ETV Bharat / state

ವಿಟಿಯು ಪರೀಕ್ಷೆ ದಿನಾಂಕ ನಿಗದಿ ಗೊಂದಲ, ದಿಶಾ ರವಿ ಬಂಧನ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ - VTU students protest

ತರಾತುರಿಯಲ್ಲಿ ಪರೀಕ್ಷೆ ನಡೆಸಿ ನಮ್ಮ ಭವಿಷ್ಯವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದಾರೆ. ಓದುವುದಕ್ಕೆ ನಮಗೆ ಕಾಲಾವಕಾಶ ಬೇಕು, ಇದರಿಂದಾಗಿ ಒಂದು ಪರೀಕ್ಷೆಯಿಂದ ಇನ್ನೊಂದು ಪರೀಕ್ಷೆ ನಡುವೆ ಅಂತರ ನೀಡಿ ಎಂದು ಕೇಳಿದ್ದೇವೆ. ಆದರೆ, ಅವರು ಇನ್ನೂ ಇದಕ್ಕೆ ಅವಕಾಶ ನೀಡುತ್ತಿಲ್ಲ..

VTU students protest at bangalore
ವಿಟಿಯು ಪರೀಕ್ಷೆ ದಿನಾಂಕ ನಿಗದಿ ಗೊಂದಲ ಹಾಗೂ ದಿಶಾ ರವಿ ಬಂಧನ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
author img

By

Published : Feb 16, 2021, 4:01 PM IST

ಬೆಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅವೈಜ್ಞಾನಿಕವಾಗಿ ಪರೀಕ್ಷಾ ವೇಳಾಪಟ್ಟಿ ಸಿದ್ಧಪಡಿಸಿದೆ ಎಂದು ಹಾಗೂ ದಿಶಾ ರವಿ ಬಂಧನ ಖಂಡಿಸಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು. ಸಿಐಟಿಯು ಹಾಗೂ ಎನ್​​ಎಸ್​ಯುಐ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ದಿಶಾ ರವಿ ಬಂಧನ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ..

2ನೇ ಮತ್ತು 3ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಹೊರಡಿಸಿದ ಪರೀಕ್ಷೆಯ ವೇಳಾಪಟ್ಟಿ ಸಂಬಂಧಿಸಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು. ನಾವು ಓದುತ್ತಿರುವ ವಿಷಯ ಅತ್ಯಂತ ಪ್ರಮುಖ ಹಾಗೂ ಅರ್ಥಪೂರ್ಣವಾಗಿದೆ.

ಕ್ಲಿಷ್ಟಕರವಾದ ವಿಷಯವಸ್ತುವನ್ನು ಒಳಗೊಂಡಿದೆ. ತರಾತುರಿಯಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನಮಗೆ ಎರಡು ಪರೀಕ್ಷೆಗಳ ನಡುವೆ ಮೂರರಿಂದ ನಾಲ್ಕು ದಿನ ಅಂತರ ನೀಡುವ ಬದಲು ಕೇವಲ ಒಂದು ದಿನಗಳ ಅಂತರ ನೀಡಿದೆ.

ಕಾಲೇಜಿಗೆ ತೆರಳದೆ ಇಂಟರ್ನೆಟ್ ಮೂಲಕ ಆನ್ಲೈನ್ ತರಗತಿ ಎದುರಿಸಿರುವ ನಮಗೆ ಇಷ್ಟು ಕಡಿಮೆ ಅಂತರದಲ್ಲಿ ಪರೀಕ್ಷೆಗಳು ನಡೆದರೆ ಹೆಚ್ಚು ಅಂಕ ಗಳಿಸುವುದು ಕಷ್ಟವಾಗಲಿದೆ. ಇದರಿಂದ ಕೂಡಲೇ ಉನ್ನತ ಶಿಕ್ಷಣ ಸಚಿವರು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ಸೂಚನೆ ನೀಡಿ, ಪರೀಕ್ಷೆಯ ದಿನಾಂಕ ಬದಲಿಸಿ ಮೂರರಿಂದ ನಾಲ್ಕು ದಿನಗಳ ಅಂತರದಲ್ಲಿ ಒಂದೊಂದು ವಿಷಯಗಳ ಪರೀಕ್ಷೆ ನಡೆಯುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ದಿಶಾ ರವಿ ಪರ ದನಿ : ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ವಿದ್ಯಾರ್ಥಿನಿ, ಬೆಂಗಳೂರು ಹವಾಮಾನ ಬದಲಾವಣೆಯ ಕಾರ್ಯಕರ್ತೆ ಮತ್ತು ಪರಿಸರವಾದಿ ದಿಶಾ ರವಿ ಅವರ ಬಂಧನ ಕುರಿತು ನಂದನವನ ವಿದ್ಯಾರ್ಥಿಗಳು ಇದೇ ಸಂದರ್ಭ ಖಂಡಿಸಿದರು.

