ETV Bharat / state

ನಾಳೆಯಿಂದ 2 ದಿನ ವಾರಾಂತ್ಯ ಕರ್ಫ್ಯೂ.. ಏನಿರುತ್ತೆ.. ಏನಿಲ್ಲ..? ಆರ್​​ ಅಶೋಕ್ ಹೇಳಿದ್ದಿಷ್ಟು

author img

By

Published : Apr 23, 2021, 3:31 PM IST

Updated : Apr 23, 2021, 4:01 PM IST

ಎರಡು ಮೂರು ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ. ಕುಮಾರಸ್ವಾಮಿ,ಸಿದ್ದರಾಮಯ್ಯ ಯಾವ ಸಲಹೆ ಕೊಡ್ತಾರೆ, ಅವರು ಕೊಟ್ಟ ಸಲಹೆಗಳ‌ನ್ನ ನಾವು ಕಾರ್ಯರೂಪಕ್ಕೆ‌ ತರುತ್ತೇವೆ.

weekend-curfew-from-tomorrow-which-service-available-you-need-to-now
ಆರ್​​ ಅಶೋಕ್

ಬೆಂಗಳೂರು : ಇಂದು ರಾತ್ರಿ 9 ರಿಂದ ಸೋಮವಾರ 6ರವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಾಗಲಿದೆ. ನಿಯಮಿತ ಚಟುವಟಿಕೆಗಳಿಗೆ ಮಾತ್ರ ಅವಕಾಶ ಇರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ವಾರಾಂತ್ಯ ಕರ್ಫ್ಯೂ ವೇಳೆ ಯಾರೆಲ್ಲ ಓಡಾಡಬಹುದು ಎಂಬ ಬಗ್ಗೆ ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಿದ್ದೇವೆ. ತುರ್ತು ಸೇವೆ ಒದಗಿಸುವವರು ಓಡಾಡಬಹುದು. ತುರ್ತು ಸೇವೆ ಒದಗಿಸುವ ಕಂಪನಿಗಳು, ಟೆಲಿಕಾಂ, ಇಂಟರ್ನೆಟ್ ಸರ್ವೀಸ್​​​ನವರು ಓಡಾಡಬಹುದು. ಕಂಪನಿಯ ಐಡಿ ಕಾರ್ಡ್ ಕಡ್ಡಾಯ ಎಂದರು.

ರೋಗಿಗಳು ಅವರ ಸಹಾಯಕರು ಓಡಾಡಬಹುದು. ವ್ಯಾಕ್ಸಿನ್ ಪಡೆಯುವ ನಾಗರಿಕರು ಓಡಾಡಬಹುದು. ಆಸ್ಪತ್ರೆಗೆ ತೆರಳಲು ಅವಕಾಶವಿದೆ. ದಿನಸಿ, ಹಣ್ಣು, ತರಕಾರಿ, ಮಾಂಸದ ಅಂಗಡಿ ತೆರೆಯಬಹುದು. ಅಗತ್ಯ ಸೇವೆಗಳ ಅಂಗಡಿಗಳನ್ನು ಬೆಳಗ್ಗೆ 9 ರಿಂದ ರಾತ್ರಿ 10ರವರೆಗೆ ತೆರೆಯಬಹುದು.

ನಾಳೆಯಿಂದ 2 ದಿನ ವಾರಾಂತ್ಯ ಕರ್ಫ್ಯೂ

ಇನ್ನು, ರೆಸ್ಟೋರೆಂಟ್‌ನವರು ಪಾರ್ಸೆಲ್ ಕೊಡಬಹುದು. ಬೇರೆ ಜಿಲ್ಲೆ, ರಾಜ್ಯಕ್ಕೆ ಹೋಗುವವರಿಗೆ ಅವಕಾಶವಿದೆ. ಅವರು ಸಾರ್ವಜನಿಕ ಟ್ಯಾಕ್ಸಿ, ಆಟೋ ಬಳಸಬಹುದು. ಆದರೆ, ಅವರು ರೈಲು, ಫ್ಲೈಟ್ ಟಿಕೆಟ್ ತೋರಿಸಬೇಕು ಎಂದು ಸ್ಪಷ್ಟಪಡಿಸಿದರು.

ಮದುವೆ, ಅಂತ್ಯಕ್ರಿಯೆಗೆ ಅವಕಾಶ ಇರಲಿದೆ. ಮದುವೆಗೆ 50, ಅಂತ್ಯಕ್ರಿಯೆಗೆ 20 ಜನ ಮಾತ್ರ ಇರಬೇಕು. ಸಿನಿಮಾ, ಜಿಮ್, ಸ್ಟೇಡಿಯಂ, ಬಾರ್ ತೆರೆಯುವಂತಿಲ್ಲ. ರಾಜಕೀಯ, ಧಾರ್ಮಿಕ ಸಮಾರಂಭಗಳಿಗೆ ನಿಷೇಧವಿದೆ. ಮಸೀದಿ, ಚರ್ಚ್, ದೇಗುಲ ಬಂದ್ ಆಗಲಿದೆ. ಪೂಜಾರಿ, ಮೌಲ್ವಿಗಳಿಗೆ ಮಾತ್ರ ಅವಕಾಶ ಇರಲಿದೆ ಎಂದರು.

