ಬೆಂಗಳೂರು: ಇಂದು ಮಧ್ಯಾಹ್ನ 1:15ಗೆ ಚಂದ್ರಯಾನ 2 ಮತ್ತೊಂದು ಯಶಸ್ಸಿನ ಮೆಟ್ಟಿಲು ಏರಿದೆ, ಚಂದ್ರನ ಕಕ್ಷೆಯ ಕೊನೆ ಸುತ್ತು ಮುಗಿಸಿದ ಆರ್ಬಿಟರ್ ವಿಕ್ರಂ ಲ್ಯಾಂಡರ್ನಿಂದ ಬೇರ್ಪಟ್ಟಿದೆ.
ಆರ್ಬಿಟರ್ ಹಾಗೂ ಲ್ಯಾಂಡರ್ನ ಆರೋಗ್ಯವನ್ನು ಹಾಗೂ ಅದರ ಚಲನವಲನವನ್ನು ಬೆಂಗಳೂರು ಬಳಿಯ ಬೇಲಾಳು ಮಿಷನ್ ಆಪರೇಷನ್ ಕಾಂಪ್ಲೆಕ್ಸ್ನಿಂದ ಗಮನಿಸಲಾಗುತ್ತಿದೆ. ಲ್ಯಾಂಡರ್ ಮತ್ತು ಆರ್ಬಿಟರ್ ಆರೋಗ್ಯ ಉತ್ತಮವಾಗಿದೆ ಎಂದು ಇದೇ ವೇಳೆ, ಇಸ್ರೋ ಹೇಳಿದೆ.
ಇನ್ನು ಸೆಪ್ಟೆಂಬರ್ 3 ರಂದು ವಿಕ್ರಂ ಮತ್ತೊಂದು ತಿರುವು ಪಡೆಕೊಳ್ಳುತ್ತದೆ. ತದನಂತರ ಚಂದ್ರನ ನೆಲಕ್ಕೆ ಅಪ್ಪಳಿಸಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ.