ETV Bharat / state

ಜನರ ಬದುಕು ಕಟ್ಟುವಂತಹ ಪ್ರಣಾಳಿಕೆ ನೀಡುತ್ತೇವೆ: ಸಚಿವ ಡಾ.ಸುಧಾಕರ್ - Manifesto for development of all classes

ಮುಂಬರುವ ವಿಧಾನಸಭೆ ಚುನಾವಣೆ ಪ್ರಣಾಳಿಕೆ ವಿಚಾರವಾಗಿ ರಾಜ್ಯ ಬಿಜೆಪಿ ಪ್ರಣಾಳಿಕೆ ರಚನಾ ಸಮಿತಿ ಸಂಚಾಲಕ ಹಾಗು ಸಚಿವ ಡಾ.ಸುಧಾಕರ್ ಮಾತನಾಡಿದರು.

Minister Dr Sudhakar
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಿಂದ ಪ್ರಣಾಳಿಕೆ ಸಿದ್ಧತಾ ಸಭೆ ನಡೆಯಿತು
author img

By

Published : Feb 10, 2023, 6:51 PM IST

ಬೆಂಗಳೂರು: ''ಪ್ರತಿಪಕ್ಷಗಳು ಜನರನ್ನು ದಿಕ್ಕು ತಪ್ಪಿಸುವ ಪ್ರಣಾಳಿಕೆ ಕೊಟ್ಟಿವೆ. ಆದರೆ, ನಾವು ಜನರ ಬದುಕು ಕಟ್ಟುವಂತಹ ಪ್ರಣಾಳಿಕೆ ನೀಡುತ್ತೇವೆ. ಜನರಿಂದ, ಜನರಿಗಾಗಿ, ಜನರಿಗೋಸ್ಕರ ಬಿಜೆಪಿ ಪ್ರಣಾಳಿಕೆ ಇರಲಿದೆ'' ಎಂದು ಸಚಿವ ಡಾ.ಸುಧಾಕರ್ ಹೇಳಿದರು. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿಂದು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನಯಲ್ಲಿ ಪ್ರಣಾಣಿಕೆ ಸಿದ್ಧತಾ ಸಭೆ ನಡೆಯಿತು. ಸಮಿತಿ ಸದಸ್ಯರಾದ ಶಾಸಕ ರಾಜೀವ್, ರಾಜ್‌ಕುಮಾರ್ ಪಾಟೀಲ್ ತೇಲ್ಕೂರ್, ಸುರೇಶ್ ಕುಮಾರ್, ಮಾಳವಿಕಾ ಅವಿನಾಶ್ ಸೇರಿದಂತೆ ಹಲವರು ಪ್ರಣಾಳಿಕೆ ಸ್ವರೂಪದ ಕುರಿತು ಸಮಾಲೋಚನೆ ನಡೆಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸುಧಾಕರ್, ''ಜಿಲ್ಲಾವಾರು, ತಾಲ್ಲೂಕುವಾರು ತಂಡಗಳಲ್ಲಿ ಯಾರೆಲ್ಲ ಇರಬೇಕು ಎನ್ನುವ ನಿರ್ಣಯ ಹಾಗೂ ಜನರ ಆಶೋತ್ತರಗಳಿಗೆ ತಕ್ಕಂತೆ ಪ್ರಣಾಳಿಕೆ ಇರಬೇಕು ಎಂದು ನಿರ್ಧರಿಸಿದ್ದೇವೆ. ಜನರ ಅಭಿಪ್ರಾಯ, ಆಶೋತ್ತರ ಏನೆಂದು ಕೇಳುತ್ತೇವೆ. ಜನರಿಗೋಸ್ಕರ ಪ್ರಣಾಳಿಕೆ ಸಿದ್ಧಪಡಿಲಾಗುವುದು" ಎಂದರು.

''ಇವತ್ತು ಹಾಗೂ ನಾಳೆ ಪ್ರಣಾಳಿಕೆಯ ಶೀರ್ಷಿಕೆ ಅಂತಿಮಗೊಳಿಸಲಾಗುವುದು. ಮಹಿಳೆಯರು, ಮಕ್ಕಳು, ಹಿರಿಯರು, ವಿಶೇಷಚೇತನರು, ದುರ್ಬಲರಿಗೆ ಯಾವೆಲ್ಲ ಕಾರ್ಯಕ್ರಮಗಳನ್ನು ಕೊಡಬೇಕು ಎಂದು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರತಿಪಕ್ಷಗಳು ಜನರನ್ನು ದಿಕ್ಕು ತಪ್ಪಿಸುವ ಪ್ರಣಾಳಿಕೆ ಕೊಟ್ಟಿವೆ. ಆದ್ರೆ, ನಾವು ಜನರ ಜೀವನವನ್ನು ಕಟ್ಟಲು ಪೂರಕವಾದಂತೆ ಪ್ರಣಾಳಿಕೆ ಕೊಡುತ್ತೇವೆ'' ಎಂದು ಭರವಸೆ ನೀಡಿದರು.

