ದೇವನಹಳ್ಳಿ (ಬೆಂಗಳೂರು): ರಾತ್ರಿ ಸುರಿದ ಭಾರೀ ಮಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅರೈವಲ್ ಮತ್ತು ಡಿಪಾರ್ಚರ್ ಸ್ಥಳಕ್ಕೆ ಮಳೆ ನೀರು ನುಗ್ಗಿದ್ದು ಪ್ರಯಾಣಿಕರು ಪರದಾಟ ಅನುಭವಿಸಿದರು. ಏರ್ಪೋರ್ಟ್ ಪ್ರಾರಂಭವಾದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಏರ್ಪೋರ್ಟ್ನಲ್ಲಿ ಈ ಪರಿಸ್ಥಿತಿ ಉಂಟಾಗಿದೆ.
2008ರಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದೆ. ಆದರೆ ಈ 13 ವರ್ಷದಲ್ಲಿ ಮಳೆ ನೀರು ಈ ಮಟ್ಟದ ವರೆಗೂ ಬಂದಿರಲಿಲ್ಲ.
ಏರ್ಪೋರ್ಟ್ನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಅವಾಂತರ:
ಏರ್ಪೋರ್ಟ್ನಲ್ಲಿ ಮೆಟ್ರೋ ಕಾಮಾಗಾರಿ ಮತ್ತು ರನ್ ವೇಗೆ ಸಂಬಂಧಿಸಿದಂತೆ ಅಂಡರ್‌ಪಾಸ್ ಮತ್ತು ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಮಳೆನೀರು ನಿಂತು ತೊಂದರೆ ಉಂಟಾಗಿದೆ.
ಮಳೆ ನೀರು ಸರಾಗವಾಗಿ ಹರಿದು ಹೋಗಲು ಏರ್ಪೋರ್ಟ್ ಸಿಬ್ಬಂದಿ ಶ್ರಮಿಸಿದ ಫಲವಾಗಿ ಬೆಳಗ್ಗೆ ಏರ್ಪೋರ್ಟ್ ಸಹಜ ಸ್ಥಿತಿಗೆ ಮರಳಿತು. ಪಾರ್ಕಿಂಗ್ ಹಾಗೂ ರಸ್ತೆ ಮೇಲೆ ನಿಂತಿದ್ದ ಮಳೆ ನೀರು ಕಡಿಮೆಯಾಗಿದೆ. ಹೀಗಾಗಿ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ: Bengaluru Rain: ಏರ್ಪೋರ್ಟ್ ಟರ್ಮಿನಲ್ ಬಳಿ ನಿಂತ ನೀರು, ಸಂಚಾರಕ್ಕೆ ಅಡ್ಡಿ