ETV Bharat / state

ಮತದಾರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿದ್ದರೆ ಆಕ್ಷೇಪಣೆ ಸಲ್ಲಿಸಲು ಮತ್ತೆ ಅವಕಾಶ

author img

By

Published : Mar 21, 2023, 5:26 PM IST

ಸ್ಥಳಾಂತರಿತ ಮತ್ತು ನಿಧನರಾದವರನ್ನು ಮತದಾರರೆಂದು ಗುರುತಿಸಲು ಚುನಾವಣಾಧಿಕಾರಿಗಳಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

election
ಚುನಾವಣೆ

ಬೆಂಗಳೂರು : ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್​ ಆಗಿರುವ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಮತ್ತೆ ಅವಕಾಶವನ್ನು ಚುನಾವಣಾಧಿಕಾರಿ ಕಲ್ಪಿಸಿಕೊಟ್ಟಿದ್ದಾರೆ. ಶಿವಾಜಿನಗರ, ಶಾಂತಿನಗರ ಹಾಗೂ ರಾಜರಾಜೇಶ್ವರಿ ‌ನಗರ ಕ್ಷೇತ್ರದಲ್ಲಿ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದರು.

ಈ ಸಂಬಂಧ ಪ್ರತಿಕಾ ಪ್ರಕಟಣೆ ಹೊರಡಿಸಿರುವ ಚುನಾವಣಾಧಿಕಾರಿಗಳು, ಮತದಾರರ ಹೆಸರು ಡಿಲೀಟ್ ಪ್ರಕ್ರಿಯೆಯ ಮುನ್ನ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿದೆ. ಸ್ಥಳಾಂತರಿತ ಮತ್ತು ನಿಧನರಾದವರನ್ನು ಮತದಾರರೆಂದು ಗುರುತಿಸಲು ಸಾಕಷ್ಟು ಪರಿಶೀಲನೆ ನಡೆಸಬೇಕು. ಮತದಾರರ ಪಟ್ಟಿಯಿಂದ ತಪ್ಪಾಗಿ ಹೆಸರು ಡಿಲೀಟ್ ಮಾಡುವ ಮೂಲಕ ಯಾರೊಬ್ಬ ಮತದಾರನು ಮತ ಹಕ್ಕಿನಿಂದ ವಂಚಿತನಾಗಬಾರದು. ಈ ನಿಟ್ಟಿನಲ್ಲಿ ಇನ್ನೊಂದು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮತದಾರರಿಗೆ ಸಾಮಾನ್ಯ ನೋಟಿಸ್ : ಶಾಂತಿನಗರ, ರಾಜರಾಜೇಶ್ವರಿ ನಗರ, ಶಿವಾಜಿನಗರ ಕ್ಷೇತ್ರದಲ್ಲಿ ಸ್ಥಳ ತಪಾಸಣೆ ಮತ್ತು ಮನೆ ಮನೆ ಸರ್ವೆ ಮೂಲಕ 16,040 ಸ್ಥಳಾಂತರಿತ ಹಾಗೂ ನಿಧನರಾದ ಮತದಾರರನ್ನು ಗುರುತಿಸಲಾಗಿದೆ. ಈ ಪಟ್ಟಿಯನ್ನು ರಾಜಕೀಯ ಪಕ್ಷಗಳ ಜೊತೆಗೂ ಹಂಚಿಕೊಳ್ಳಲಾಗಿದೆ. ಈ ಸಂಬಂಧ ಹೆಸರು ಡಿಲೀಟ್ ಆಗಿರುವುದನ್ನು ಸರಿಪಡಿಸಲು ಏಳು ದಿನಗಳ ಸಾಮಾನ್ಯ ನೋಟಿಸ್ ನೀಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಹೇಳಿದರು.

ಮತದಾರರನ್ನು ಗುರುತಿಸುವ ಕಾರ್ಯ : ಆರ್.ಆರ್.ನಗರ, ಶಾಂತಿನಗರ ಮತ್ತು ಶಿವಾಜಿನಗರದಲ್ಲಿ ಸ್ಥಳಾಂತರಿತ ಹಾಗೂ ನಿಧನರಾದ ಮತದಾರರ ಹೆಸರು ಡಿಲೀಟ್ ಮಾಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ಈಗಾಗಲೇ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಾಕಷ್ಟು ಪರಿಶೀಲನೆಯ ಬಳಿಕ ಮೂರು ಕ್ಷೇತ್ರಗಳಲ್ಲಿ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಹೆಸರನ್ನು ಗುರುತಿಸಲಾಗಿದೆ. ಅದರಂತೆ ಶಿವಾಜಿನಗರದಲ್ಲಿ ಸ್ಥಳಾಂತರಿತ ಮತದಾರರು 8,281, ಸಾವಿಗೀಡಾದ ಮತದಾರರು 1,684, ಶಾಂತಿನಗರದಲ್ಲಿ 2,247 ಸ್ಥಳಾಂತರಿತ ಹಾಗೂ 526 ನಿಧನ ಹೊಂದಿದ ಮತದಾರರು ಮತ್ತು ಆರ್.ಆರ್. ನಗರದಲ್ಲಿ ಸ್ಥಳಾಂತರಿತ 2,547, ನಿಧನ ಹೊಂದಿದ 755 ಮತದಾರರನ್ನು ಗುರುತಿಸಲಾಗಿದೆ.