ಕೇಂದ್ರ ಸರ್ಕಾರ ವಿದ್ಯಾರ್ಥಿನಿಯ ದನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ದಿಶಾ ರವಿ ಯಾವುದೇ ತಪ್ಪು ಮಾಡಿಲ್ಲ, ಅವರನ್ನು ಅನಗತ್ಯ ಬಂಧಿಸಿ ಒತ್ತಡ ಹೇರುವ ತಂತ್ರ ಮಾಡಲಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪರೀಕ್ಷೆಗಳ ನಡುವೆ ಅಂತರ : ಎನ್​​ಎಸ್​ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ಮನೀಶ್ ಜೀರಾ ಮಾತನಾಡಿ, ನಾವು ಇಲ್ಲಿ ಎರಡು ವಿಚಾರಗಳನ್ನು ಮುಂದಿಟ್ಟುಕೊಂಡು ಇಂದು ಪ್ರತಿಭಟನೆ ನಡೆಸಿದ್ದೇವೆ. ಪರೀಕ್ಷಾ ವೇಳಾಪಟ್ಟಿ ಗೊಂದಲ ಮೂಡಿಸಿದೆ. ಪರೀಕ್ಷೆಗಳ ನಡುವೆ ಕೇವಲ ಒಂದು ದಿನದ ಅಂತರ ನೀಡಲಾಗಿದೆ.

ವಿದ್ಯಾರ್ಥಿಗಳು ಕಳೆದ ವರ್ಷ ಪ್ರಮೋಟ್ ಆಗಿದ್ದು, ಈ ವರ್ಷ ಪರೀಕ್ಷೆ ಬರೆಯುತ್ತಿದ್ದಾರೆ. ಪೆನ್ನು ಹಿಡಿಯದೇ ಒಂದು ವರ್ಷ ಕಳೆದಿದೆ. ಕಳೆದ ಒಂದು ವರ್ಷದಿಂದ ಆನ್ಲೈನ್ ತರಗತಿಯಲ್ಲಿ ಇವರು ವ್ಯಾಸಂಗ ಮಾಡಿದ್ದಾರೆ. ಹೆಚ್ಚಿನವರಿಗೆ ಆನ್ಲೈನ್ ವ್ಯವಸ್ಥೆ ಸಮರ್ಪಕವಾಗಿ ದೊರಕದ ಹಿನ್ನೆಲೆ ಶ್ರೀಮಂತ ವಿದ್ಯಾರ್ಥಿಗಳು ಮಾತ್ರ ಆನ್ಲೈನ್ ಶಿಕ್ಷಣವನ್ನು ಸದ್ಭಳಕೆ ಮಾಡಿಕೊಂಡಿದ್ದಾರೆ.

ಬಡಮಕ್ಕಳಿಗೆ ಶಿಕ್ಷಣ ಪಡೆಯುವುದು ಸಾಧ್ಯವಾಗಿಲ್ಲ. ತರಗತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಹಿನ್ನೆಲೆ ಜೊತೆಗೆ ಇದು ತಾಂತ್ರಿಕ ವಿಚಾರ ಆಗಿರುವುದರಿಂದ ಪರೀಕ್ಷೆಗಳ ನಡುವೆ ಒಂದಿಷ್ಟು ಅಂತರ ನೀಡುವಂತೆ ಕೋರಿದ್ದೇವೆ. ತಾಂತ್ರಿಕ ಶಿಕ್ಷಣ ಹಾಗೂ ಎಂಜಿನಿಯರಿಂಗ್ ಪದವಿ ಆಗಿರುವ ಹಿನ್ನೆಲೆ ಮುಂಬರುವ ದಿನಗಳಲ್ಲಿ ಉದ್ಯೋಗವನ್ನು ಈ ಪರೀಕ್ಷೆ ಆಧಾರದ ಮೇಲೆ ಸಂಪಾದಿಸಬೇಕಿರುವ ಹಿನ್ನೆಲೆ, ಪರೀಕ್ಷೆಗೆ ಅಂತರ ನೀಡಿ ಎಂದು ಕೇಳಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: ದಿಶಾ ರವಿ ಬೆಂಬಲಿಸುವ ಕಾಂಗ್ರೆಸ್​ನವರಿಗೆ ನಾಚಿಕೆಯಾಗಬೇಕು: ಸಿ.ಟಿ. ರವಿ

