ಬೆಂಗಳೂರು: ಡಿ.ಕೆ.ಸುರೇಶ್ಗೆ ಇಡಿ ನೋಟಿಸ್ ಕೊಟ್ಟಿದ್ದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಡಿಕೆಶಿ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಇಡಿ ಇದೆ, ಕಾನೂನು ಇದೆ. ಅದನ್ನು ಅವರೇ ನೋಡ್ಕೋತಾರೆ. ಇಡಿ ಕಾನೂನು ಪ್ರಕಾರ ಕ್ರಮ ವಹಿಸಲಿದೆ. ಡಿಕೆಶಿ, ಡಿ.ಕೆ.ಸುರೇಶ್ ಅವರೇ ಕಾನೂನು ಹೋರಾಟ ಮಾಡೋದಾಗಿ ಹೇಳಿದ್ದಾರೆ. ನೋಟಿಸ್ಗೆ ಅವರೇ ಉತ್ತರ ಕೊಡುತ್ತಾರೆ. ತಪ್ಪು ಮಾಡಿದ್ರೆ ಕಾನೂನು ಕ್ರಮ ಎದುರಿಸ್ತಾರೆ. ತಪ್ಪು ಮಾಡಿಲ್ಲ ಅಂದ್ರೆ ಹೊರಗೆ ಬರ್ತಾರೆ ಎಂದರು.
ಅನರ್ಹ ಶಾಸಕರ ಸಂಬಂಧ ಪ್ರತಿಕ್ರಿಯಿಸಿದ ಆರ್.ಅಶೋಕ್, ಅವರಿಗೆ ಒಳ್ಳೆಯದಾಗುತ್ತೆ ಎಂದರು. ಇನ್ನು ನನ್ನದು ತಂತಿಯ ಮೇಲಿನ ನಡಿಗೆ ಎಂಬ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಯಡಿಯೂರಪ್ಪ ಜೊತೆ ನಾವಿದ್ದೇವೆ. ಅವರಿಗೆ ನಾವು ಬೆಂಬಲ ಕೊಡುತ್ತೇವೆ ಎಂದು ಹೇಳಿದರು.
ಫೋನ್ ಟ್ಯಾಪಿಂಗ್:
ಸಿಬಿಐ ತನಿಖೆ ಆಗುತ್ತಿದೆ. ಸತ್ಯ ಹೊರಗೆ ಬರಲಿದೆ. ಅವರು ತಪ್ಪು ಮಾಡದೇ ಇದ್ದರೆ ಭಯ ಪಡುವ ಅಗತ್ಯ ಇಲ್ಲ. ಯಾವ ಸರ್ಕಾರ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಿದೆಯೋ ಆ ಸರ್ಕಾರ ಅಕ್ಷಮ್ಯ ಅಪರಾಧ ಮಾಡಿದಂತೆ ಅಂತ ಹೇಳಿದ್ದೇನೆ. ಆದರೆ ನಿರ್ಧಿಷ್ಟವಾಗಿ ಯಾವ ಸರ್ಕಾರ ಅಂತ ನಾನು ಹೇಳಿಲ್ಲ. ನಮ್ಮ ಸಮುದಾಯದ ಸ್ವಾಮೀಜಿ ಅವರು. ಹೀಗಾಗಿ ಅವರ ಪರ ಮಾತನಾಡಿದ್ದೇನೆ ಎಂದರು.