ಬಾಧಿತ ಮತದಾರರಿಗೆ ಮತ್ತೊಂದು ಅವಕಾಶ : ಈ ಪಟ್ಟಿಯನ್ನು ರಾಜಕೀಯ ಪಕ್ಷಗಳ ಜೊತೆಗೂ ಹಂಚಲಾಗಿದೆ. ಜೊತೆಗೆ ಮಾ.4ಕ್ಕೆ ಚುನಾವಣಾ ಆಯೋಗಕ್ಕೆ ಸ್ಥಳಾಂತರಿತ ಮತ್ತು ನಿಧನರಾದ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಮತದಾರರ ಪಟ್ಟಿಯಿಂದ 16,040 ಹೆಸರುಗಳು ಡಿಲೀಟ್ ಮಾಡುವ ಮುನ್ನ ಬಾಧಿತ ಮತದಾರರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಅದರಂತೆ ಹೆಸರು ಡಿಲೀಟ್ ಆಗುವ ಮತದಾರರ ಪಟ್ಟಿಯನ್ನು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಹೆಸರು ಡಿಲೀಟ್ ಆಗುವ ಪಟ್ಟಿಯಲ್ಲಿನ‌ ಮತದಾರ ಆಕ್ಷೇಪಣೆ ಇದ್ದರೆ ಸಲ್ಲಿಸಲು ಏಳು ದಿನಗಳ ಅವಕಾಶ ನೀಡಲಾಗುವುದು. ಏಳು ದಿನಗಳ ನೋಟೀಸ್ ಅವಧಿ ಮುಗಿದ ತಕ್ಷಣ ಆಕ್ಷೇಪಣೆಗಳನ್ನು ಪರಿಶೀಲಿಸಿ ಬಳಿಕ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಸಂಬಂಧ ಅಂತಿಮ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಚಿವ ಸಂಪುಟ ಸಭೆ ಮಾ.24 ಕ್ಕೆ ಮುಂದೂಡಿಕೆ : ಮಹತ್ವದ ವಿಷಯಗಳನ್ನು ಚರ್ಚೆ ಮಾಡಿ ಅನುಮೋದನೆ ಗೊಳಿಸುವ ಸಚಿವ ಸಂಪುಟ ಸಭೆಯನ್ನು ಮಾ.24 ಕ್ಕೆ ಮುಂದೂಡಲಾಗಿದೆ. ಈ ಮೊದಲು ಮಾ.23 ಕ್ಕೆ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಮರುದಿನಕ್ಕೆ ಮುಂದೂಡಲಾಗಿದ್ದು, ಅಂದರೆ ಮಾ.24ರ ಶುಕ್ರವಾರದಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕರೆಯಲಾಗಿದೆ ಎಂದು ಸರ್ಕಾರದ ಜಂಟಿ ಕಾರ್ಯದರ್ಶಿ ಆರ್. ಚಂದ್ರಶೇಖರ್ ಹೇಳಿದರು.

ಇದು ಆಡಳಿತಾರೂಢ ಬಿಜೆಪಿ ಸರ್ಕಾರದ ಕೊನೆ ಸಚಿವ ಸಂಪುಟ ಸಭೆಯಾಗಲಿದ್ದು, ಸರ್ಕಾರ ಕೆಲವು ಮಹತ್ವದ ಯೋಜನೆಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ತಿಂಗಳ ಅಂತ್ಯಕ್ಕೆ ಕೇಂದ್ರ ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕೊನೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಘೋಷಣೆಗಳನ್ನು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :ಎಪಿಎಲ್ ಕಾರ್ಡ್​ದಾರರಿಗೂ ಉಚಿತ ಡಯಾಲಿಸಿಸ್ ಚಿಕಿತ್ಸೆ ಚಿಂತನೆ: ಸಚಿವ ಸೋಮಣ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.