ETV Bharat / state

'ಆಪರೇಷನ್​ ಕಮಲ'ಕ್ಕೆ ಪ್ರಭಾವಿತರಾಗಿಲ್ಲ: ಒಟ್ಟು 14 ಶಾಸಕರಿಂದ ರಾಜೀನಾಮೆ: ಹೆಚ್​ ವಿಶ್ವನಾಥ್​ - ಶಾಸಕರ ರಾಜೀನಾಮೆ

ಮೈತ್ರಿ ಸರ್ಕಾರದ ಒಟ್ಟು 14 ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆಂದು ಹೆಚ್​ ವಿಶ್ವನಾಥ್​ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು, ನಾವು ಯಾವುದೇ ಆಪರೇಷನ್​ ಕಮಲಕ್ಕೆ ಒಳಗಾಗಿಲ್ಲ ಎಂದು ಇದೇ ವೇಳೆ ಸ್ಪಷ್ಟನೆ ನೀಡಿದ್ದಾರೆ.

ಶಾಸಕರ ರಾಜೀನಾಮೆ
author img

By

Published : Jul 6, 2019, 5:55 PM IST

ಬೆಂಗಳೂರು: ನಾವು ಆಪರೇಷನ್​ ಕಮಲಕ್ಕೆ ಒಳಗಾಗುವ ಚಾನ್ಸೇ ಇಲ್ಲ. ಅದರಿಂದ ಪ್ರಭಾವಿತರೂ ಆಗಿಲ್ಲ, ಒಟ್ಟು 14 ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದೇವೆ ಎಂದು ಶಾಸಕ ಹಾಗೂ ನಿರ್ಗಮಿತ ಜೆಡಿಎಸ್​ ಅಧ್ಯಕ್ಷರಾಗಿದ್ದ ಹೆಚ್​ ವಿಶ್ವನಾಥ್​ ಸ್ಪಷ್ಟನೆ ನೀಡಿದ್ದಾರೆ.

ಸ್ಪೀಕರ್​ ಕಚೇರಿ ಕಾರ್ಯದರ್ಶಿ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮಾತನಾಡಿದ ಅವರು ಈ ಸ್ಪಷ್ಟನೆ ನೀಡಿದ್ದಾರೆ. ರಾಜ್ಯಪಾಲರ ಭೇಟಿ ವೇಳೆ, ನಮ್ಮ ರಾಜೀನಾಮೆ ಪತ್ರ ಅಗೀಕಾರ ಮಾಡುವಂತೆ ತಿಳಿಸಿದ್ದೇವೆ. ಮೈತ್ರಿ ಸರ್ಕಾರ ಜನರ ಆಕಾಂಕ್ಷೆಗಳಿಗೆ ತಲುಪುವಲ್ಲಿ ಸರ್ಕಾರ ವಿಫಲಗೊಂಡಿದೆ. ಹೀಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಹೆಚ್​ ವಿಶ್ವನಾಥ್​ ಸುದ್ದಿಗೋಷ್ಠಿ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪೀಕರ್​ ಅವರಿಗೆ ಪತ್ರ ಸಹ ಬರೆದಿದ್ದು, ಅವರು ಮಂಗಳವಾರ ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಸರ್ಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದಕ್ಕಾಗಿ ನಾವು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದೇವೆ. ನಾವೆಲ್ಲರು ಒಗ್ಗಟ್ಟಿನಿಂದ ರಾಜೀನಾಮೆ ನೀಡಿದ್ದು, ಇದರಲ್ಲಿ ಬೇರೆ ಯಾವುದೇ ಪಕ್ಷದ ಮುಖಂಡರ ಕೈವಾಡವಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸಿದರು.

ಯಾರೆಲ್ಲ ರಾಜೀನಾಮೆ
ಮಹೇಶ್​ ಕುಮಟಳ್ಳಿ, ಬಿಸಿ ಪಾಟೀಲ್​, ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್​, ಹೆಚ್​.ವಿಶ್ವನಾಥ್​, ಗೋಪಾಲಯ್ಯ,ಬೈರತಿ ಬಸವರಾಜ್​, ನಾರಾಯಣಗೌಡ, ಮುನಿರತ್ನ, ಎಸ್​ಟಿ ಸೋಮಶೇಖರ್​, ಪ್ರತಾಪ್​ ಗೌಡ, ಆನಂದ್​ ಸಿಂಗ್ ಸೇರಿದಂತೆ 14 ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

Intro:Body:

ಬೆಂಗಳೂರು: ರಾಜ್ಯಪಾಲರಿಗೆ ರಾಜೀನಾಮೆ ನೀಡಿದ ಬಳಿಕ ಜೆಡಿಎಸ್ ಶಾಸಕ ಹೆಚ್​ ವಿಶ್ವನಾಥ್​ ಮಾತನಾಡಿದ್ದು, ನಾವು ಯಾವುದೇ ಆಪರೇಷನ್​ ಕಮಲದಿಂದ ಪ್ರಭಾವಿತರಾಗಿಲ್ಲ, ಒಟ್ಟು 14 ಶಾಸಕರು ರಾಜೀನಾಮೆ ಸಲ್ಲಿಕೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಗವರ್ನರ್​ಗೆ ಭೇಟಿ ಮಾಡಿ ರಾಜೀನಾಮೆ ಸಲ್ಲಿಕೆ ಮಾಡಿದ್ದು, ನಮ್ಮ ರಾಜೀನಾಮೆ ಪತ್ರ ಅಗೀಕಾರ ಮಾಡುವಂತೆ ತಿಳಿಸಿದ್ದೇವೆ. ಮೈತ್ರಿ ಸರ್ಕಾರ ಜನರ ಆಕಾಂಕ್ಷೆಗಳಿಗೆ ತಲುಪುವಲ್ಲಿ ವಿಫಲಗೊಂಡಿದ್ದು, ಹೀಗಾಗಿ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. 

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪೀಕರ್​ ಅವರಿಗೆ ಪತ್ರ ಸಹ ಬರೆದಿದ್ದು, ಅವರು ಮಂಗಳವಾರ ತಮ್ಮ ನಿರ್ಧಾರ ಕೈಗೊಳ್ಳಲಿದ್ದಾರೆ.  ಈ ಸರ್ಕಾರ ತನ್ನ ಕಾರ್ಯವೈಖರಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದಕ್ಕಾಗಿ ನಾವು ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡಿದ್ದೇವೆ. 

ನಾವು ಎಲ್ಲರೂ ಒಗ್ಗಟ್ಟಿನಿಂದ ರಾಜೀನಾಮೆ ನೀಡಿದ್ದು, ಇದರಲ್ಲಿ ಬೇರೆ ಯಾವುದೇ ಪಕ್ಷದ ಮುಖಂಡರ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.