ETV Bharat / state

ರಾಜ್ಯದ ಕಾರಾಗೃಹಗಳಲ್ಲಿ ಸಾಮರ್ಥ್ಯ ಮೀರಿ ಹೆಚ್ಚುವರಿ ಕೈದಿಗಳನ್ನು ಇರಿಸಲಾಗಿದೆ: ಗೃಹ ಸಚಿವ ಪರಮೇಶ್ವರ್ - ರೌಡಿಶೀಟರ್​

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ವಿಪ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಕಾರಾಗೃಹದ ಸಾಮರ್ಥ್ಯ ಮೀರಿ ಹೆಚ್ಚುವರಿ ಕೈದಿಗಳನ್ನು ಬಂಧನದಲ್ಲಿಟ್ಟುರುವ ಕುರಿತಾಗಿ ಕೇಳಿದ ಪ್ರಶ್ನೆಗೆ ಗೃಹ ಸಚಿವ ಪರಮೇಶ್ವರ್​ ಸದನಕ್ಕೆ ಉತ್ತರಿಸಿದರು..

Home Minister Parameshwar spoke in the Legislative Council.
ವಿಧಾನ ಪರಿಷತ್​ದಲ್ಲಿ ಗೃಹ ಸಚಿವ ಪರಮೇಶ್ವರ್ ಮಾತನಾಡಿದರು.
author img

By

Published : Jul 13, 2023, 3:44 PM IST

Updated : Jul 13, 2023, 6:17 PM IST

ಗೃಹ ಸಚಿವ ಪರಮೇಶ್ವರ್ ವಿಧಾನಪರಿಷತ್ ಕಲಾಪದಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.

ಬೆಂಗಳೂರು: ರಾಜ್ಯದ ಬಂದೀಖಾನೆಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನು ಇರಿಸಲಾಗಿದ್ದು, ಸದ್ಯ ಹೆಚ್ಚುವರಿ ಬ್ಯಾರಕು ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ಜೈಲುಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್ ಅವರು ಕಾರಾಗೃಹದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೈದಿಗಳನ್ನ ಬಂಧನದಲ್ಲಿಟ್ಟುರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವವರು, ರಾಜ್ಯದಲ್ಲಿ 54 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ, 21 ಜಿಲ್ಲಾ ಕಾರಾಗೃಹ, 29 ತಾಲೂಕು ಕಾರಾಗೃಹಗಳಿವೆ. ಪ್ರಸ್ತುತ 14,237 ಬಂಧಿಗಳಿಗೆ ಅವಕಾಶವಿದೆಯಾದರೂ, ಈಗ 16053 ಮಂದಿ ಕೈದಿಗಳು ಇದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕಾರಾಗೃಹ ನಿರ್ಮಿಸುವ ಕೆಲಸ ಮಾಡುತ್ತೇವೆ. 6 ನೂತನ ಕಾರಾಗೃಹ ಮತ್ತು 8 ಕಾರಾಗೃಹಗಳಲ್ಲಿ ಹೆಚ್ಚುವರಿ ಬ್ಯಾರಕು ನಿರ್ಮಿಸಲಾಗುತ್ತಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಬಂಧಿಗಳ ಮನ ಬದಲಾಯಿಸುವ ಪ್ರಯತ್ನ: ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಅವರ ಮನ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರ ಜೀವನ ನಿರ್ವಹಿಸಲು ತರಬೇತಿಯನ್ನು ನೀಡುತ್ತಿದ್ದೇವೆ. 28 ಕಾರಾಗೃಹಗಳಲ್ಲಿ ಅಧಿಕೃತ ಸ್ಥಳಾವಕಾಶಕ್ಕಿಂತ ಹೆಚ್ಚುವರಿ ಬಂಧಿಗಳು ದಾಖಲಾಗಿದ್ದಾರೆ. ಬಹಳ ಮಂದಿ ವಿದ್ಯಾವಂತರಿದ್ದಾರೆ, ಅವರಿಗೂ ಕಂಪ್ಯೂಟರ್ ತರಬೇತಿ ಸೇರಿದಂತೆ ಹಲವು ತರಬೇತಿ ನೀಡುತ್ತಿದ್ದೇವೆ ಎಂದು ವಿವರಣೆ ನೀಡಿದರು.

