ETV Bharat / state

ಸಿಎಂ ಆಗಲು ಯಾವುದೇ ಷರತ್ತು ವಿಧಿಸಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಆಡಳಿತ ನೀಡುವೆ: ಬೊಮ್ಮಾಯಿ - ಕರ್ನಾಟಕ ನೂತನ ಸಿಎಂ

ನೂತನ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದರು. ಈ ವೇಳೆ ಸಿಎಂ ಸ್ಥಾನ ನೀಡಲು ನನಗೆ ಯಾವುದೇ ರೀತಿಯ ಷರತ್ತು ವಿಧಿಸಿಲ್ಲ ಎಂದು ತಿಳಿಸಿದ್ದಾರೆ.

Basavaraj Bommai
Basavaraj Bommai
author img

By

Published : Jul 27, 2021, 10:02 PM IST

ಬೆಂಗಳೂರು: ಮುಖ್ಯಮಂತ್ರಿ ಆಗಲು ನನಗೆ ಯಾವುದೇ ಷರತ್ತು ವಿಧಿಸಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಆಡಳಿತ ನೀಡುತ್ತೇನೆ. ರಾಜ್ಯದಲ್ಲಿ ಉಂಟಾಗಿರುವ ನೆರೆ, ಕೊರೊನಾಗೆ ಮೊದಲ ಆದ್ಯತೆ ನೀಡುತ್ತೇನೆಂದು ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಆಡಳಿತ ನೀಡುವೆ: ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಸೇರಿದಂತೆ ಎಲ್ಲ ನಾಯಕರು ಸಂಸದೀಯ ಮಂಡಳಿ ಸಭೆಯಲ್ಲಿ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಇದಾದ ನಂತರವೇ ಅಂತಿಮ ತೀರ್ಮಾನ ಮಾಡಿದ್ದಾರೆ. ಅದಕ್ಕೆ ನಮ್ಮ ಪಕ್ಷ ಸಂಪೂರ್ಣ ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ನನ್ನನ್ನು ಆಯ್ಕೆ ಮಾಡಿದೆ. ಯಡಿಯೂರಪ್ಪನವರು ಅವಕಾಶ ನೀಡಿ ಆಶೀರ್ವಾದ ಮಾಡಿದ್ದಾರೆ. ಪಕ್ಷದ ಎಲ್ಲ ಹಿರಿಯ ನಾಯಕರು, ಎಲ್ಲ ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಅವರೆಲ್ಲರಿಗೂ ಹೃದಯಸ್ಪರ್ಶಿ ಧನ್ಯವಾದಗಳು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಜನ ಬಿಜೆಪಿ ಮೇಲೆ ವಿಶ್ವಾಸ, ನಿರೀಕ್ಷೆ ಇಟ್ಟಿದ್ದಾರೆ. ನಮ್ಮ ಪಕ್ಷದ ನಾಯಕರು ಕೂಡ ನಿರೀಕ್ಷೆ ಇಟ್ಟಿದ್ದಾರೆ. ಜನಪರ, ಜನರಿಗೋಸ್ಕರ ಆಡಳಿತ ನೀಡುತ್ತೇನೆ. ರಾಜ್ಯವನ್ನ ಎಲ್ಲ ರಂಗದಲ್ಲಿಯೂ ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಶ್ರಮಿಸುತ್ತೇನೆ ಎಂದರು. ಶಾಸಕರು, ಸಚಿವರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಡ ಜನರ ಸಂಕಷ್ಟಕ್ಕೆ ಸ್ಪಂದಿಸುವೆ ಎಂದಿರುವ ಅವರು, ನೆರೆ ಕೊರೊನಾ ಸಂಕಷ್ಟಕ್ಕೆ ಮೊದಲ ಆಧ್ಯತೆ ನೀಡುವುದಾಗಿ ಹೇಳಿದರು. ನಾಡಿನ ಅಭಿವೃದ್ಧಿಗೆ ಹಗಲಿರುಳು ಕೆಲಸ ಮಾಡುವುದಾಗಿ ಭರವಸೆ ನೀಡಿರುವ ನೂತನ ಸಿಎಂ,ಹಣಕಾಸು ಸ್ಥಿತಿ ಸುಧಾರಿಸಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದರು.
ಪಕ್ಷದ ನಾಯಕರು ನನಗೆ ಆಶೀರ್ವಾದ ಮಾಡಿದ್ದು, ಅದಕ್ಕೆ ತಕ್ಕಂತೆ ನಾನು ಜನಸೇವೆ ಮಾಡುತ್ತೇನೆ. ಇದಕ್ಕೆ ಬಿಜೆಪಿ ಹೈಕಮಾಂಡ್​ ನನಗೆ ಯಾವುದೇ ರೀತಿಯ ಷರತ್ತನ್ನು ವಿಧಿಸಿಲ್ಲ, ಪಕ್ಷದ ಸಲಹೆ ಸೂಚನೆಯಂತೆ ಮುನ್ನಡೆಯುತ್ತೇನೆ ಎಂದರು.

ರಾಜ್ಯ ಪ್ರವಾಸ ಮಾಡುತ್ತೇನೆ: ಬಸವರಾಜ ಬೊಮ್ಮಾಯಿ
ರಾಜ್ಯ ನೆರೆ ಸಮಸ್ಯೆಯಿಂದ ಬಳಲುತ್ತಿದ್ದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ನೆರೆಪೀಡಿತ ಪ್ರದೇಶಗಳ ಪ್ರವಾಸ ಮಾಡುತ್ತೇನೆ ಎಂದು ನಿಯೋಜಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನಾಳೆ ಮುಖ್ಯಮಂತ್ರಿಯಾಗಿ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದೇನೆ. ನನ್ನ ಜೊತೆ ಬೇರೆ ಯಾವುದೇ ಮಂತ್ರಿಗಳು ಇಲ್ಲವೇ ಉಪಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತೇನೆ. ರಾಜ್ಯದಲ್ಲಿ ಶಾಂತಿ ಸುಭಿಕ್ಷತೆ ಕಾಪಾಡಿಕೊಂಡು ಆಡಳಿತ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಬಿಎಸ್​ವೈ ಮಾರ್ಗದರ್ಶನ
ಬಿಎಸ್ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇನೆ. ಅವರ ಅನುಭವದ ಬಳಕೆ ಮಾಡಿಕೊಂಡು ಉತ್ತಮ ಆಡಳಿತ ನೀಡುತ್ತೇನೆ. ನಾನು ಶಾಸಕಾಂಗ ಪಕ್ಷದ ನಾಯಕನಾಗಿ ಕೆಲಸ ಮಾಡುತ್ತೇನೆ. ಯಡಿಯೂರಪ್ಪ ಅವರ ಹೆಜ್ಜೆಯಲ್ಲಿ ಹೆಜ್ಜೆ ಇಟ್ಟು‌ ಹೋಗುತ್ತೇನೆ. ಅವರು ರೂಪಿಸಿದ ಎಲ್ಲ ಯೋಜನೆ ಅನುಷ್ಠಾನ ಮಾಡುತ್ತೇನೆ. ಬಡ ಜನರ ಪರ ನ್ಯಾಯಸಮ್ಮತ ಆಡಳಿತ ನೀಡುವ ಸಂಕಲ್ಪ ಮಾಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.