ಬೆಂಗಳೂರು: ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬೆತ್ತನಗೆರೆ ಶಂಕರನನ್ನು ಸೇರಿಸಿಕೊಳ್ಳುವ ಮೂಲಕ ನಮ್ಮಿಂದ ತಪ್ಪಾಗಿದೆ. ಅದನ್ನು ನಾನೂ ಒಪ್ಪುತ್ತೇನೆ. ಶಂಕರ ಈಗ ಪಕ್ಷದಲ್ಲಿ ಸಕ್ರಿಯನಾಗಿಲ್ಲ. ಅವರನ್ನು ತೆಗೆದುಹಾಕೋದು ಬಿಡೋದು ಪಾರ್ಟಿ ಅಧ್ಯಕ್ಷರಿಗೆ ಅಧಿಕಾರ ಇರುತ್ತದೆ. ಆತ ಯಾರು ಅನ್ನೋದು ನನಗೆ ಗೊತ್ತಿರಲಿಲ್ಲ, ಇದರ ಬಗ್ಗೆ ಅಧ್ಯಕ್ಷರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಡಿ.18 ಬಿಜೆಪಿ ಪ್ರಕೋಷ್ಠಗಳ ಶಕ್ತಿ ಸಂಗಮ ಸಮಾವೇಶ: ಶಕ್ತಿ ಸಂಗಮದ ಹೆಸರಲ್ಲಿ ಎಲ್ಲಾ ಪ್ರಕೋಷ್ಠಗಳ ಸಮಾವೇಶ, ಇದೇ ತಿಂಗಳ 18ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಬಿಜೆಪಿ ಮುಖಂಡ ಭಾನುಪ್ರಕಾಶ್ ವಿವರಿಸಿದರು.
ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಟ್ಟು 20 ಪ್ರಕೋಷ್ಠಗಳಿವೆ. ಕಾರ್ಯಕ್ರಮ ಉದ್ಘಾಟನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆಗಮಿಸಲಿದ್ದಾರೆ. ಸಮಾರೋಪ ಭಾಷಣವನ್ನು ಬಿ ಎಲ್ ಸಂತೋಷ್ ಮಾಡಲಿದ್ದಾರೆ ಎಂದು ತಿಳಿಸಿದರು.
ಸುಮಾರು 15 ಸಾವಿರ ಜನ ಸೇರುವ ನಿರೀಕ್ಷೆ: 39 ಕಡೆಗಳಲ್ಲಿ ನಾವು ಸಮಾವೇಶ ನಡೆಸಿದ್ದೇವೆ. ಕಾರ್ಯಕರ್ತರಿಗೆ ತರಬೇತಿಯನ್ನು ಕೊಟ್ಟಿದ್ದೇವೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು. ಅವರಿಗೆ ತಲುಪಿಸುವ ಹೊಣೆ ಪ್ರಕೋಷ್ಠ ಮಾಡಲಿದೆ. ಎಲ್ಲಾ ವೃತ್ತಿವಂತರ ಸಮಾವೇಶ 18 ರಂದು ನಡೆಯಲಿದೆ. ಸಿಎಂ ಬಸವರಾಜ ಬೊಮ್ಮಾಯಿ, ಬಿಎಸ್ವೈ, ರಾಜ್ಯಾಧ್ಯಕ್ಷರು ಭಾಗಿಯಾಗುತ್ತಾರೆ. ಬಿ.ಎಲ್.ಸಂತೋಷ್ ಸಮಾರೋಪಕ್ಕೆ ಆಗಿಮಿಸುತ್ತಾರೆ ಎಂದರು.
ಇದನ್ನೂ ಓದಿ: ಗುಜರಾತ್ ನೂತನ ಸಿಎಂ ಆಯ್ಕೆ ಪ್ರಕ್ರಿಯೆ: ಅಹಮದಾಬಾದ್ ತಲುಪಿದ ಬಿಎಸ್ವೈಗೆ ಬಿಗಿ ಭದ್ರತೆ