ಬೆಂಗಳೂರು: ವೈದ್ಯರಿಗೆ ನಾಚಿಕೆ ಆಗಬೇಕು, ಒಪಿಡಿ ಸೇವೆ ಸ್ಥಗಿತಗೊಳ್ಳಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಬಡವರಿಗಾಗಿ ಅಷ್ಟೇ ನಾವು ಶರಣಾಗುತ್ತಿದ್ದೇವೆ ಎಂದು ಕರವೇ ಸಂಘಟನಾ ಕಾರ್ಯದರ್ಶಿ ಗಾಯಿತ್ರಿ ಹೇಳಿದ್ದಾರೆ.
ನಮ್ಮ ಮೇಲೆ ನವೆಂಬರ್ 4 ರಂದು ಮಿಂಟೋ ಆಸ್ಪತ್ರೆಯವರು ಎಫ್ ಐಆರ್ ದಾಖಲಿಸಿದ್ದಾರೆ. ಕನ್ನಡಕ್ಕಾಗಿ ಹಾಗೂ ಬಡವರಿಗೆ ಆಗುತ್ತಿರುವ ತೊದರೆಯನ್ನು ಸಹಿಸಲಾಗದೆ ಕರವೇ ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಇಂದು ಡಿಸಿಪಿ ಕಚೇರಿಗೆ ಹೋಗಿ ನಾವು ಶರಣಾಗಲಿದ್ದೇವೆ ಎಂದು ತಿಳಿಸಿದ್ದಾರೆ.
ವೈದ್ಯರಾಗಿದ್ದುಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡದಿರುವುದು ನಿಜಕ್ಕೂ ಬೇಸರದ ಸಂಗತಿ. ಇಂಥವರು ವೈದ್ಯರಾಗಿರುವುದಕ್ಕೆ ಪ್ರಯೋಜನವಿಲ್ಲ. ಯಾವಾಗಲು ಕರವೇ ಕುಟುಂಬ ಈ ವಿಷಯವನ್ನ ವಿರೋಧಿಸುತ್ತದೆ ಎಂದು ಗಾಯಿತ್ರಿ, ವೈದ್ಯರ ಮೇಲಿನ ಆಕ್ರೋಶವನ್ನ ಹೊರಹಾಕಿದ್ದಾರೆ.