ETV Bharat / state

ನಕ್ಷೆ ನಿಯಮ ಉಲ್ಲಂಘನೆ ಆರೋಪ: ಮಾಲ್ ಆಫ್ ಏಷ್ಯಾಗೆ ಬಿಬಿಎಂಪಿಯಿಂದ ನೋಟಿಸ್ - ನಕ್ಷೆ ನಿಯಮ ಉಲ್ಲಂಘನೆ

ನಕ್ಷೆ ನಿಯಮ ಉಲ್ಲಂಘನೆ ಮಾಡಿರುವ ಹಿನ್ನಲೆ ಬೆಂಗಳೂರು ಮಹಾನಗರ ಪಾಲಿಕೆಯಿಂದ ಮಾಲ್ ಆಫ್ ಏಷ್ಯಾಗೆ ನೋಟಿಸ್ ಜಾರಿಗೊಳಿಸಲಾಗಿದೆ.

Violation of map rules  notice to Mall of Asia  ನಕ್ಷೆ ನಿಯಮ ಉಲ್ಲಂಘನೆ  ಮಾಲ್ ಆಫ್ ಏಷ್ಯಾ
ನಕ್ಷೆ ನಿಯಮ ಉಲ್ಲಂಘನೆ: ಮಾಲ್ ಆಫ್ ಏಷ್ಯಾಗೆ ಪಾಲಿಕೆಯಿಂದ ನೋಟಿಸ್ ಜಾರಿ
author img

By ETV Bharat Karnataka Team

Published : Jan 4, 2024, 5:58 PM IST

ಬೆಂಗಳೂರು: ಕನ್ನಡ ನಾಮಫಲಕ ಅಳವಡಿಕೆ ಹಾಗೂ ಸಂಚಾರ ದಟ್ಟಣೆ ವಿಚಾರವಾಗಿ ವಿವಾದದಕ್ಕೆ ಗುರಿಯಾಗಿದ್ದ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಾಲ್ ಆಫ್ ಏಷ್ಯಾಗೆ ಬಿಬಿಎಂಪಿ ಸೇರಿದಂತೆ ವಿವಿಧ ಸಂಸ್ಥೆಗಳು ಸಾಲು ಸಾಲಾಗಿ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ. ಇದನ್ನು ಗಮನಿಸಿದರೆ, ಮಾಲ್ ಆಫ್ ಏಷ್ಯಾ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಪಾರ್ಕಿಂಗ್ ಹೆಸರಿನಲ್ಲಿ ಅನುಮತಿ ಪಡೆದು ಅಲ್ಲಿ ಪಾರ್ಟಿ ಹಾಲ್ ನಿರ್ಮಾಣ ಮಾಡಿರುವ ಆರೋಪ ಇದೀಗ ಕೇಳಿಬಂದಿದ್ದು, ಅನಧಿಕೃತವಾಗಿ ಪಾರ್ಟಿ ಹಾಲ್ ನಿರ್ಮಿಸಿರುವ ಕುರಿತು ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಪಾಲಿಕೆಯ ನಕ್ಷೆ ನಿಯಮ ಉಲ್ಲಂಘಿಸಿರುವ ಮಾಲ್ ಮಾಲೀಕರು ಸೂಕ್ತ ಸಮಾಜಾಯಿಷಿ ನೀಡುವಂತೆ ಅಧಿಕಾರಿಗಳು ಕೇಳಿದ್ದಾರೆ.

ಮತ್ತೊಂದೆಡೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ನಿಯಮಗಳ ಉಲ್ಲಂಘನೆ ಆರೋಪ ಕೇಳಿಬಂದಿತ್ತು. ಅದರಲ್ಲೂ ಹೆದ್ದಾರಿ ನಿಯಮಗಳನ್ನು ಗಾಳಿಗೆ ತೂರಿ ಮಾಲ್‌ ಆಫ್ ಏಷ್ಯಾ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನಲಾಗುತ್ತಿತ್ತು. ಈಗ ಬಿಬಿಎಂಪಿಯ ನಕ್ಷೆಯನ್ನು ಬದಲಾಯಿಸಿ ಕಾಮಗಾರಿ ಮಾಡಿರುವ ಆರೋಪ ಕೇಳಿಬಂದಿದೆ.

