ETV Bharat / state

ನಮಗೆ ರಿವರ್ಸ್​ ಆಪರೇಷನ್​ಗೆ ಒಳಗಾಗುವ ಅಗತ್ಯವಿಲ್ಲ: ಬಿಜೆಪಿ ಶಾಸಕರ ಸ್ಪಷ್ಟನೆ - kannadanews

ಬಿಜೆಪಿ ಶಾಸಕರು ರಿವರ್ಸ್​ ಆಪರೇಶನ್​ಗೆ ಒಳಗಾಗುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ ಹಿನ್ನೆಲೆ ಈ ಕುರಿತು ಬಿಜೆಪಿ ಶಾಸಕರು ಸ್ಪಷ್ಟನೆ ನೀಡಿದ್ದಾರೆ.

ನಮಗೆ ರಿವರ್ಸ್ ಆಪರೇಷನ್​ಗೆ ಒಳಗಾಗುವ ಅಗತ್ಯವಿಲ್ಲ
author img

By

Published : Jul 13, 2019, 12:43 PM IST

Updated : Jul 13, 2019, 1:50 PM IST

ಬೆಂಗಳೂರು: ಕೆಲವೊಂದು ಮಾಧ್ಯಮಗಳಲ್ಲಿ ಐದಾರು ಶಾಸಕರು ರಿವರ್ಸ್ ಆಪರೇಷನ್​​ಗೆ ಒಳಗಾಗುತ್ತಾರೆ ಎಂದು ಪ್ರಸಾರ ಮಾಡಲಾಗುತ್ತಿದೆ. ಆದರೆ, ನಮಗೆ ರಿವರ್ಸ್ ಆಪರೇಷನ್​​ಗೆ ಒಳಗಾಗುವ ಅಗತ್ಯವಿಲ್ಲ ಎಂದು ಬಿಜೆಪಿಯ ಆರು ಶಾಸಕರು ಸ್ಪಷ್ಟಪಡಿಸಿದ್ದಾರೆ.

ಯಲಹಂಕದ ಹೊನ್ನೇನಹಳ್ಳಿಯಲ್ಲಿರುವ ರಮಡ ರೆಸಾರ್ಟ್​ನಲ್ಲಿ ಸುದ್ದಿಗಾರರೊಂದಿಗೆ ರಾಜುಗೌಡ, ನಿರಂಜನ್ ಕುಮಾರ್, ಬಸವರಾಜ್​ ದಡೇಸುಗೂರು, ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಮಸಾಲೆ ಜಯರಾಮ್ ಮಾತನಾಡಿ, ನಾವು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವ ಅಗತ್ಯವಿಲ್ಲ. ದಯಮಾಡಿ ರಿವರ್ಸ್ ಆಪರೇಷನ್​​ನಲ್ಲಿ ನಮ್ಮ ಹೆಸರು ತರಬೇಡಿ. ನಾವು ಬೇರೆ ಪಕ್ಷಕ್ಕೆ ಹೋಗುವುದಾದರೆ ಮಾಧ್ಯಮದವರಿಗೆ ತಿಳಿಸಿ ಹೋಗುತ್ತೇವೆ ಎಂದ್ರು.

