ಬೆಂಗಳೂರು: ನಿನ್ನೆ ವಿಶ್ವಾಸಮತದಲ್ಲಿ ಸೋತಿರುವ ಬಗ್ಗೆ ತಮಗೆ ಯಾವುದೇ ವಿಷಾಧವಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.
ವಿಶ್ವಾಸ ಮತ ಸೋಲಿನ ಹಿನ್ನೆಲೆ, ಹೆಚ್.ಡಿ.ದೇವೇಗೌಡ ಇಂದು ನಿರ್ಗಮಿತ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಇನ್ನಿತರ ನಾಯಕರ ಜೊತೆ ಮಹತ್ವದ ಸಭೆ ನಡೆಸಿದರು. ಆ ಬಳಿಕ ಮಾತನಾಡಿದ ಹೆಚ್ಡಿಡಿ, ನಿನ್ನೆ ಕುಮಾರಸ್ವಾಮಿ ವಿಶ್ವಾಸಮತ ಗೆಲ್ಲುವಲ್ಲಿ ವಿಫಲವಾಗಿರುವುದಕ್ಕೆ ಯಾವುದೇ ಬೇಸರ ಇಲ್ಲ. ಮೈತ್ರಿ ಸರ್ಕಾರ ಬಿದ್ದು ಹೋಗಿರುವ ಬಗ್ಗೆ ನಮಗೆ ಯಾವುದೇ ದುಃಖವೂ ಇಲ್ಲ. ಈ ಸಂಬಂಧ ನಾವು ಯಾರನ್ನೂ ದೂರುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು,ನಾನಷ್ಟೇ ಅಲ್ಲ. ನಿರ್ಗಮಿತ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವರು ಪಕ್ಷದ ಹಿರಿಯ ನಾಯಕರಿಗೂ ಈ ಬಗ್ಗೆ ಯಾವುದೇ ಬೇಸರ ಇಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಅಷ್ಟೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ ಎಂದು ದೇವೇಗೌಡರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.