ವಿದೇಶಿ ಪ್ರಜೆಗಳ ಮೇಲೆ ನಿಗಾ: ಡ್ರಗ್ಸ್, ವೇಶ್ಯಾವಾಟಿಕೆ ದಂಧೆಯಲ್ಲಿ ವಿದೇಶಿ ಪ್ರಜೆಗಳು ತೊಡಗಿಸಿಕೊಳ್ಳುತ್ತಿರುವ ಮಾಹಿತಿ ಇದ್ದು, ವೀಸಾ ಅವಧಿ ಮುಗಿದ ವಿದೇಶಿ ಪ್ರಜೆಗಳ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಡ್ರಗ್ಸ್ ದಂಧೆ, ವೇಶ್ಯಾವಾಟಿಕೆ ದಂಧೆ ಬೆಂಗಳೂರಿನ ಉತ್ತರದಲ್ಲಿ ಹೆಚ್ಚಾಗಿ ನಡೆಯುತ್ತಿದೆ. ವಿದೇಶಿ ಪ್ರಜೆಗಳು ಇದರಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಇದರ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ಕ್ರಮವೇನು? ಎಂದು ಬಿಜೆಪಿ ಸದಸ್ಯ ಗೋಪಿನಾಥ್ ರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ವಿದೇಶಿ ಪ್ರಜೆಗಳು ನಮ್ಮ ರಾಜ್ಯಕ್ಕೆ ವಿದ್ಯಾಭ್ಯಾಸ ಹಾಗೂ ಕೆಲಸಕ್ಕೆ ಬರುತ್ತಾರೆ. 2356 ಮಂದಿ ವಿದ್ಯಾಭ್ಯಾಸಕ್ಕೆ ಬಂದಿದ್ದಾರೆ. ಅವರ ವೀಸಾ ಮುಗಿದ ಮೇಲೆ ಅವರು ರಿನಿವಲ್ ಮಾಡಿಸಿಕೊಳ್ಳುವುದಿಲ್ಲ ಅಥವಾ ಅವರ ಎಂಬೆಸಿಗಳು ರಿನಿವಲ್ ಮಾಡದೆ ಇರಬಹುದು. ಆ ನಂತರ ಅವರು ಕೆಲವು ದಂಧೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹೀಗಾಗಿ ವೀಸಾ ಮುಗಿದ ವಿದೇಶಿ ಪ್ರಜೆಗಳ ಮೇಲೆ ನಿಗಾ ಇಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಅವರೇ ಒಂದು ಕೇಸ್ ಮಾಡಿಕೊಳ್ಳುತ್ತಾರೆ. ಆಗ ಅವರು ವಿದೇಶಕ್ಕೆ ಹೋಗಲು ಆಗೊಲ್ಲ.

ಇದರಿಂದ ಅವರನ್ನ ಡಿಟೆನ್ಷನ್ ಸೆಂಟರ್ ಗೆ ಹಾಕುತ್ತೇವೆ. ದಕ್ಷಿಣ ಆಫ್ರಿಕಾದ ಕೆಲವರು ಮೊನ್ನೆ ವೇಶ್ಯಾವಾಟಿಕೆ ಕೇಸ್​ನಲ್ಲಿ ಸಿಲುಕಿದ್ದರು. ಅವರನ್ನು ತುಮಕೂರಿನ ಸೆಂಟರ್ ಗೆ ಹಾಕಿದ್ದೇವೆ. ಅಫ್ರಿಕಾದವರು ಸ್ವಲ್ಪ ಬಲಿಷ್ಠವಾಗಿದ್ದಾರೆ. ಹೀಗಾಗಿ ಶಿವಮೊಗ್ಗ ಡಿಟೆನ್ಷನ್ ಸೆಂಟರ್ ಗೆ ಕಳುಹಿಸುವ ಕೆಲಸ ಮಾಡುತ್ತೇವೆ. ಹೆಚ್ಚಿನ ಮಂದಿ ನೈಜೀರಿಯನ್ ಪ್ರಜೆಗಳು ಇದ್ದಾರೆ, ಹಾಗಾಗಿ ವಿದೇಶಿ ಪ್ರಜೆಗಳ ವೀಸಾ ಅವಧಿ ಮುಗಿದವರ ಮೇಲೆ ನಿಗಾ ಇಡಲಿದ್ದೇವೆ ಎಂದು ಸದನಕ್ಕೆ ಹೇಳಿದರು.