ನಮಗೆ ರಿವರ್ಸ್​ ಆಪರೇಷನ್​ಗೆ ಒಳಗಾಗುವ ಅಗತ್ಯವಿಲ್ಲ

ಸುರಪುರ ಶಾಸಕ ರಾಜುಗೌಡ ಮಾತನಾಡಿ, ಮಾಧ್ಯಮದವರು ಪ್ರಸಾರ ಮಾಡುತ್ತಿರುವ ತಪ್ಪು ವರದಿಗಳಿಂದ ಕ್ಷೇತ್ರದ ಕಾರ್ಯಕರ್ತರಿಗೆ ಗೊಂದಲವಾಗುತ್ತಿದೆ. ಹೋಗುವುದಾದರೆ ಕದ್ದು ಮುಚ್ಚಿ ಹೋಗುವುದಿಲ್ಲ ಎಂದು ಬೇಸರದಿಂದ ಹೇಳಿದರು. ಶಾಸಕಿ ಪೂರ್ಣಿಮಾ ಮಾತನಾಡಿ, ದಯಮಾಡಿ ಊಹಾಪೋಹದ ವರದಿಗಳನ್ನು ತೋರಿಸಿ ನಮ್ಮ ಕ್ಷೇತ್ರದ ಜನರಲ್ಲಿ ಗೊಂದಲ ತರುತ್ತಿದ್ದೀರ. ಪಕ್ಷದ ನಿಯಮದಂತೆ ಒಟ್ಟಿಗೆ ಇದ್ದೇವೆ. ನಮಗೆ ಜವಾಬ್ದಾರಿಯ ಅರಿವಿದೆ. ಯಾವುದೇ ಊಹಾಪೋಹ ಕೇಳಿ ಪ್ರಸಾರ ಮಾಡಬೇಡಿ. ನಿಮಗೆ ಸಂಶಯವಿದ್ದರೆ ನಮ್ಮನ್ನೆ ನೇರವಾಗಿ ಕೇಳಿ ಎಂದು ಹೇಳಿದರು.

Intro:
ನಮಗೆ ರಿವರ್ಸ್ ಆಪರೇಷನ್ ಓಳಗಾಗುವ ಅಗತ್ಯವಿಲ್ಲ: ಬಿಜೆಪಿ ಶಾಸಕರ ಸ್ಪಷ್ಟನೆ

ಬೆಂಗಳೂರು: ಕೆಲವೊಂದು ಮಾಧ್ಯಮಗಳು ಐದಾರು ಶಾಸಕರು ರಿವರ್ಸ್ ಆಪರೇಷನ್ ಗೆ ಓಳಗಾಗುತ್ತಾರೆ ಎಂದು ಪ್ರಸಾರ ಮಾಡಲಾಗುತ್ತಿದೆ. ಆದರೆ, ನಮಗೆ ರಿವರ್ಸ್ ಆಪರೇಷನ್ಗೆ ಒಳಗಾಗುವ ಅಗತ್ಯವಿಲ್ಲ ಎಂದು ಬಿಜೆಪಿಯ ಆರು ಜನ ಶಾಸಕರು ಸ್ಪಷ್ಟ ಪಡಿಸಿದ್ದಾರೆ.

ಯಲಹಂಕದ ಹೊನ್ನೇನಹಳ್ಳಿಯಲ್ಲಿರುವ ರಮಡ ರೆಸಾರ್ಟ್ ನಲ್ಲಿ ಸುದ್ದಿಗಾರರೊಂದಿಗೆ ರಾಜುಗೌಡ , ನಿರಂಜನ್ ಕುಮಾರ್, ದಡೇಶ್ ಗುರು,ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಮಸಾಲೆ ಜಯರಾಮ್ ಮಾತನಾಡಿ ನಾವು ಬಿಜೆಪಿ ಬಿಟ್ಟು ಯಾವುದೇ ಪಕ್ಷಕ್ಕೆ ಹೋಗುವ ಅಗತ್ಯವಿಲ್ಲ. ದಯಮಾಡಿ ರಿವರ್ಸ್ ಆಪರೇಷನ್ ನಲ್ಲಿ ನಮ್ಮ ಹೆಸರು ತರಬೇಡಿ. ನಾವು ಬೇರೆ ಪಕ್ಷ ಕ್ಕೆ ಹೋಗುವುದಾದರೆ ಮಾಧ್ಯಮದವರಿಗೆ ತಿಳಿಸಿ ಹೋಗುತ್ತೇವೆ. ಬಿಜೆಪಿಯಲ್ಲಿ ಎಲ್ಲರು ಒಗ್ಗಟ್ಟಾಗಿದ್ದೇವೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಸುರಪುರ ಶಾಸಕ ರಾಜುಗೌಡ ಮಾತನಾಡಿ, ಮಾಧ್ಯಮದವರು ಪ್ರಸಾರ ಮಾಡುತ್ತಿರುವ ತಪ್ಪು ವರದಿಗಳಿಂದ ಕ್ಷೇತ್ರದ ಕಾರ್ಯಕರ್ತರಿಗೆ ಗೊಂದಲವಾಗುತ್ತಿದೆ.ಜೊತೆಗೆ ತಪ್ಪು ಸಂದೇಶ ಹೋಗುತ್ತಿದೆ.ನಮಗೆ ಮೈಂಡ್, ಆರೋಗ್ಯ ಎಲ್ಲವು ಸರಿ ಇದೆ. ಯಾವುದೇ ಪಕ್ಷಕ್ಕೆ ಹೋಗುವ ಅಗತ್ಯವಿಲ್ಲ. ಒಂದು ವೇಳೆ ಬೇರೆ ಪಕ್ಷಕ್ಕೆ ಹೋಗುವುದಿದ್ದರೆ ನಮ್ಮ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರೊಂದಿಗೆ 105 ಜನರುಹೋಗುತ್ತಿದ್ದಾರೆ ಎಂದು ಹಾಕಿ. ಹೋಗುವುದಾದರೆ ಕದ್ದುಮುಚ್ಚಿ ಹೋಗುವುದಿಲ್ಲ ಎಂದು ಬೇಸರದಿಂದ ಹೇಳಿದರು.

