ಬೆಂಗಳೂರು: ಇಂದು ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಆರಂಭವಾಗುವ ಹಿನ್ನೆಲೆ ಚಿಕ್ಕಪೇಟೆಯ ಎಲೆಕ್ಟ್ರಿಕ್ ಅಂಗಡಿ ಹೊರತು ಪಡಿಸಿ ಉಳಿದ ಎಲ್ಲ ಅಂಗಡಿಗಳು ಬಂದ್ ಆಗಿವೆ.
ನಿನ್ನೆಯಿಂದಲೂ ಅಂಗಡಿಗಳನ್ನ ಮುಚ್ಚಿಸೋ ಕೆಲಸವನ್ನ ಮಾಡಿದ್ದ ಪೊಲೀಸರು, ಇಂದೂ ಕೂಡ ಅಂಗಡಿಗಳನ್ನ ತೆರೆಯದಂತೆ ಕಣ್ಗಾವಲಿರಿಸಿದ್ದಾರೆ. ಇತ್ತ ಅಂಗಡಿ ಓಪನ್ ಆದ್ರೆ ಕೆಲಸ ಮಾಡೋಕೆ ಸಿದ್ದವಾಗಿರೋ ಕಾರ್ಮಿಕರು, ತಮ್ಮ ಅಂಗಡಿಗಳ ಮುಂಭಾಗ ಕಾದು ಕುಳಿತ್ತಿದ್ದಾರೆ. ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಚಿಕ್ಕಪೇಟೆ ರಸ್ತೆಗಳು ಇದೀಗ ಖಾಲಿ ಖಾಲಿಯಾಗಿದ್ದು, ಸಂಪೂರ್ಣ ಮೌನದ ವಾತಾವರಣ ನಿರ್ಮಾಣವಾಗಿದೆ.
ಮತ್ತೊಂದೆಡೆ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಎಸ್ ಪಿ ರಸ್ತೆಯ ಅಂಗಡಿಗಳು ಇದೀಗ ಸಂಪೂರ್ಣ ಖಾಲಿಯಾಗಿವೆ. ಇಲ್ಲಿಯೂ ನಿತ್ಯ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಇರೋದ್ರಿಂದ ಎಲ್ಲವೂ ಬಂದ್ ಆಗಿದೆ. ಸಾಮಾನ್ಯವಾಗಿ ವೀಕೆಂಡ್‌ನಲ್ಲಿ ಭರ್ಜರಿ ವ್ಯಾಪಾರ ಆಗ್ತಿದ್ದ ಏರಿಯಾಗಳು ಇದೀಗ ಖಾಲಿ ಖಾಲಿಯಾಗಿ ಭಣಗುಡುತ್ತಿವೆ.
ಓದಿ: ಕೊರೊನಾ ರಣಕೇಕೆ ನಡುವೆಯೂ ಅದ್ಧೂರಿ ಮದುವೆ... ವಧು-ವರನ ಕುಟುಂಬಗಳ ಮೇಲೆ ಬಿತ್ತು ಕೇಸ್!