ಬೆಂಗಳೂರು: ಕಾರು ಚಾಲಕರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆೆ ಹೋದಾಗ, ಆಕ್ರೋಶಗೊಂಡ ಒಬ್ಬ ಚಾಲಕ ಮತ್ತೊಬ್ಬ ಚಾಲಕನ ಮೇಲೆ ಕಾರು ಹರಿಸುವ ರೀತಿಯಲ್ಲಿ ತಳ್ಳಿಕೊಂಡು ಹೋಗಿರುವ ಘಟನೆ ಹೆಬ್ಬಾಳ ಮೇಲು ಸೇತುವೆ ಮೇಲೆ ನಡೆದಿದೆ. ಘಟನೆ ನ.29ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
-
@blrcitytraffic @BlrCityPolice @3rdEyeDude vehicle number KA05 AL 7999. road rage between drivers on hebbal flyover on 29th morning 8:30-9, driver raging with another possible eitos driver today morning around 8:30-8:40 on hebbal flyover, pic.twitter.com/n6Zf9a3dVa
— Pradeep Herle (@pradeepherle) December 3, 2023 " class="align-text-top noRightClick twitterSection" data="
">@blrcitytraffic @BlrCityPolice @3rdEyeDude vehicle number KA05 AL 7999. road rage between drivers on hebbal flyover on 29th morning 8:30-9, driver raging with another possible eitos driver today morning around 8:30-8:40 on hebbal flyover, pic.twitter.com/n6Zf9a3dVa
— Pradeep Herle (@pradeepherle) December 3, 2023@blrcitytraffic @BlrCityPolice @3rdEyeDude vehicle number KA05 AL 7999. road rage between drivers on hebbal flyover on 29th morning 8:30-9, driver raging with another possible eitos driver today morning around 8:30-8:40 on hebbal flyover, pic.twitter.com/n6Zf9a3dVa
— Pradeep Herle (@pradeepherle) December 3, 2023
ಈ ಸಂಬಂಧ ಪ್ರದೀಪ್ ಹೆರ್ಲೆ ಎಂಬವರು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ, ತಪ್ಪಿತಸ್ಥ ಕಾರು ಚಾಲಕನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದಾರೆ. ಘಟನೆ ವೇಳೆ 2 ಕಾರಿನಲ್ಲಿ ಪ್ರಯಾಣಿಕರು ಇದ್ದರು ಎಂಬುದನ್ನು ಪ್ರದೀಪ್ ಹೆರ್ಲೆ ಉಲ್ಲೇಖಿಸಿದ್ದಾರೆ. ಅದಕ್ಕೆೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸರು, ಸಮೀಪದ ಸಂಚಾರ ಠಾಣೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆೆಲೆಯಲ್ಲಿ ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ಕೃತ್ಯ ಎಸಗಿದ ಕಾರು ಚಾಲಕನನ್ನು ಸಂಪರ್ಕಿಸಿ ಠಾಣೆಗೆ ಬರುವಂತೆ ಸೂಚಿಸಿದ್ದಾರೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ.29ರಂದು ಬೆಳಗ್ಗೆೆ 8 ಗಂಟೆಯಿಂದ 9ಗಂಟೆ ನಡುವೆ ಹೆಬ್ಬಾಳ ಮೇಲು ಸೇತುವೆಯಲ್ಲಿ ಇನೋವಾ ಮತ್ತು ಇಟಿಯಾಸ್ ಕಾರು ಚಾಲಕರ ನಡುವೆ ಕ್ಷುಲ್ಲಕ ವಿಚಾರಕ್ಕೆೆ ಜಗಳ ನಡೆದಿದೆ. ಇಟಿಯಾಸ್ ಕಾರು ಚಾಲಕ, ಮತ್ತೊಬ್ಬ ಚಾಲಕನ ಇನೋವಾ ಕಾರಿನ ಬಾನೆಟ್‌ಗೆ ಒರಗಿ ಜಗಳ ಮಾಡಿದ್ದಾನೆ. ಇದೇ ವೇಳೆ ಆಕ್ರೋಶಗೊಂಡ ಇನೋವಾ ಕಾರು ಚಾಲಕ, ಇಟಿಯಾಸ್ ಕಾರು ಚಾಲಕನನ್ನು ತಳ್ಳಿಕೊಂಡೇ ಸುಮಾರು 100 ಮೀಟರ್ ದೂರ ಹೋಗಿದ್ದಾನೆ.
ಕೆಎ-05 ಎಎಲ್-7999 ಇನೋವಾ ಕಾರಿನ ಚಾಲಕನ ಕೃತ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಆಗಿತ್ತು. ಇದೀಗ ಪ್ರವೀಣ್ ಹರ್ಲೆ ಎಂಬವರು ವಿಡಿಯೋ ಎಕ್ಸ್ನಲ್ಲಿ ಪೋಸ್ಟ್ ಮಾಡಿ ತಪ್ಪಿತಸ್ಥ ಕಾರು ಚಾಲಕನ ವಿರುದ್ಧ ಕಾನೂನು ಕ್ರಮಕ್ಕೆೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಭೀಕರ ಕಾರು ಅಪಘಾತ: ಇಬ್ಬರು ಸಾವು, ಐವರಿಗೆ ಗಂಭೀರ ಗಾಯ
ಹಿಂದಿನ ಪ್ರಕರಣ: ಇದೇ ಘಟನೆ ತರಹ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಕಾರಿನ ಬಾನೆಟ್ ಮೇಲೆ ಅವರನ್ನು ಎಳೆದೊಯ್ದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿತ್ತು. ನವೆಂಬರ್ ತಿಂಗಳ ದೀಪಾವಳಿ ಸಮಯದಲ್ಲಿ ವಾಹನ ತಪಾಸಣೆ ನಡೆಯುತ್ತಿತ್ತು. ಈ ವೇಳೆ, ನಂಬರ್ ಪ್ಲೇಟ್ ಇಲ್ಲದ ಕಾರು ಬರುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಅದನ್ನು ತಡೆಯಲು ಮುಂದಾದಾಗ ಕಾರು ನಿಲ್ಲಿಸದೇ ಚಾಲಕ ಪೊಲೀಸ್ ಸಿಬ್ಬಂದಿಗೆ ಡಿಕ್ಕಿ ಹೊಡೆದು 300 ಮೀಟರ್ವರೆಗೆ ಎಳೆದೊಯ್ದಿದ್ದ.