ETV Bharat / state

ನಟಿ ರಾಗಿಣಿಯೊಂದಿಗಿನ ಮೆಸೇಜ್​, ಕಾಲ್​ ಲಿಸ್ಟ್​ ಡಿಲಿಟ್ ಮಾಡಿದ ವಿರೇನ್ ಖನ್ನಾ - viren khanna latest news

ರಾಗಿಣಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ವಿರೇನ್ ಖನ್ನಾ‌, ರಾಗಿಣಿ ಜೊತೆ ಮಾತನಾಡಿರುವ ಎಲ್ಲಾ ಡಯಲ್ ಲಿಸ್ಟ್ ಹಾಗೂ ಮೆಸೇಜ್​ಗಳನ್ನು ಡಿಲಿಟ್‌ ಮಾಡಿದ್ದಾನೆಂದು ತನಿಖೆ ವೇಳೆ ತಿಳಿದುಬಂದಿದೆ.

Viren Khanna
ವಿರೇನ್ ಖನ್ನಾ
author img

By

Published : Sep 6, 2020, 9:44 AM IST

ಬೆಂಗಳೂರು: ರಾಜಧಾನಿಯಲ್ಲಿ ಹೈ-ಫೈ ಪಾರ್ಟಿ ಆಯೋಜಿಸಿ ಪೆಡ್ಲರ್​ಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ವಿರೇನ್ ಖನ್ನಾ ನಟಿ ರಾಗಿಣಿ ದ್ವಿವೇದಿಯೊಂದಿಗೆ ನಂಟು ಹೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗ್ತಿದೆ.

ರಾಗಿಣಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾದ ವಿರೇನ್ ಖನ್ನಾ‌, ರಾಗಿಣಿ ಜೊತೆ ಮಾತನಾಡಿರುವ ಎಲ್ಲಾ ಡಯಲ್ ಲಿಸ್ಟ್ ಹಾಗೂ ಮೆಸೇಜ್​ಗಳನ್ನು ಡಿಲಿಟ್‌ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಸಿಸಿಬಿ ವಿರೇನ್​ ಖನ್ನಾ ವಿಚಾರಣೆ

ಡಿಲಿಟ್ ಮಾಡಿರುವ ಮೆಸೇಜ್ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದರೆ ನನಗೆ ರಾಗಿಣಿ ಪರಿಚಯವಿದೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಿದ್ದಾನೆ. ‌ವಿರೇನ್ ಖನ್ನಾ ಹೇಳಿಕೆಯಿಂದ ರಾಗಿಣಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಆಯೋಜಿಸಲಾದ ಹಲವು ಪಾರ್ಟಿಗಳಲ್ಲಿ ರಾಗಿಣಿ ವಿರೇನ್ ಖನ್ನಾನನ್ನು ಭೇಟಿ ಮಾಡಿದ್ದಳು ಎನ್ನಲಾಗ್ತಿದೆ. ಆರೋಪಿ ಹೇಳಿಕೆ ಮೇರೆಗೆ ರಾಗಿಣಿಯನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.