ETV Bharat / state

ಜೆಒಸಿ ಅರೆಕಾಲಿಕ ಶಿಕ್ಷಕರ ಸಂಕಷ್ಟ ನಿವಾರಣೆಗೆ ಪರಿಷತ್ ಸದಸ್ಯರ ಜೊತೆ ಚರ್ಚಿಸಿ ಕ್ರಮ: ನಾಗೇಶ್​ - minister Nagesh

ಪಕ್ಷಾತೀತವಾಗಿ ಸದಸ್ಯರು ಅರೆಕಾಲಿಕ ಶಿಕ್ಷಕರ ಪರವಾಗಿ ಧ್ವನಿ ಎತ್ತಿದರು. ಸಮಸ್ಯೆಯಲ್ಲಿರುವ ಶಿಕ್ಷಕರ ಅನುಕೂಲಕ್ಕೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು.

We will Discussion about hardships of JOC part-time teachers: Nagesh
ನಾಗೇಶ್​
author img

By

Published : Sep 16, 2021, 7:28 AM IST

ಬೆಂಗಳೂರು: ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇದೀಗ ಬೇರೆ ಇಲಾಖೆಯಲ್ಲಿ ವಿಲೀನಗೊಂಡಿರುವ ಶಿಕ್ಷಕರ ಸಮಸ್ಯೆ ಕುರಿತು ವಿಧಾನಪರಿಷತ್ ಸದಸ್ಯರ ಜೊತೆ ಪ್ರತ್ಯೇಕ ಚರ್ಚೆ ನಡೆಸಿ ಪರಿಹಾರ ಹುಡುಕುವುದು ಶಿಕ್ಷಣ ಸಚಿವ ಬಿಸಿ ನಾಗೇಶ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ, ಶಶೀಲ್ ಜಿ.ನಮೋಶಿ, ಅರುಣ ಶಹಾಪೂರ, ಕೆ.ಟಿ. ಶ್ರೀಕಂಠೇಗೌಡ ಹಾಗೂ ಇತರರು ನಿಯಮ 72 ರ ಅಡಿ ನೀಡಿರುವ ಸೂಚನಾ ಪತ್ರದಲ್ಲಿ, ವೃತ್ತಿ ಶಿಕ್ಷಣ (ಜೆಓಸಿ) ಇಲಾಖೆಯಲ್ಲಿ ಕಳೆದ 20, 25 ವರ್ಷಗಳಿಂದ ಸೇವೆ ಸಲ್ಲಿಸಿದ ಶಿಕ್ಷಕರನ್ನು 2011 ರ ಏ.6ರ ವಿಶೇಷ ವಿಧೇಯಕದನ್ವಯ ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಲಾಗಿದೆ. ಆದರೆ, ವಿಧೇಯಕದಲ್ಲಿ ಖಾಯಂ ಪೂರ್ಣ ಸೇವೆಯನ್ನು ಪರಿಗಣಿಸಿರುವುದಿಲ್ಲ.

ಇದರಿಂದ ಸದರಿ ಶಿಕ್ಷಕರಿಗೆ/ಸಿಬ್ಬಂದಿಗೆ ಯಾವುದೇ ನಿವೃತ್ತಿ ನಂತರ ಪಿಂಚಣಿ ದೊರೆಯುವುದಿಲ್ಲ. ಆದ್ದರಿಂದ, ವಿಧೇಯಕ ತಿದ್ದುಪಡಿ ಮಾಡಿ ನಿಶ್ಚಿತ ಪಿಂಚಣಿ ನೀಡುವಂತೆ ಹಾಗೂ ವಿಲೀನಗೊಂಡು ಬಾಕಿ ಇರುವ 11 ಜನ ಉಪನ್ಯಾಸಕರಿಗೆ ಹಾಗೂ 26 ಬೋಧಕೇತರ ಸಿಬ್ಬಂದಿಗೆ ಆದೇಶ ನೀಡಿರುವುದಿಲ್ಲ.

ಇವರಿಗೆ ಆದೇಶ ನೀಡುವಂತ ಮತ್ತು ಪದವಿ ಪೂರ್ವ ಶಿಕ್ಷಣ ಸರ್ಕಾರಿ ಕಾಲೇಜುಗಳಲ್ಲಿ ವಿಲೀನಗೊಂಡ 90 ಉಪನ್ಯಾಸಕರಿಗೆ ಬಿಇಡಿ ವಿನಾಯಿತಿ ನೀಡಿ ಖಾಯಂ ಪೂರ್ವ ಅವಧಿ ಘೋಷಣೆ ಮಾಡಿ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಪ್ರಸ್ತಾಪಿಸಿರುವ ಕುರಿತು ಪ್ರಸ್ತಾಪಿಸಿದರು.

