ETV Bharat / state

ಉದ್ಯೋಗ: ಬಿಇಎಲ್​ನಲ್ಲಿ 81 ಅಪ್ರೆಂಟಿಸ್​ ಹುದ್ದೆಗೆ ವಾಕ್​-ಇನ್​ - ಒಂದು ವರ್ಷದ ಹುದ್ದೆಗಳು

Job Alert: ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಅಪ್ರೆಂಟಿಸ್​ ಹುದ್ದೆಗಳ ನೇಮಕಾತಿ ನಡೆಯಲಿದೆ.

Walk in interview for apprentice job in BEL

author img

By ETV Bharat Karnataka Team

Published : Jan 4, 2024, 1:44 PM IST

ಬೆಂಗಳೂರು: ಭಾರತ್​ ಎಲೆಕ್ಟ್ರಾನಿಕ್ಸ್​​ ಲಿಮಿಟೆಡ್​​ನಲ್ಲಿ (ಬಿಇಎಲ್​​) ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಒಂದು ವರ್ಷದ ಅವಧಿಗೆ ಈ ಹುದ್ದೆ ನೇಮಕಾತಿ ಇರಲಿದ್ದು, ನೇರ ಸಂದರ್ಶನದ ಮೂಲಕ ಭರ್ತಿ ಪ್ರಕ್ರಿಯೆ ನಡೆಯಲಿದೆ.

ಹುದ್ದೆ ವಿವರ: ಒಟ್ಟು 81 ಅಪ್ರೆಂಟಿಸ್​ ಹುದ್ದೆಗಳ ನೇಮಕಾತಿ ವಿವರ.

  • ಪದವೀಧರ ಅಪ್ರೆಂಟಿಸ್​​ - 63
  • ತಾಂತ್ರಿಕ (ಡಿಪ್ಲೊಮಾ) ಅಪ್ರೆಂಟಿಸ್​​ - 10
  • ಬಿಕಾಂ ಅಪ್ರೆಂಟಿಸ್​​ - 8

ವಿದ್ಯಾರ್ಹತೆ: ಪದವೀಧರ ಅಪ್ರೆಂಟಿಸ್​ಗೆ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್​ ಅಂಡ್​​ ಕಮ್ಯೂನಿಕೇಷನ್​ ಇಂಜಿನಿಯರಿಂಗ್​, ಮೆಕಾನಿಕ್​ ಇಂಜಿನಿಯರಿಂಗ್​, ಕಂಪ್ಯೂಟರ್​ ಇಂಜಿನಿಯರಿಂಗ್​, ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ ಪದವಿಯನ್ನು ಪಡೆದಿರಬೇಕು.

ಅಧಿಸೂಚನೆ
ಅಧಿಸೂಚನೆ

ತಾಂತ್ರಿಕ (ಡಿಪ್ಲೊಮಾ) ಅಪ್ರೆಂಟಿಸ್​: ಈ ಹುದ್ದೆಗೆ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್​ ಅಂಡ್​ ಕಮ್ಯೂನಿಕೇಷನ್​ ಇಂಜಿನಿಯರಿಂಗ್ ಮತ್ತು ಮೆಕಾನಿಕಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ ಪದವೀಧರರಾಗಿರಬೇಕು.

ಬಿಕಾಂ ಅಪ್ರೆಂಟಿಸ್​ ಹುದ್ದೆಗೆ ಅಭ್ಯರ್ಥಿಗಳು ಬಿಕಾಂ ಪದವಿ ಪೂರ್ಣಗೊಳಿಸಿರಬೇಕು.

ವೇತನ:

  • ಪದವೀಧರ ಅಪ್ರೆಂಟಿಸ್ - 17.500 ರೂ.
  • ತಾಂತ್ರಿಕ (ಡಿಪ್ಲೊಮಾ) ಅಪ್ರೆಂಟಿಸ್​​ - 12.500 ರೂ.
  • ಬಿಕಾಂ ಅಪ್ರೆಂಟಿಸ್​​ - 10.500 ರೂ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 25 ವರ್ಷ ಆಗಿದೆ. 2020ರ ಬಳಿಕ ಪದವಿ, ಡಿಪ್ಲೊಮಾ ಪಡೆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಪ.ಜಾ ಮತ್ತು ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಆಯ್ಕೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದಲ್ಲಿ ಮೆರಿಟ್​ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ನೇರ ಸಂದರ್ಶನವೂ ಜನವರಿ 10ರಂದು ಬೆಳಗ್ಗೆ 10ಗಂಟೆಗೆ ಈ ಕೆಳಗಿನ ವಿಳಾಸದಲ್ಲಿ ನಡೆಯಲಿದೆ.

ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​​, ನಂದಂಬಕ್ಕಂ, ಚೆನ್ನೈ-600089.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ನೇರ ಸಂದರ್ಶನ ದಿನ ಸಲ್ಲಿಕೆ ಮಾಡಬೇಕಾದ ಅರ್ಜಿಯನ್ನು ಪಡೆಯಲು bel-india.in ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯಲ್ಲಿ ಅಪ್ರೆಂಟಿಸ್​​ ಹುದ್ದೆ; ಜ.11ಕ್ಕೆ ನೇರ ಸಂದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.