ಇನ್ನು, ವಾರಾಂತ್ಯ ಕಟ್ಟಡ ನಿರ್ಮಾಣ ಚಟುವಟಿಕೆಗೆ ಅವಕಾಶ ಇಲ್ಲ. ಎರಡು ದಿನ ಸಂಪೂರ್ಣ ಬಂದ್ ಇರಲಿದೆ. ಅಂತರ್ ಜಿಲ್ಲೆಗೆ ಹೋಗುವವರು ಬಸ್ ಬಳಸಬಹುದು. ರೋಗಿಗಳು ಖಾಸಗಿ ವಾಹನದಲ್ಲಿ ಓಡಾಡಬಹುದು ಎಂದರು.

ಹಳ್ಳಿಗಳಲ್ಲೂ ಶವಸಂಸ್ಕಾರ ಮಾಡಬಹುದು : ಹಳ್ಳಿಗಳಲ್ಲೂ ಶವ ಸಂಸ್ಕಾರ ಮಾಡಬಹುದು. ಈ ಸಂಬಂಧ ಪಿಡಿಒಗಳಿಂದ ಅನುಮತಿ ಪಡೆಯಬೇಕು ಎಂದು ಇದೇ ವೇಳೆ ತಿಳಿಸಿದರು. ಕೋವಿಡ್​​ನಿಂದ ಮೃತಪಟ್ಟವರನ್ನು ದಫನ್ ಮಾಡಬಹುದು. ತಾವರೆಕೆರೆಯಲ್ಲಿ ಶವಸಂಸ್ಕಾರಕ್ಕೆ ಅವಕಾಶ ಮಾಡಲಾಲಾಗಿದೆ. ಕಟ್ಟಿಗೆ ಬಳಸಿ 50 ಶವ ಸುಡಲು ಅವಕಾಶ ಮಾಡಲಾಗಿದೆ.

ಸುಮಾರು 30 ಲೋಡ್ ಕಟ್ಟಿಗೆ ತರಿಸಲಾಗಿದೆ. ಇಂದು 30 ಲೋಡ್ ಕಟ್ಟಿಗೆ ಬರಲಿದೆ. ನೀರಿಗಾಗಿ ಬೋರ್ ವೆಲ್ ಹಾಕಲಾಗಿದೆ. ಆ್ಯಂಬುಲೆನ್ಸ್ ನಿಲ್ಲುವುದಕ್ಕೆ ಟೆಂಟ್ ಹಾಕಿದ್ದೇವೆ. ಬಂದ ಜನರು ಕೂರಲು ಚೇರ್ ಹಾಕಿಸಿದ್ದೇವೆ. ಯಾರು ಮೊದಲು ಬರ್ತಾರೆ ಅವರಿಗೆ ಮೊದಲ ಅವಕಾಶ. ಏಕ ಕಾಲದಲ್ಲಿ 25 ಶವಗಳನ್ನ ಸುಡಬಹುದು. ಬೂದಿ, ಇನ್ನಿತರ ವೇಸ್ಟೇಜ್ ಸಂಗ್ರಹಕ್ಕೆ ಹಳ್ಳವನ್ನು ತೋಡಲಾಗಿದೆ. ಅಲ್ಲಿ ಎರಡು ರಿಸರ್ವ್ ಪೊಲೀಸರ ಭದ್ರತೆ ಇರಲಿದೆ‌. ನಾಳೆಯಿಂದ ಶವ ಸುಡಲು ಸಮಸ್ಯೆಯಾಗಲ್ಲ ಎಂದರು.

ಸ್ಮಶಾನ ಜಾಗ ಗುರುತಿಸಲಾಗಿದೆ : ಮತ್ತೊಂದು ಕಡೆ 50 ಎಕರೆ ಭೂಮಿ ಗುರುತಿಸಿದ್ದೇವೆ. ಅಲ್ಲಿ ಸೋಮವಾರದಿಂದ ಶವ ಸುಡಲು ವ್ಯವಸ್ಥೆಯಾಗಲಿದೆ. ಬೇರೆ ಜಿಲ್ಲೆಗಳಲ್ಲೂ ಶವ ಸಂಸ್ಕಾರಕ್ಕೆ ಸೂಚಿಸಿದ್ದೇನೆ. ಗೋಮಾಳ ಭೂಮಿಯಲ್ಲಿ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.

ಈಗಾಗಲೇ ಡಿಸಿಗಳಿಗೆ ಈ ಸಂಬಂಧ ಸೂಚಿಸಿದ್ದೇನೆ. ಎರಡು ಮೂರು ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಯಾವ ಸಲಹೆ ಕೊಡ್ತಾರೆ, ಅವರು ಕೊಟ್ಟ ಸಲಹೆಗಳ‌ನ್ನ ನಾವು ಕಾರ್ಯರೂಪಕ್ಕೆ‌ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.

Last Updated : Apr 23, 2021, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.