ETV Bharat / state

Covid rules ಉಲ್ಲಂಘನೆ.. 2 ನೇ ಅವಧಿಯಲ್ಲಿ ದಾಖಲಾದ ಕೇಸ್​ಗಳೆಷ್ಟು ನೋಡೋದಾದರೆ?

ಅನಗತ್ಯವಾಗಿ ತಿರುಗಾಡುತ್ತಿದ್ದ 43,206 ದ್ವಿಚಕ್ರ, 2,326 ಆಟೋ, 3,083 ನಾಲ್ಕು ಚಕ್ರದ ವಾಹನ ಸೇರಿದಂತೆ ಒಟ್ಟು 48,615 ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಇದಲ್ಲದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (NDMA) ಅಡಿ ಬರೋಬ್ಬರಿ 722 ಕೇಸ್ ದಾಖಲಿಸಿ 473 ಜನರನ್ನು ಕಂಬಿ ಹಿಂದೆ ಕಳುಹಿಸಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ
ಕೋವಿಡ್ ನಿಯಮ ಉಲ್ಲಂಘನೆ
author img

By

Published : Jun 22, 2021, 7:33 PM IST

ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಬೆಂಗಳೂರಿಗೆ ವಿಧಿಸಲಾಗಿದ್ದ ಲಾಕ್​​ಡೌನ್​ನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ನಗರ ಪೊಲೀಸರು ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನಾದ್ಯಂತ ಕಳೆದ 2 ತಿಂಗಳಿನಿಂದಲೂ ಕೋವಿಡ್ ಭಯ, ಲಾಕ್ ಡೌನ್, ಎಲ್ಲಿ ನೋಡಿದ್ರೂ ಬ್ಯಾರಿಕೇಡ್ ಇದೆಲ್ಲದರ ನಡುವೆಯೂ ಡೋಂಟ್ ಕೇರ್ ಎಂಬಂತೆ ರಸ್ತೆಗಿಳಿದವರೇ ಹೆಚ್ಚು.

ಅಂಥವರಿಗೆ ಬಿಸಿ ಮುಟ್ಟಿಸಲು ಸಜ್ಜಾಗಿದ್ದ ಬೆಂಗಳೂರು ಪೊಲೀಸರು ಸಾಲು ಸಾಲು ಪ್ರಕರಣಗಳನ್ನ ದಾಖಲಿಸುವ ಮೂಲಕ ನಿರ್ಲಕ್ಷ್ಯ ತೋರಿದವರಿಗೆ ಎಚ್ಚರಿಕೆ ನೀಡಿದ್ದಾರೆ. ಕೊರೊನಾ 2.0 ಅವಧಿಯೊಂದರಲ್ಲೇ ಫೇಸ್ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡದೇ ಇರುವ ಆರೋಪದಡಿ ಬರೋಬ್ಬರಿ 1,86,549 ಪ್ರಕರಣ ದಾಖಲಿಸಿ, ಒಟ್ಟು 4.54 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ.

ಅನಗತ್ಯವಾಗಿ ತಿರುಗಾಡುತ್ತಿದ್ದ 43,206 ದ್ವಿಚಕ್ರ, 2,326 ಆಟೋ, 3,083 ನಾಲ್ಕು ಚಕ್ರದ ವಾಹನ ಸೇರಿದಂತೆ ಒಟ್ಟು 48,615 ವಾಹನಗಳನ್ನ ಜಪ್ತಿ ಮಾಡಿದ್ದಾರೆ. ಇದಲ್ಲದೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (NDMA) ಅಡಿ ಬರೋಬ್ಬರಿ 722 ಕೇಸ್ ದಾಖಲಿಸಿ 473 ಜನರನ್ನು ಕಂಬಿ ಹಿಂದೆ ಕಳುಹಿಸಲಾಗಿದೆ. ಕೆಲವೆಡೆ ಲಾಕ್​ಡೌನ್ ನಿಯಮ ಉಲ್ಲಂಘಿಸುತ್ತಿದ್ದವರಿಂದ ಮುಚ್ಚಳಿಕೆ ಬರೆಸಿಕೊಂಡು ವಾರ್ನಿಂಗ್ ನೀಡಿ ಕಳುಹಿಸಲಾಗಿದೆ.

ಕೊರೊನಾ ಸೋಂಕಿನ ಸರಪಳಿ ಕತ್ತರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಇತ್ತ ನಗರದಾದ್ಯಂತ ದಾಖಲಾದ ಪ್ರಕರಣಗಳ ಅಂಕಿ- ಅಂಶಗಳನ್ನ ಗಮನಿಸಿದಾಗ ಬೆಂಗಳೂರಿಗರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.