ಮತ್ತೊಂದೆಡೆ 90 ಡೆಸಿಬಲ್ ಶಬ್ದ ಹೊರ ಬರುತ್ತಿರುವ ಕಾರಣದಿಂದಲೂ ವಾಯು ಮಾಲೀನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಸುತ್ತ ಮುತ್ತಲಿನ ಅಪಾರ್ಟ್​ಮೆಂಟ್‌ನಲ್ಲಿ ನೆಲೆಸಿರುವ ನಮಗೆ ಮಾಲ್‌ನಿಂದ ಹಲವು ತೊಂದರೆಗಳು ಆಗುತ್ತಿವೆ. ಮಾಲ್‌ನಿಂದ ಬರುವ ಜನರೇಟರ್ ಶಬ್ದದಿಂದ ಮಾಲಿನ್ಯವಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಮಾಲ್ ಲೈಟಿಂಗ್ಸ್ ಅಪಾರ್ಟ್ಮೆಂಟ್ ನಿವಾಸಿಗಳ ನಿದ್ದೆಗೂ ಸಮಸ್ಯೆ ಉಂಟುಮಾಡುತ್ತಿದೆ ಎಂದು ನಿವಾಸಿಗಳು ದೂರಿದ್ದಾರೆ.

144 ಸೆಕ್ಷನ್ ಜಾರಿ ಮಾಡಿದ್ದ ನಗರ ಪೊಲೀಸರು: ಈ ಹಿಂದೆ ನಗರ ಪೊಲೀಸರು ಮಾಲ್ ಬಳಿ 144 ಸೆಕ್ಷನ್ ಜಾರಿ ಮಾಡಿದ್ದರು. ರಸ್ತೆಗೆ ಬೈಕ್ ನಿಲ್ಲಿಸದಂತೆ ಅನೇಕ ಬಾರಿ ಪೊಲೀಸರು ಎಚ್ಚರಿಸಿದ್ದರು. ದುಬಾರಿ ಶುಲ್ಕ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು, ಮಾಲ್ ಸಿಬ್ಬಂದಿ ತಮ್ಮ ಬೈಕ್‌ಗಳನ್ನು ಮಾಲ್ ಆವರಣದಲ್ಲಿ ಪಾರ್ಕ್ ಮಾಡದೆ ಸರ್ವಿಸ್ ರಸ್ತೆಯಲ್ಲಿ ಪಾರ್ಕಿಂಗ್ ಮಾಡುತ್ತಿದ್ದರು ಎಂದು ದೂರಲಾಗಿತ್ತು.

ಮಾಲ್ ಬೇಸ್ಮೆಂಟ್‌ನಲ್ಲಿ 230 ಕಾರುಗಳು ಹಾಗೂ 800 ಬೈಕ್‌ಗಳನ್ನು ನಿಲ್ಲಿಸುವಷ್ಟು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಪಾರ್ಕಿಂಗ್‌ಗೆ ದುಬಾರಿ ಶುಲ್ಕ ವಿ ಧಿಸಲಾಗುತ್ತಿದೆ. ಕಾರಿಗೆ ಗಂಟೆಗೆ 150 ರೂಪಾಯಿ ಹಾಗೂ ಬೈಕ್‌ಗೆ ಗಂಟೆಗೆ 100 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಮಾಲ್‌ನ 300 ಸಿಬ್ಬಂದಿ ಸಹಿತ ಮಾಲ್‌ಗೆ ಬರುವ ಜನರು ಸರ್ವೀಸ್ ರಸ್ತೆಯಲ್ಲೇ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದರು ಎನ್ನುವ ದೂರುಗಳು ಕೇಳಿಬಂದಿದ್ದವು.

ಇದನ್ನೂ ಓದಿ: ಹಿಂದೂ ಕಾರ್ಯಕರ್ತನ ಬಂಧನ: ರಾಮ ಭಕ್ತರಲ್ಲಿ ಭಯ ಹುಟ್ಟಿಸಲು ಹರಿಪ್ರಸಾದ್​ರಿಂದ ಹೇಳಿಕೆ; ಆರ್ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.