ಬೆಂಗಳೂರು: ನಮ್ಮ ಪಕ್ಷದಲ್ಲಿ ನಾಯಕರ ಕೊರತೆ ಇಲ್ಲ, ನಮಗೆ ಡಿ.ಕೆ ಶಿವಕುಮಾರ್ ಅವಶ್ಯಕತೆಯೂ ಇಲ್ಲ. ಅವರಿಗೆ ಬಿಜೆಪಿ ಸೇರುವಂತೆ ನಾವು ಆಹ್ವಾನವನ್ನೂ ನೀಡಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ಸೇರುವಂತೆ ನಮ್ಮ ಪಕ್ಷದಿಂದ ಯಾವುದೇ ರೀತಿಯ ಆಹ್ವಾನವನ್ನು ಕೊಟ್ಟಿಲ್ಲ, ನಮ್ಮ ಪಕ್ಷದಲ್ಲಿ ನಾಯಕರ ಕೊರತೆಯೂ ಇಲ್ಲ, ನಮ್ಮಲ್ಲಿ ಬಹಳಷ್ಟು ಜನ ನಾಯಕರಿದ್ದಾರೆ. ಬಹಳಷ್ಟು ಜನ ಅರ್ಹತೆ, ಯೋಗ್ಯತೆ ಇರುವಂತಹ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ ಎಂದರು.
ಡಿ.ಕೆ ಶಿವಕುಮಾರ್ ಅವರ ರಾಜಕೀಯ, ಅವರ ರಾಜಕೀಯ ಶೈಲಿಗಳು ಮತ್ತು ಅವರ ಉದ್ದೇಶಗಳನ್ನು, ಕಾರ್ಯಗಳನ್ನು ಸಂಪೂರ್ಣವಾಗಿ ವಿರೋಧಿಸಿರುವುದು ನಮ್ಮ ಪಕ್ಷ. ಹಾಗಾಗಿ ನಮ್ಮ ಪಕ್ಷಕ್ಕೂ ಅವರಿಗೂ ಸರಿದೂಗಲ್ಲ, ಅವರು ಕಾಂಗ್ರೆಸ್ ಪಕ್ಷದಲ್ಲಿಯೇ ಸರಿದೂಗುತ್ತಾರೆ. ಡಿಕೆಶಿ ಅಲ್ಲಿಯೇ ಇರಲೆಂದು ಶುಭಕೋರುತ್ತೇನೆ ಎಂದು ಅಶ್ವತ್ಥ್ ನಾರಾಯಣ್ ವ್ಯಂಗ್ಯವಾಡಿದರು.
ಇದನ್ನೂ ಓದಿ: ಬಿಜೆಪಿ ಸೇರದಿರೋದಕ್ಕೆ ನನ್ನನ್ನು ತಿಹಾರ ಜೈಲಿಗೆ ಹಾಕಿದ್ರು : ಡಿಕೆಶಿ ಹೊಸ ಬಾಂಬ್