ರಾಜ್ಯದಲ್ಲಿ 27,294 ರೌಡಿಶೀಟರ್​ಗಳು: ರಾಜ್ಯದಲ್ಲಿ ಒಟ್ಟು 27,294 ಮಂದಿ ರೌಡಿಶೀಟರ್​ಗಳು ಇದ್ದಾರೆ. ರೌಡಿಗಳಿಗೆ ಜಾತಿ ಧರ್ಮ ಇಲ್ಲ, ಜಾತಿವಾರು ರೌಡಿ ಶೀಟರ್ ಅಂಕಿ ಅಂಶ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಅರವಿಂದ ಕುಮಾರ ಅರಳಿ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ರೌಡಿಗಳು ಎಂದರೆ ಸ್ತ್ರಿಯರಿಗೆ ಅಸಹ್ಯ ಟೀಕೆ ಮಾಡುವವರು. ಶಾಂತಿ ಸುವ್ಯವಸ್ಥೆ ಹಾಳುಮಾಡುವವರು, ದೌರ್ಜನ್ಯದಿಂದ ವಂತಿಗೆ ವಸೂಲಿ ಮಾಡುವವರು. ಅಸಭ್ಯ ವರ್ತನೆ, ದೊಂಬಿ, ಸರಗಳ್ಳತನ, ಮಹಿಳೆಯರ ಜೊತೆ ಅಸಭ್ಯ ವರ್ತನೆ, ಸಾರ್ವಜನಿಕರ ಮೇಲೆ ಹಲ್ಲೆ ಮಾಡುವವರ ವಿರುದ್ಧ ರೌಡಿ ಶೀಟ್ ತೆರೆಯಲಾಗುತ್ತದೆ. ರೌಡಿ ಶೀಟ್ ತೆಗೆಯುವ ಮಾನದಂಡ 65 ವರ್ಷ ಮೇಲ್ಪಟ್ಟು, ನಿಷ್ಕ್ರಿಯನಾಗಿದ್ದರೆ, ವಿಕಲಚೇತನನಾಗಿದ್ದರೆ, ಕಳೆದ 10 ವರ್ಷಗಳಿಂದ ಯಾವುದೇ ಪ್ರಕರಣದಲ್ಲಿ ಪಾಲ್ಗೊಳ್ಳದೆ ಸನ್ನಡತೆ ಹೊಂದಿದ್ದರೆ ರೌಡಿ ಶೀಟ್ ರದ್ದುಪಡಿಸುವ ನಿಯಮವಿದೆ. ರೌಡಿ ರೌಡಿನೇ ಅವನಿಗೆ ಜಾತಿ, ಧರ್ಮ ನೋಡೋದಿಲ್ಲ. ಜಾತಿವಾರು ಅಂಕಿ-ಅಂಶ ಕೊಡಲು ಬರುವುದಿಲ್ಲ. ರೌಡಿಗಳ ವಿವರ ಕೊಡೋಕೆ ಬರೊಲ್ಲ, ಅದು ಕಾನ್ಫಿಡೆನ್ಷಿಯಲ್. ಆದರೆ ರಾಜ್ಯದಲ್ಲಿ ಒಟ್ಟು 27,294 ಮಂದಿ ರೌಡಿಶೀಟರ್ ಗಳಿದ್ದಾರೆ ಎಂದು ತಿಳಿಸಿದರು.

