ETV Bharat / state

ಶಾಂತಿಯುತ ಉಪಸಮರ: ಕೊರೊನಾ ಭೀತಿ ಮಧ್ಯೆ ಮತದಾರರಿಂದ ನೀರಸ ಮತದಾನ - ಮೂರು ಉಪಚುನಾವಣೆಗಳು,

ನಿನ್ನೆ ನಡೆದ ಮೂರು ಕ್ಷೇತ್ರದ ಉಪಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕೊರೊನಾ ಭೀತಿಯಿಂದ ನೀರಸ ಮತದಾನ ನಡೆದಿದೆ.

Voting low, Voting low in Three by election, Three by polls voting, Three by polls voting news, ಕೊರೊನಾ ಭೀತಿ, ಕೊರೊನಾ ಭೀತಿ ಮಧ್ಯೆ ನೀರಸ ಮತದಾನ, ಮೂರು ಉಪಚುನಾವಣೆಗಳು, ಮೂರು ಉಪಚುನಾವಣೆಗಳು ಸುದ್ದಿ,
ಕೊರೊನಾ ಭೀತಿ ಮಧ್ಯೆ ಮತದಾರರಿಂದ ನೀರಸ ಮತದಾನ
author img

By

Published : Apr 18, 2021, 5:41 AM IST

ಬೆಂಗಳೂರು: ಕೊರೊನಾ ಎರಡನೇ ಅಲೆಯ ಅಬ್ಬರದ ನಡುವೆ ನಡೆದ ಜಿದ್ದಾಜಿದ್ದಿನಿಂದ ಕೂಡಿದ ಮೂರು ಕ್ಷೇತ್ರಗಳ ಉಪಸಮರ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಸಮರ ಶಾಂತಿಯುತವಾಗಿ ನೆರವೇರಿದೆ. ಆದರೆ ಕೊರೊನಾ ಎರಡನೇ ಅಲೆ ಆರ್ಭಟದ ಮಧ್ಯೆ ನಡೆದ ಉಪಸಮರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿದೆ. ಕೊರೊನಾ ಭೀತಿ ಹಿನ್ನೆಲೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಮುಖಮಾಡಿಲ್ಲ.

ಚುನಾವಣಾ ಆಯೋಗ ನೀಡಿದ ಅಂಕಿಅಂಶದ ಪ್ರಕಾರ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಅತಿ ಕಡಿಮೆ ಮತದಾನ ನಡೆದಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಿನ್ನೆ ನಡೆದ ಉಪಚುನಾವಣೆಯಲ್ಲಿ ಕೇವಲ 54.61% ಮತದಾನ ಆಗಿದೆ. 2019ರಲ್ಲಿ ನಡೆದ ಸಾರ್ವತ್ರಿಕಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ 67.21% ಮತದಾನ ನಡೆದಿತ್ತು.

ಇತ್ತ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಸಮರದಲ್ಲೂ ಕಡಿಮೆ ಪ್ರಮಾಣದ ಮತದಾನ ಆಗಿದೆ. ನಿನ್ನೆ ನಡೆದ ಉಪಚುನಾವಣೆಯಲ್ಲಿ 59.57% ಮತದಾನ ಆಗಿದೆ. 2018ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 64.85% ಮತದಾನ ಆಗಿತ್ತು.

ಇತ್ತ ಮಸ್ಕಿ ಕ್ಷೇತ್ರದಲ್ಲಿ ಮತದಾರರು ಉತ್ತಮ ಸ್ಪಂದನೆ ನೀಡಿದ್ದಾರೆ. ಉಪಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 70.48% ಮತದಾನ ಆಗಿದೆ. ಅದೇ ಕಳೆದ ವಿಧಾನಸಭಾ ಚುನಾವಣೆ ವೇಳೆ 68.98% ಮತದಾನ ಆಗಿತ್ತು. ಕಳೆದ ಬಾರಿಗಿಂತ ಈ ಉಪಸಮರದಲ್ಲಿ ಹೆಚ್ಚಿನ ಮತದಾನ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.