ಬೆಂಗಳೂರು : ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಗರದ ಬಸವನಗುಡಿ ಹಾಗೂ ಮಲ್ಲೇಶ್ವರಂ ಏರಿಯಾಗಳನ್ನು ಸ್ವಯಂ ಪ್ರೇರಿತ ಲಾಕ್ಡೌನ್ಗೆ ಒಳಪಡಿಸಿದ್ದಾರೆ.
ಪ್ರತಿದಿನ ನಗರದಲ್ಲಿ 600-700 ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಇದರಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆ. ಮಂಗಳವಾರ ಬಸವನಗುಡಿಯ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಇದೀಗ ಸರ್ಕಾರ ಲಾಕ್ಡೌನ್ ಘೋಷಿಸುವ ಮುನ್ನವೇ ಮಲ್ಲೇಶ್ವರಂನಲ್ಲಿ ಕೂಡ ಸ್ವಯಂಪ್ರೇರಿತ ಬಂದ್ ಮಾಡಿದ್ದಾರೆ.
ಇಂದಿನಿಂದ ಜುಲೈ 6ರವರೆಗೆ ವಾಣಿಜ್ಯ-ವಹಿವಾಟು ಸ್ಥಗಿತಗೊಳ್ಳಲಿದೆ. ಮಲ್ಲೇಶ್ವರಂ ವ್ಯಾಪಾರಿಗಳ ಸಂಘದಿಂದ ಅಂಗಡಿ, ಶೋ ರೂಮ್, ಟ್ರೇಡರ್ಸ್ ಸೇರಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಮಾಡಿದ್ದಾರೆ.