ಎಸ್ಸಿಎಸ್ಟಿ ಮುಂಬಡ್ತಿ ಅವಧಿ ಪರಿಷ್ಕರಣೆ ಚಿಂತನೆ: ಅಗ್ನಿಶಾಮಕ ಇಲಾಖೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮುಂಬಡ್ತಿ ನೀಡಲು 5 ವರ್ಷಗಳಿಂದ 3 ವರ್ಷಕ್ಕೆ ಇಳಿಕೆ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಯಾವುದೇ ಹುದ್ದೆಯನ್ನು ಸರ್ಕಾರ ನೇಮಕ ಮಾಡುವವಾಗ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಮಾಡುತ್ತಾರೆ. ಅಗ್ನಿಶಾಮಕ ಇಲಾಖೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯಕ್ಕೆ ಮುಂಬಡ್ತಿ ನೀಡಲು 5 ವರ್ಷಗಳಿಂದ 3 ವರ್ಷಕ್ಕೆ ಇಳಿಸುವ ಬೇಡಿಕೆ ಸರಿ ಇದೆ. ಬೇರೆ ಇಲಾಖೆಯಲ್ಲಿ ರಿಯಾಯಿತಿ ನೀಡಿದ್ದಾರೆ. ಇಲ್ಲಿಯೂ ಮಾಡಲು ಸಾಧ್ಯವಿದೆ. ಕಾನೂನಿನ ಮೂಲಕ ಅವಕಾಶ ಇದ್ದರೆ ಮುಂದಿನ ದಿನಗಳಲ್ಲಿ ಅವಧಿ ಇಳಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಇಲ್ಲಿ ನೈಪುಣ್ಯತೆ ಪ್ರಶ್ನೆ ಬರುತ್ತದೆ, ಅಗ್ನಿಶಾಮಕ ಇಲಾಖೆ ತಾಂತ್ರಿಕ ಇಲಾಖೆ ಆಗಿರುತ್ತದೆ, ನೈಪುಣ್ಯತೆ ಇಲ್ಲದೆ ಹೊದರೆ ಪ್ರಕೃತಿ ವಿಕೋಪ ಸಂದರ್ಭ, ಮಾನವ ನಿರ್ಮಿತ ರಾಸಾಯನಿಕ ವಿಪತ್ತು, ತೈಲ ವಿಪತ್ತು, ನದಿ ವಿಪತ್ತು, ಅಗ್ನಿಶಾಮಕ ವಿಪತ್ತು ನಿರ್ವಹಿಸಲು ಹಿನ್ನಡೆಯಾಗಲಿದೆ. ಹಾಗಾಗಿ ನೈಪುಣ್ಯತೆ ಬೇಕು. ಅಗತ್ಯ ತರಬೇತಿ ನೀಡಿ ಮೂರು ವರ್ಷದಲ್ಲಿ ನೈಪುಣ್ಯತೆ ಕೊಡಲು ಅವಕಾಶ ಇದ್ದರೆ ಮುಂಬಡ್ತಿ ನೀಡಲು, ಐದು ವರ್ಷದಿಂದ ಮೂರು ವರ್ಷಕ್ಕೆ ಇಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಾಕ್ಷಿದಾರರಿಗೆ ಅಗತ್ಯ ಅನುಕೂಲ: ದೌರ್ಜನ್ಯಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಲು ಸಾಕ್ಷಿದಾರರು ಹೋಗಿ ಸಾಕ್ಷಿ ಹೇಳಿದರೆ ಅನುಕೂಲವಾಗಲಿದೆ. ಹಾಗಾಗಿ ದೌರ್ಜನ್ಯಕ್ಕೊಳಗಾದವರ ಪರ ಸಾಕ್ಷಿ ಒದಗಿಸುವವರಿಗೆ ಅನುಕೂಲ ಮಾಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ ಸದಸ್ಯ ಡಿ ತಿಮ್ಮಯ್ಯ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಎಸ್ಸಿ/ಎಸ್ಟಿ ದೌರ್ಜನ್ಯ ಪ್ರಕರಣ ಪಟ್ಟಿ ನೀಡಿದ್ದೇನೆ. 2018 ರಿಂದ 2023 ರ ವರೆಗೆ ಪ್ರಕರಣ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಹಿಂದೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲು ಹಿಂದೇಟು ಹಾಕ್ತಿದ್ದರು. ಇತ್ತೀಚೆಗೆ ಮುಕ್ತ ಅವಕಾಶ ನೀಡಿರುವುದರಿಂದ ಪ್ರಕರಣ ಸಂಖ್ಯೆ ಜಾಸ್ತಿಯಾಗುತ್ತಿದೆ.

ಚಾರ್ಜ್ ಶೀಟ್ ಹಾಕದೆ ಇಟ್ಟುಕೊಂಡಿದ್ದನ್ನು ಹಿಂದೆ ನೋಡಿದ್ದೇವೆ. ಆದರೆ ಈಗ ಚಾರ್ಜ್ ಶೀಟ್ ಹಾಕುತ್ತಿದಾರೆ. ಅವರವರು ಸಂಧಾನ ಮಾಡಿಕೊಂಡು ಬಿ ರಿಪೋರ್ಟ್ ಮಾಡುತ್ತಾರೆ. 13/9/22 ರಲ್ಲಿ ಸಾಕ್ಷಿದಾರರಿಗೆ ಪ್ರಯಾಣ ಭತ್ಯೆ, ದಿನಭತ್ಯೆ, ಸೇರಿದಂತೆ ಹಲವು ಸಹಕಾರ ನೀಡಲು ನಿಯಮ ಮಾಡಲಾಗಿದೆ. ಈ ಬಗ್ಗೆ ಸರ್ಕಾರ ಆದೇಶ ಮಾಡಿದೆ, ದೌರ್ಜನ್ಯಕ್ಕೆ ಒಳಗಾದ ಜನರಿಗೆ ನ್ಯಾಯ ಒದಗಿಸಲು ಸಾಕ್ಷಿದಾರರು ಹೋಗಿ ಸಾಕ್ಷಿ ಹೇಳಿದರೆ, ಅನುಕೂಲವಾಗಲಿದೆ. ಹಾಗಾಗಿ ದೌರ್ಜನ್ಯಕ್ಕೊಳಗಾದವರ ಪರ ಸಾಕ್ಷಿ ಒದಗಿಸುವವರಿಗೆ ಅನುಕೂಲ ಮಾಡಲಾಗಿದೆ ಎಂದರು.

ಇದನ್ನೂಓದಿ:ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಲವ್ ಜಿಹಾದ್, ಪಾಕಿಸ್ತಾನ ಜಿಂದಾಬಾದ್ ಫ್ರೀ: ಆರ್.ಅಶೋಕ್

Last Updated : Jul 13, 2023, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.