ETV Bharat / state

ಬಿಎಂಟಿಸಿಗೆ ಹೊರೆಯಾಗುತ್ತಿರುವ ವೋಲ್ವೋ ಬಸ್‌ಗಳು: ನಿರ್ವಹಣೆಗೂ ಸಾಕಾಗದ ಸಂಪಾದನೆ - 80 to 90 crore loss from Volvo bus

ಆರ್‌.ಅಶೋಕ್​ ಸಾರಿಗೆ ಸಚಿವರಾಗಿದ್ದ ಕಾಲಾವಧಿಯಲ್ಲಿ ಬಿಎಂಟಿಸಿಗೆ 840 ಐಷಾರಾಮಿ ಬಸ್​ಗಳು ಸೇರ್ಪಡೆಯಾಗಿದ್ದವು. ಪ್ರತಿ ವರ್ಷ ಈ ವೋಲ್ವೋ ಬಸ್​ಗಳಿಂದ 80 ರಿಂದ 90 ಕೋಟಿ ರೂ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ.

Volvo buses are the burden of the BMTC
ನಿರ್ವಹಣೆಗೂ ಸಾಕಾಗದ ಸಂಪಾದನೆ
author img

By

Published : Apr 27, 2022, 6:20 PM IST

Updated : Apr 28, 2022, 11:26 AM IST

ಬೆಂಗಳೂರು: ಬಿಎಂಟಿಸಿ ನಿಗಮದ ಪರಿಸ್ಥಿತಿ ಸದ್ಯ 'ಬಿಸಿ ತುಪ್ಪ ನುಂಗುವ ಹಾಗೂ ಇಲ್ಲ, ಉಗುಳುವ ಹಾಗೂ ಇಲ್ಲ' ಎಂಬಂತಾಗಿದೆ. ಕೋಟಿ ಕೋಟಿ ರೂ ತೆತ್ತು ಖರೀದಿ ಮಾಡಿರುವ ಬಸ್​ಗಳಿಂದ ನಿಗಮಕ್ಕೆ ನಯಾಪೈಸೆ ಲಾಭ ಬರುತ್ತಿಲ್ಲವಂತೆ. ಹಾಗಂತ ಬಸ್ ಓಡಿಸಿಲ್ಲ ಅಂದ್ರೆ ಜನರ ಕೋಪಕ್ಕೂ ಗುರಿಯಾಗಬೇಕಾದ ಪರಿಸ್ಥಿತಿ ಇದೆ.

ವೋಲ್ವೋ ಬಸ್ ಪ್ರಯಾಣಿಕರನ್ನು ಸೆಳೆಯಲು ಎಷ್ಟೇ ಕಸರತ್ತು ಮಾಡುತ್ತಿದ್ದರೂ ಪ್ರಯೋಜವಾಗಿಲ್ಲ. ಹೀಗಾಗಿ ನಿಗಮಕ್ಕೆ ಈ ಐಷಾರಾಮಿ ಬಸ್​ಗಳ ಸಹವಾಸ ಸಾಕು ಅನ್ನಿಸಿಬಿಟ್ಟಿದೆ. ಇವುಗಳ ನಿರ್ವಹಣೆ ನಿಗಮಕ್ಕೆ ತಲೆನೋವು ತಂದಿದ್ದು, ಪ್ರತಿ ವರ್ಷ ಕೋಟಿ ಕೋಟಿ ರೂ ಹೊರೆ ಬೀಳುತ್ತಿದೆ.

ಆರ್‌.ಅಶೋಕ್​ ಸಾರಿಗೆ ಸಚಿವರಾಗಿದ್ದ ಕಾಲಾವಧಿಯಲ್ಲಿ ಬಿಎಂಟಿಸಿಗೆ 840 ಐಷಾರಾಮಿ ಬಸ್​ಗಳು ಸೇರ್ಪಡೆಯಾದ್ದವು. ಪ್ರತಿ ವರ್ಷ ಈ ವೋಲ್ವೋ ಬಸ್ ಕಾರ್ಯಾಚರಣೆಯಿಂದ 80 ರಿಂದ 90 ಕೋಟಿ ರೂ ನಷ್ಟವಾಗಿದೆ. ಪ್ರತಿ ಕಿಮೀ ಮೀಟರ್​ ಕಾರ್ಯಾಚರಣೆಯಿಂದ 70 ರೂ ಆದಾಯ ಬರುತ್ತಿದೆ. ಆದರೆ ಕಾರ್ಯಾಚರಣೆ ವೆಚ್ಚವೇ 85 ರೂ ಬರುತ್ತಿದೆ. ಆದರೆ, ಕಳೆದೆರಡು ವರ್ಷದಿಂದ ಕೋವಿಡ್ ಕಾರಣದಿಂದ ಮೂಲೆ ಸೇರಿದ್ದ ಈ ಬಸ್​ಗಳು ನೂರಾರು ಕೋಟಿ ನಷ್ಟ ಉಂಟು ಮಾಡಿವೆ. ಬಿಎಂಟಿಸಿ ನೀಡಿರುವ ಅಂಕಿ ಅಂಶಗಳ ಪ್ರಕಾರ, 2020-21 ರಲ್ಲಿ 281 ಕೋಟಿ ಹಾಗೂ 2021- 22 ರ ಸಾಲಿನಲ್ಲಿ 268 ಕೋಟಿ ನಷ್ಟವಾಗಿದೆ.

ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್

ಪ್ರತಿ ವರ್ಷ ಬಿಎಂಟಿಸಿಗೆ ಆಗಿರುವ ನಷ್ಟದ ವಿವರ ಹೀಗಿದೆ..:

  • 2015-2016-40 ಕೋಟಿ
  • 2016-2017-45 ಕೋಟಿ
  • 2017-2018-50 ಕೋಟಿ
  • 2018-2019-90 ಕೋಟಿ
  • 2020-2021-281 ಕೋಟಿ
  • 2021-2022-268 ಕೋಟಿ

ಪ್ರಸ್ತುತ ವೋಲ್ವೋ ಬಸ್​ಗಳು ನಗರದಲ್ಲಿ ಏರ್ ಪೋರ್ಟ್, ಕಾಡುಗೋಡಿ, ಬನ್ನೇರುಘಟ್ಟ ಸೇರಿದಂತೆ ಆಯ್ದ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ವಿಮಾನ ನಿಲ್ದಾಣ ಹಾಗೂ ಐಟಿ ಬಿಟಿ ಪ್ರದೇಶಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಂದ ಬಸ್​ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಆದಾಯಕ್ಕಿಂತ ಕಾರ್ಯಾಚರಣೆ ವೆಚ್ಚವೇ ಅಧಿಕ. ಆದರೂ ಪ್ರಯಾಣಿಕರಿಗೆ ತೊಂದರೆಯಾಗದಂತೆ ವೋಲ್ವೋ ಸೇವೆ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಅನಾವಶ್ಯಕ ಕೋವಿಡ್‌ ನಿರ್ಬಂಧ ಇಲ್ಲ: ಸಿಎಂ ಬೊಮ್ಮಾಯಿ

ಕೊರೊನಾ ಮಹಾಮಾರಿಯಿಂದಾಗಿ 2020 ಮಾರ್ಚ್ ತಿಂಗಳಿಂದ ಈವರೆಗೆ ಸಾರಿಗೆ ಸಂಸ್ಥೆಗೆ ಸಾಕಷ್ಟು ನಷ್ಟವಾಗಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆ ಎಸಿ ಬಸ್​ಗಳನ್ನು ರಸ್ತೆ ಇಳಿಸಿಲ್ಲ ಜೊತೆಗೆ ಬಸ್ ಆರಂಭಿಸಿದ್ರೂ ಪ್ರಯಾಣಿಕರು ಈ ಬಸ್​ಗಳಲ್ಲಿ ಸಂಚರಿಸುತ್ತಿಲ್ಲ. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ದರದಲ್ಲಿ ಕಡಿತಗೊಳಿಸಿ ಕೆಲ ಎಸಿ ಬಸ್ಸುಗಳನ್ನು ರಸ್ತೆಗೆ ಇಳಿಸಿದ್ದೇವೆ ಎಂದು ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ವೋಲ್ವೋ ಬಸ್​​ಗಳ ನಿರ್ವಹಣೆ ವೆಚ್ಚ ಅಧಿಕವಾಗಿರುತ್ತಿದೆ. ಅಲ್ಲದೆ ಈ ಬಸ್​​ಗಳ ಮೈಲೇಜ್ ಕೂಡ ಕಡಿಮೆ ಇದೆ. ಹಾಗಾಗಿ ಲಾಭ ತರೋಕೆ ಆಗ್ತಿಲ್ಲ. ಇದು ಅಧಿಕಾರಿಗಳಿಗೆ ಇನ್ನಷ್ಟು ಸಂಕಷ್ಟ ತಂದಿದ್ದು, ವೋಲ್ವೋ ಯಾಕಪ್ಪ ಖರೀದಿ ಮಾಡಿದ್ವಿ ಅನ್ನೋ ಸ್ಥಿತಿ ನಿರ್ಮಾಣವಾಗಿದೆ.

Last Updated : Apr 28, 2022, 11:26 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.