ETV Bharat / state

ಸಿಂಧೂರಿ, ರೂಪಾ ಅಮಾನತಿಗೆ ವಿಶ್ವನಾಥ್ ಆಗ್ರಹ: ಬಿಗಿ ಕ್ರಮದ ಭರವಸೆ ನೀಡಿದ ಸರ್ಕಾರ - ಇಬ್ಬರು ಉನ್ನತ ಅಧಿಕಾರಿಗಳನ್ನು ಅಮಾನತು

ವರ್ಗಾವಣೆ ಬದಲು ಇಬ್ಬರು ಉನ್ನತ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ವಿರೋಧ ಪಕ್ಷದ ನಾಯಕರು ಮಾತ್ರವಲ್ಲದೇ ಸ್ವಪಕ್ಷದ ನಾಯಕರೂ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

Higher Education Minister Dr Aswatthanarayan
ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ್
author img

By

Published : Feb 22, 2023, 2:01 PM IST

ಬೆಂಗಳೂರು: ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರನ್ನು ಸ್ಥಳ ನಿಯುಕ್ತಿಗೊಳಿಸದೇ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿದ್ದು, ಈ ಪ್ರಕರಣದಲ್ಲಿ ಸರ್ಕಾರ ಬಿಗಿಯಾದ ಕ್ರಮ ಕೈಗೊಳ್ಳಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಹೆಚ್ ವಿಶ್ವನಾಥ್, ರಾಜ್ಯದ ಹಿರಿಯ ಅಧಿಕಾರಿಗಳಾದ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬೀದಿ ಜಗಳ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಧಾರಾವಾಹಿಯಾಗಿ ಮೂರು ದಿನಗಳಿಂದ ಪ್ರಾರಂಭವಾಗಿದೆ. ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ. ಮಹೇಶ್ ನಡುವಿನ ಆರೋಪಗಳ ಬಗ್ಗೆ ಸಂಧಾನವನ್ನು ಖಾಸಗಿ ಹೋಟೆಲ್ ಒಂದರಲ್ಲಿ ನಡೆಸಿದ ಐಎಎಸ್ ಅಧಿಕಾರಿ ಪಿ ಮಣಿವಣ್ಣನ್ ಅವರಿಗೆ ಸರ್ಕಾರ ಅಧಿಕಾರ ಕೊಟ್ಟಿದೆಯಾ? ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ಮಾಡಿರುವ ಆರೋಪಗಳು ಇನ್ನೂ ಮುಕ್ತಾಯವಾಗದೇ ಇರುವ ಸಂದರ್ಭದಲ್ಲಿ ಸಂಧಾನ ನಡೆಸಲು ಪ್ರಯತ್ನಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರೂಪಾ ಮೌದ್ಗಿಲ್ ಮೇಲೂ ಸಹ ಕರಕುಶಲ ನಿಗಮದಲ್ಲಿ ಹಲವಾರು ಆಪಾದನೆಗಳಿದ್ದು, ಇಲಾಖೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿಯವರು ಮೌನವಾಗಿದ್ದಾರೆ. ಇವೆಲ್ಲವನ್ನೂ ಮಾಧ್ಯಮಗಳ ಮೂಲಕ ನೋಡುತ್ತಿರುವ ನಾಡಿನ ಜನರು ನಮ್ಮ ಆಡಳಿತದ ವ್ಯವಸ್ಥೆಯ ಬಗ್ಗೆ ಕೆಟ್ಟದಾಗಿ ಅರ್ಥೈಸುತ್ತಿದ್ದಾರೆ. ಮತ್ತು ಸರ್ಕಾರದ ಕ್ಷಮತೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವನಾಥ ಹೇಳಿದರು.

ಸಾಮಾಜಿಕ ಜಾಲತಾಣಕ್ಕೆ ಇವರ ಪರವಾಗಿ ಹಣ ಕಟ್ಟುತ್ತಿರುವವರು ಇವರೇ ಸೃಷ್ಟಿಸಿಕೊಂಡಿರುವ ಇವರ ಅಭಿಮಾನಿಗಳು ಎಂದು ಅವರೇ ಹೇಳಿಕೊಳ್ಳುತ್ತಿದ್ದಾರೆ. ನಾಡಿನ ಆಡಳಿತ ಮತ್ತು ಅಭಿವೃದ್ಧಿಯ ಹಿತಕ್ಕೆ ಮಾರಕವಾಗಿರುವ ಇಬ್ಬರು ಮಹಿಳಾ ಅಧಿಕಾರಿಗಳನ್ನು ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಟ್ಟು, ವಿಚಾರಣೆ ಪ್ರಾರಂಭಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಂಡು ಅಧಿಕಾರಿಗಳ ಇಂತಹ ನಡವಳಿಕೆಗಳನ್ನು, ಸರ್ಕಾರ ಸಹಿಸುವುದಿಲ್ಲ ಎಂದು ಜನರಲ್ಲಿ ಭಾವನೆ ಮೂಡಿಸಬೇಕು ಎಂದರು.

ನೈತಿಕತೆ ಕಡೆದುಕೊಂಡ ಇಂತಹ ಅಧಿಕಾರಿಗಳು ನಮ್ಮ ನಾಡಿಗೆ ಬೇಕಾ? ಕೂಡಲೇ ಈ ಅಧಿಕಾರಿಗಳನ್ನು ಅಮಾನತ್ತು ಮಾಡಿ ತನಿಖೆ ನಡೆಸಬೇಕು ಎಂದು ವಿಶ್ವನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥನಾರಾಯಣ್, ಸರ್ಕಾರದ ಎಲ್ಲ ವಿಚಾರಗಳನ್ನು ಸಾರ್ವಜನಿಕ ವಲಯದಲ್ಲಿ ತಿಳಿಸುವ ಅಧಿಕಾರಿಗಳು ಇವರು, ಈಗಾಗಲೇ ಈ ಚಟುವಟಿಕೆ ಗಮನಿಸಿ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇವೆ. ಆದರೆ, ಅವರಿಗೆ ಜಾಗ ನಿಯುಕ್ತಿಗೊಳಿಸಿಲ್ಲ, ಈ ಪ್ರಕರಣದಲ್ಲಿ ಬಿಗಿಯಾದ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಈ ಚರ್ಚೆ ನಡೆಯುವಾಗ ವಿಧಾನ ಪರಿಷತ್ತಿನ ಅಧಿಕಾರಿಗಳ ಗ್ಯಾಲರಿಯಲ್ಲಿ ರೂಪಾ ಮೌದ್ಗಿಲ್ ಪತಿ ಮನೀಷ್ ಮೌದ್ಗಿಲ್ ಪತಿ ಕುಳಿತಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಇಬ್ಬರು ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಿತ್ತು: ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.