Body:ಶಾಸಕ ನಿರಂಜನ್ ಮಾತನಾಡಿ,ಬಿಜೆಪಿ ಹಾಗೂ ಯಡಿಯೂರಪ್ಪನವರ ಬಗ್ಗೆ ನಿಷ್ಟೆಇದೆ. ನಮ್ಮ ಸರ್ಕಾರ ಬರುತ್ತದೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾವು ಎಂದಿಗೂ ಬಿಜೆಪಿಗೆ ನಿಷ್ಟೆಯಿಂದ ಇರುತ್ತೇವೆ. ಯಾವುದೇ ಪಕ್ಕಕ್ಕೂ ಹೋಗುವ ಅಗತ್ಯ ನಮಗೆ ಇಲ್ಲ ಎಂದು ಹೇಳಿದರು.

Conclusion:ಶಾಸಕಿ ಪೂರ್ಣಿಮಾ ಮಾತನಾಡಿ, ದಯಮಾಡಿ ಊಹಾಪೋಹದ ವರದಿಗಳನ್ನು ತೋರಿಸಿ ನಮ್ಮ ಕ್ಷೇತ್ರದ ಜನರಲ್ಲಿ ಗೊಂದಲ ಮಾಡುತ್ತಿದ್ದೀರ. ಬಿಜೆಪಿಯಲ್ಲಿ ನಮಗೆ ಸ್ಥಾನಮಾನ ನೀಡಿ, ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ.ಪಕ್ಷದ ನಿಯಮದಂತೆ ಒಟ್ಟಿಗೆ ಇದ್ದೇವೆ. ನಮಗೆ ಜವಬ್ದಾರಿ ಅರಿವಿದೆ. ಯಾವುದೇ ಊಹಾಪೋಹ ಕೇಳಿ ಪ್ರಸಾರ ಮಾಡಬೇಡಿ. ನಿಮಗೆ ಸಂಶಯವಿದ್ದರೆ ನಮ್ಮನ್ನೆ ನೇರವಾಗಿ ಕೇಳಿ ಎಂದು ಹೇಳಿದರು.

ಬೈಟ್ :
ರಾಜುಗೌಡ , ನಿರಂಜನ್ ಕುಮಾರ್, ದಡೇಶ್ ಗುರು, ಪೂರ್ಣಿಮಾ, ಗೂಳಿಹಟ್ಟಿ ಶೇಖರ್, (ಶಾಸಕರು)
Last Updated : Jul 13, 2019, 1:50 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.