ದಿಶಾ ರವಿ ಬಂಧನಕ್ಕೆ ತೀವ್ರ ವಿರೋಧ : ದಿಶಾ ರವಿ ನಮ್ಮ ತರಹವೇ ಒಬ್ಬ ವಿದ್ಯಾರ್ಥಿನಿ. ಸಕ್ರಿಯ ಸಾಮಾಜಿಕ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಬಂಧಿಸಿ ದಿಲ್ಲಿಗೆ ಕರೆದೊಯ್ದು ಅಲ್ಲಿ ನ್ಯಾಯಾಲಯಕ್ಕೆ ಒಪ್ಪಿಸುವುದನ್ನು ಖಂಡಿಸುತ್ತೇವೆ. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ಅವರನ್ನು ಹಾಜರು ಪಡಿಸಬಹುದಿತ್ತು.

ದೇಶದ್ರೋಹದ ಆರೋಪವನ್ನು ಹೊರಿಸಬೇಕಾದರೆ ಅದು ದಿಲ್ಲಿ ಪೊಲೀಸರ ಮೇಲೆ ಹೊರಿಸಬೇಕು. ಟೂಲ್ ಕಿಟ್‌ನಲ್ಲಿ ಕೇವಲ ಪ್ರತಿಭಟನೆ ಹೇಗೆ ಮಾಡಬೇಕು ಎಂಬ ನಿರ್ದೇಶನವಿದೆ ಹೊರತು ಬೇರೆ ಯಾವುದೇ ವಿಚಾರಗಳು ಇಲ್ಲ. ಹಿಂಸಾಚಾರ ಹಬ್ಬಿಸುವ ವಿಚಾರ ಅದರಲ್ಲಿ ಇಲ್ಲ ಎಂದರು.

ವಿದ್ಯಾರ್ಥಿಯ ಬೇಸರ : ವಿದ್ಯಾರ್ಥಿ ಆದಿತ್ಯ ಮಾತನಾಡಿ, ಪರೀಕ್ಷೆಗೆ ಇನ್ನು ಕೇವಲ ನಾಲ್ಕು ದಿನ ಕಾಲಾವಕಾಶ ಇದೆ. ಓದಬೇಕು ಎಂಬ ಆಸೆ ಇದೆ, ಆದರೆ ಕಾಲಾವಕಾಶ ಇಲ್ಲ. ಆನ್ಲೈನ್ ಮೂಲಕ ವ್ಯಾಸಂಗ ಮಾಡಿದ್ದೇವೆ. ಪರೀಕ್ಷೆಯನ್ನು ಆನ್ಲೈನ್​ನಲ್ಲಿ ಮಾಡಬಹುದಿತ್ತು. ಆದರೆ, ಇದನ್ನು ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ಕಾರ್ಯ ಮಾಡಲಾಗಿದೆ.

ತರಾತುರಿಯಲ್ಲಿ ಪರೀಕ್ಷೆ ನಡೆಸಿ ನಮ್ಮ ಭವಿಷ್ಯವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದಾರೆ. ಓದುವುದಕ್ಕೆ ನಮಗೆ ಕಾಲಾವಕಾಶ ಬೇಕು, ಇದರಿಂದಾಗಿ ಒಂದು ಪರೀಕ್ಷೆಯಿಂದ ಇನ್ನೊಂದು ಪರೀಕ್ಷೆ ನಡುವೆ ಅಂತರ ನೀಡಿ ಎಂದು ಕೇಳಿದ್ದೇವೆ. ಆದರೆ, ಅವರು ಇನ್ನೂ ಇದಕ್ಕೆ ಅವಕಾಶ ನೀಡುತ್ತಿಲ್ಲ.

7 ಸಬ್ಜೆಕ್ಟ್ ಗಳನ್ನು ಓದಿಕೊಳ್ಳಬೇಕು. ಪರೀಕ್ಷೆ ಸಹ ಅಷ್ಟೇನೂ ಸುಲಭವಾಗಿ ಇರುವುದಿಲ್ಲ. ಈ ಹಿಂದೆ ಪರೀಕ್ಷೆ ನಡೆಸಿದ ಸಂದರ್ಭಗಳಲ್ಲಿ ಎರಡು ದಿನ ಅಂತರ ನೀಡುತ್ತಿದ್ದರು. ಆದರೆ ಈ ಬಾರಿ ಮಾತ್ರ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.