹೇಳಿದ್ದಾರೆ. ಈ ಬಗ್ಗೆ ಸಿಎಂ ತೀರ್ಮಾನ ಮಾಡಬೇಕು'' ಎಂದರು.

''ಬೆಂಗಳೂರಿನಲ್ಲಿ ಟನಲ್ ನಿರ್ಮಾಣಕ್ಕೆ ಚಿಂತನೆ ಇದೆ. ರಾಷ್ಟ್ರೀಯ ಹೆದ್ದಾರಿಯಿಂದಲೇ ಮಾಡುವ ಚಿಂತನೆ ಇದೆ. ನಮ್ಮಿಂದ ಎನ್​ಒಸಿ ಆಗಬೇಕು ಅಷ್ಟೇ. ಪೀಣ್ಯ, ವೈಟ್ ಫೀಲ್ಡ್, ಕೆ.ಆರ್. ಪುರದಿಂದ ಮೇಕ್ರಿ ಸರ್ಕಲ್​ವರೆಗೆ ಟನಲ್ ಆಗಬೇಕಿದೆ'' ಎಂದು ಸಚಿವರು ಮಾಹಿತಿ ನೀಡಿದರು.

ಶೇ.6 ರಷ್ಟು ವರ್ಗಾವಣೆ ನಾವು ಮಾಡಬಹುದು: ''ನಿನ್ನೆ ದೆಹಲಿಗೆ ಹೋಗಿದ್ದೆ, ಸಿಎಲ್​ಪಿ ಸಭೆ ಶಾಂತವಾಗಿ ನಡೆದಿದೆ. ಪತ್ರ ವಿಚಾರ ಕುರಿತು ಚರ್ಚಿಸಲು ಸಿಎಂ ಇದ್ದಾರೆ. ಹೊಸಬರು ಇದ್ದಾರೆ, ಹಳಬರು ಇದ್ದಾರೆ. ಕೆಲವು ಸಮಸ್ಯೆ ಇದ್ದೇ ಇರುತ್ತೆ. ಇಲ್ಲ ಅಂತ ಹೇಳೋಕೆ ಆಗಲ್ಲ. ನಮಗೂ ಇತಿಮಿತಿ ಇದೆ. ಶೇ.6 ರಷ್ಟು ವರ್ಗಾವಣೆ ನಾವು ಮಾಡಬಹುದು. ಬಾಕಿದು ಸಿಎಂ ಮಾಡಬೇಕು. ಕೆಲವೊಂದಕ್ಕೆ ಶಾಸಕರು ಕನ್ವೀನ್ಸ್ ಆಗೋದಿಲ್ಲ. ಜಿಲ್ಲಾವಾರು ಮೀಟಿಂಗ್ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ನೌಕರರನ್ನ ಏಕಾಏಕಿ ತೆಗೆದು ಹಾಕಲು ಆಗಲ್ಲ'' ಎಂದು ವಿವರಿಸಿದರು.

''ಯಾವುದೋ ಸಂದರ್ಭದಲ್ಲಿ ಲೆಟರ್ ಬರೆದಿರಬಹುದು. ನಾವು ಕೈಗೆ ಸಿಗುತ್ತಿದ್ದೇವೆ. ಬೇರೆ ಬೇರೆ ಕಾರಣಗಳಿಂದ ಅನುದಾನ ಹಂಚಿಕೆ ವಿಳಂಬ ಆಗಿದೆ. ಕೆಲವು ಶಾಸಕರು, ಸಚಿವರು ಕೂಡಿ ವರ್ಗಾವಣೆಗೆ ಪತ್ರ ಕೊಟ್ಟಿದ್ದಾರೆ'' ಎಂದು ಹೇಳಿದರು.

ಆಗಸ್ಟ್ 2ಕ್ಕೆ ಹೈಕಮಾಂಡ್ ಮೀಟಿಂಗ್: ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ''ಅವರು ಪಾರ್ಟ್ ಆಫ್ ಕಾಂಗ್ರೆಸ್ ಫ್ಯಾಮಿಲಿ. ಅವರ ಹೇಳಿಕೆ ಕರ್ನಾಟಕಕ್ಕೆ ಸಂಬಂಧಪಟ್ಟಿಲ್ಲ. ಹರಿಪ್ರಸಾದ್ ಅವರ ಅನುಭವ ಹಂಚಿಕೊಂಡಿದ್ದಾರೆ. ಕೆಲವು ಸಮುದಾಯಗಳಿಗೆ ಅವಕಾಶ ಸಿಗಲಿಲ್ಲ. ಸಿಎಂ ಬದಲಾವಣೆ ಬಗ್ಗೆ ಗೊತ್ತಿಲ್ಲ. ಸಿಎಂ ಅಧಿಕಾರ ಹಂಚಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೈಕಮಾಂಡ್​ಗೆ ಬಿಟ್ಟಿದ್ದು, ನಮ್ಮ ಜೊತೆ ಯಾರೂ ಚರ್ಚೆ ಮಾಡಿಲ್ಲ. ಸಿದ್ದರಾಮಯ್ಯ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದಾರೆ. ನಾನು ಈ ಅವಧಿಯಲ್ಲಿ ಸಿಎಂ ರೇಸ್​ನಲ್ಲಿ ಇಲ್ಲ. ಮುಂದಿನ ಅವಧಿಯಲ್ಲಿ ಇರ್ತೇನೆ ಎಂದು ಹೇಳಿದ್ದೇನೆ'' ಎಂದರು. ಆಗಸ್ಟ್ 2ಕ್ಕೆ ಹೈಕಮಾಂಡ್ ಮೀಟಿಂಗ್ ಕರೆದಿದ್ದಾರೆ. ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಇದೆ ಎಂದು ಸಿಎಂ ಹೇಳಿದ್ದಾರೆ ಎಂಬ ಮಾಹಿತಿ ತಿಳಿಸಿದರು.

ಇದನ್ನೂ ಓದಿ: KPSCಯಲ್ಲಿನ ಸಮನ್ವಯತೆ ಸರಿಪಡಿಸಿ: ಸಿಎಂಗೆ ಪತ್ರ ಬರೆದ ಎಸ್‌.ಸುರೇಶ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.