''ಸೋಮವಾರ ಮತ್ತೆ ಪಕ್ಷದ ಕಚೇರಿಯಲ್ಲಿ ಎಲ್ಲರೂ ಸೇರುತ್ತಿದ್ದೇವೆ. ಅವತ್ತು ರಾಜ್ಯದ 200ಕ್ಕೂ ಹೆಚ್ಚು ಪ್ರಮುಖರ ಜೊತೆ ಚರ್ಚಿಸಿ, ಪ್ರಣಾಳಿಕೆ ಅಂಶಗಳ ಬಗ್ಗೆ ಅಭಿಪ್ರಾಯ ಪಡೆಯುತ್ತೇವೆ. ಇವತ್ತು ಒಳ್ಳೆಯ ಸಲಹೆಗಳ ಕುರಿತು ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಯುವಕರು, ವಿಶೇಷಚೇತನರು ಸೇರಿ ಎಲ್ಲಾ ವರ್ಗದವರ ಅಭಿವೃದ್ಧಿಗಾಗಿ ಪ್ರಣಾಳಿಕೆ ತಯಾರಿಸುತ್ತಿದ್ದೇವೆ. ಯಡಿಯೂರಪ್ಪ ಇದ್ದಂತಹ ಆಡಳಿತದಲ್ಲಿ, ಬೊಮ್ಮಾಯಿ ಆಡಳಿತದಲ್ಲಿ ಘೋಷಣೆ ಮಾಡಿದ ರೀತಿಯಲ್ಲೇ ಮುಂದಿನ 5 ವರ್ಷಗಳಲ್ಲಿ ಕಾರ್ಯಕ್ರಮಗಳು ಇರಬೇಕು. ಮಹತ್ವದ ಯೋಜನೆಗಳ ಒಳಗೊಂಡಿರುವ ಪ್ರಣಾಳಿಕೆ ಸಿದ್ಧ ಮಾಡುತ್ತೇವೆ'' ಎಂದು ತಿಳಿಸಿದರು.

ಕಾಂಗ್ರೆಸ್​ನವರು ಮಾಡುವಂಥದ್ದು ಜನರು ದಿಕ್ಕುತಪ್ಪಿಸುವ ಯೋಜನೆಗಳು. ಅವರ ಕಾಲದಲ್ಲಿ ಯಾವಾಗ ಫ್ರೀಯಾಗಿ ವಿದ್ಯುತ್ ಕೊಟ್ಟಿದ್ದಾರೆ? ಈ ರೀತಿಯ ಯೋಜನೆಗಳನ್ನು ನಿಜಕ್ಕೂ ಕೊಡೋಕೆ ಸಾಧ್ಯನಾ? ಹೋಗಲಿ, ರಾಜ್ಯವನ್ನು ಏನು ಮಾಡಬೇಕು ಅಂದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಉಚಿತ ವಿದ್ಯುತ್, 2000 ರೂ. ಉಚಿತ ಯೋಜನೆಗೆ ಸುಧಾಕರ್ ಟಾಂಗ್ ನೀಡಿದರು.

ಎಚ್​.ಡಿ. ಕುಮಾರಸ್ವಾಮಿಗೆ ಸವಾಲು: ''ಕುಮಾರಸ್ವಾಮಿಗೆ ತಾಕತ್ ಇದ್ದರೆ, ಮುಸ್ಲಿಂ ಅಭ್ಯರ್ಥಿ ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ" ಎಂದು ಸವಾಲು ಹಾಕಿದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಬಿ.ಸಿ.ನಾಗೇಶ್, ಮೂಳೆ ಇಲ್ಲದ ನಾಲಿಗೆಯ ಮಾತಿಗೆಲ್ಲ ಉತ್ತರ ಕೊಡೋಕೆ ಆಗುತ್ತಾ ಎಂದರು. ಅಲ್ಲದೇ ಪ್ರಹ್ಲಾದ್​ ಜೋಷಿ ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಲಿ ಎಂದು ಸವಾಲು ಹಾಕಿದ್ದ ಕುಮಾರಸ್ವಾಮಿಗೆ ಇಬ್ಬರೂ ಸಚಿವರು ತೀಕ್ಷ್ಣ ತಿರುಗೇಟು ಕೊಟ್ಟರು.

ಇದನ್ನೂ ಓದಿ: ಸಚಿವ ಸುಧಾಕರ್ ವಿರುದ್ಧದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.