ಬೆಂಗಳೂರು: ಕೋವಿಡ್-19 ವೈರಾಣು ದೇಶದಾದ್ಯಂತ ವ್ಯಾಪಕವಾಗಿ ಹರಡಿದ ಹಿನ್ನೆಲೆ, ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದ, ವಿದ್ಯಾಗಮ ಕಾರ್ಯಕ್ರಮದ ಪುನರ್ ಆರಂಭದ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ.
ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯವರು ನೀಡಿರುವ ಶಿಫಾರಸುಗಳು:
- ವಿದ್ಯಾಗಮ ಯೋಜನೆಯನ್ನ 6-9 ತರಗತಿಗೆ ಆರಂಭಿಸುವುದು. ಇದರ ಅನುಭವದ ಆಧಾರದ ಮೇಲೆ ಜನವರಿ 14 ನಂತರ 1 ರಿಂದ 5ನೇ
ತರಗತಿಗಳಿಗೆ ವಿದ್ಯಾಗಮ ಪ್ರಾರಂಭಿಸಬಹುದು.
- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಹೊರಡಿಸುವ ಶಿಷ್ಟಾಚಾರಗಳನ್ನು ಪಾಲಿಸುವುದು.
- ಮಕ್ಕಳು ಶಾಲೆಗೆ ಮತ್ತು ವಿದ್ಯಾಗಮ ಕಾರ್ಯಕ್ರಮಕ್ಕೆ ಹಾಜರಾಗುವಾಗ ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯ. ಅನುಮತಿ ಪತ್ರದಲ್ಲಿ ಮಗುವಿಗೆ ಯಾವುದೇ ಕೋವಿಡ್ ಲಕ್ಷಣಗಳಿರುವುದಿಲ್ಲ ಎಂಬುದನ್ನು ದೃಢೀಕರಿಸಬೇಕು.
- ಸೋಂಕಿನ ಗುಣವುಳ್ಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ಪರೀಕ್ಷೆಯನ್ನು ಮಾಡಿಸುವಂತೆ ಸಲಹೆ ನೀಡಲಾಗಿದೆ. ಅವರು ಹತ್ತಿರದ ಆಸ್ಪತ್ರೆ /ಆರೋಗ್ಯ ಕೇಂದ್ರವನ್ನು
ಸಂಪರ್ಕ ಮಾಡಿ ಸಮನ್ವಯ ಸಾಧಿಸುವುದು.
ಓದಿ: ರಾಜ್ಯದಲ್ಲಿಂದು 958 ಕೊರೊನಾ ಕೇಸ್ ಪತ್ತೆ: 9 ಮಂದಿ ಬಲಿ
- ವಸತಿ ಶಾಲೆಗಳ ಮತ್ತು ವಸತಿ ನಿಲಯಗಳ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮುಂಚಿನ 72 ಗಂಟೆಗಳ ಅಂತರದಲ್ಲಿ ಕೋವಿಡ್ -19ರ ಪರೀಕ್ಷೆ ಮಾಡಿಸಿದ ನೆಗೆಟಿವ್ ವರದಿಯನ್ನು ಸಲ್ಲಿಸುವುದು.
- 50 ವರ್ಷ ಮೇಲ್ಪಟ್ಟ ಶಿಕ್ಷಕರು ಮತ್ತು ಸಿಬ್ಬಂದಿ ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಫೇಸ್ ಶೀಲ್ಡ್ ಉಪಯೋಗಿಸಬೇಕು.
- ಮಧ್ಯಾಹ್ನ ಉಪಹಾರ ಯೋಜನೆಯಡಿ ಬಿಸಿಯೂಟದ ಆಹಾರ ಪದಾರ್ಥಗಳನ್ನು ವಿತರಿಸುತ್ತಿರುವುದನ್ನು ಮುಂದುವರೆಸಬಹುದು.
- ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಊಟ ಮಾಡುವುದು ಸೂಕ್ತವಲ್ಲ.
- ಯಾವುದೇ ವಿದ್ಯಾರ್ಥಿ /ಶಿಕ್ಷಕ ಸಿಬ್ಬಂದಿಗೆ ಕೋವಿಡ್-19ರ ಲಕ್ಷಣಗಳು (ಅಂದರೆ ಕೆಮ್ಮು, ನೆಗಡಿ, ಜ್ವರ, ಶೀತ, ಗಂಟಲು ಕೆರೆತ, ರುಚಿ ಮತ್ತು ವಾಸನೆ ಗ್ರಹಿಸುವಲ್ಲಿ ತೊಂದರೆ, ಭೇದಿ, ಉಸಿರಾಟದ ತೊಂದರೆ, ಇತರ) ಕಂಡು ಬಂದಲ್ಲಿ ತಕ್ಷಣವೇ ಪ್ರತ್ಯೇಕ ಕೊಠಡಿಯಲ್ಲಿ (isolation Room) ಮಾಡುವುದು.