ETV Bharat / state

ವಿದ್ಯುತ್ ತಂತಿ ಸ್ಪರ್ಶ: ಕಟ್ಟಡ ಕೂಲಿ ಕಾರ್ಮಿಕ ಸಾವು - ಆನೇಕಲ್​​ನಲ್ಲಿ ಕೂಲಿ ಕಾರ್ಮಿಕ ಸಾವು

ಕಟ್ಟಡ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್​ ತಂತಿ ಮೇಲೆ ಬಿದ್ದು ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಆನೇಕಲ್ಲಿನ ಉಪವಿಭಾದ ಜಿಗಣಿಯಲ್ಲಿ ಬೆಳಕಿಗೆ ಬಂದಿದೆ.

Wage labour died
ಕಟ್ಟಡ ಕೂಲಿ ಕಾರ್ಮಿಕ ಸಾವು
author img

By

Published : Jul 2, 2021, 9:54 PM IST

ಆನೇಕಲ್: ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್​ ತಂತಿ ಮೇಲೆ ಆಯತಪ್ಪಿ ಬಿದ್ದು ಕಟ್ಟಡ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಆನೇಕಲ್​​ ಉಪವಿಭಾದ ಜಿಗಣಿಯಲ್ಲಿ ನಡೆದಿದೆ.

Wage labour died
ಕಟ್ಟಡ ಕೂಲಿ ಕಾರ್ಮಿಕ ಸಾವು

ತಮಿಳುನಾಡು ಮೂಲದ ಪುದುಕೋಟೆ ನಿವಾಸಿ ವಿಜಯ್ ಕುಮಾರ್ ಸಾವನ್ನಪ್ಪಿದ ಕಟ್ಟಡ ಕಾರ್ಮಿಕ. ಈತ ರಾಜಾಪುರದ ಶಿವಕುಮಾರ್ ಎಂಬುವವರ ಕಟ್ಟಡದ ಪ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಮೇಲೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಹಾಗೂ ಬೆಸ್ಕಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.