ಇದನ್ನೂ ಓದಿ: ಗ್ರಾ.ಪಂ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರ ವೇತನ ಹೆಚ್ಚಳ ಸಂಬಂಧ ಪರಿಷತ್​ನಲ್ಲಿ ಸುದೀರ್ಘ ಚರ್ಚೆ

ಸಚಿವರು ನೀಡಿದ ಉತ್ತರ ಏನು?

ಇದಕ್ಕೆ ಉತ್ತರ ನೀಡಿದ ಸಚಿವರು, ಕರ್ನಾಟಕ ರಾಜ್ಯದಲ್ಲಿನ ಪದವಿ ಪೂರ್ವ ಶಿಕ್ಷಣದಲ್ಲಿರುವ ವೃತ್ತಿ ಆಧಾರಿತ ಕೋರ್ಸುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸುಗಳ ನೌಕರರನ್ನು ವಿಲೀನಗೊಳಿಸುವ ಅಧಿನಿಯಮ ಜಾರಿಗೆ ಬಂದಿದ್ದು, ಈ ವಿಧೇಯಕದಲ್ಲಿ ವಿಧಿಸಿರುವ ಷರತ್ತುಗಳ ಆಧಾರದ ಮೇಲೆ ವೃತ್ತಿ ಶಿಕ್ಷಣ ಇಲಾಖೆಯಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನ್ಯಾಸಕರನ್ನು ವಿಲೀನ ವಿಧೇಯಕದನ್ವಯ 05 ವರ್ಷಗಳ ಸೇವೆ ಸಲ್ಲಿಸಿರುವ ನೌಕರರುಗಳನ್ನು ವಿವಿಧ ಇಲಾಖೆಗಳಲ್ಲಿ ವಿಲೀನಗೊಳಿಸಲಾಗಿದೆ.

ವಿಲೀನಗೊಂಡ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸುಗಳ ನೌಕರನು ಕರ್ತವ್ಯಕ್ಕೆ ಹಾಜರಾದ ನಂತರ ಈ ಅಧಿನಿಯಮದ ಅಡಿ ಆತನ ಪ್ರಾರಂಭಿಕ ಮೂಲ ವೇತನವನ್ನು ಆತನು ವಿಲೀನಗೊಂಡ ಹುದ್ದೆಯ ಪ್ರವರ್ಗದ ಕಾಲಿಕ ವೇತನ ಶ್ರೇಣಿಯ ಕನಿಷ್ಠಕ್ಕೆ ನಿಗದಿಗೊಳಿಸತಕ್ಕದ್ದು. ಹಾಗೂ ತನ್ನ ವಿಲೀನಕ್ಕೆ ಮೊದಲು ನಲ್ಲಿಸಿದ ಸೇವೆಯನ್ನು ವೇತನ, ಜೇಷ್ಠತ ಹಾಗೂ ರಜೆ ಅಥವಾ ಪಿಂಚಣಿಗೆ ಸಂಬಂಧಿಸಿದಂತೆ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದಲ್ಲ ಎಂಬ ಷರತ್ತನ್ನು ವಿಧೇಯಕದಲ್ಲಿ ವಿಧಿಸಲಾಗಿದೆ.

ಅಲ್ಲದೇ, ಕರ್ನಾಟಕ ಅರಕಾಲಿಕ ವೃತ್ತಿ ಆಧಾರಿತ ಕೋರ್ಸುಗಳ ನೌಕರರುಗಳನ್ನು ವಿಲೀನಗೊಳಿಸುವ ಅಧಿನಿಯಮದಲ್ಲಿ ಇವರನ್ನು ಅರೆಕಾಲಿಕ ನೌಕರರೆಂದು ಗುರುತಿಸಲಾಗಿದ್ದು, ಇವರಿಗೆ ಪಿಂಚಣಿ ಸೌಲಭ್ಯ ನೀಡುವ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಪಕ್ಷಾತೀತವಾಗಿ ಧ್ವನಿ ಎತ್ತಿದ ಶಾಸಕರು

ಪಕ್ಷಾತೀತವಾಗಿ ಸದಸ್ಯರು ಅರೆಕಾಲಿಕ ಶಿಕ್ಷಕರ ಪರವಾಗಿ ಧ್ವನಿ ಎತ್ತಿದರು. ಸಮಸ್ಯೆಯಲ್ಲಿರುವ ಶಿಕ್ಷಕರ ಅನುಕೂಲಕ್ಕೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿದರು. ಅಂತಿಮವಾಗಿ ಸಚಿವರು ಒತ್ತಡಕ್ಕೆ ಮಣಿದು ಪರಿಷತ್ ಸದಸ್ಯರು ಪ್ರತ್ಯೇಕವಾಗಿ ಈ ವಿಚಾರವಾಗಿ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.