ಬೆಂಗಳೂರು: ರಸ್ತೆಯಲ್ಲಿ ಜೋತುಬಿದ್ದಿದ್ದ ವೈರ್ ಬಿಡಿಸಲು ಹೋಗಿದ್ದ ಆಟೋ ಡ್ರೈವರ್ ಆಂಜನೇಯನ ರೀತಿಯಲ್ಲಿ ಹಾರಿ ಬಿದ್ದಿರುವ ಭಯಂಕರ ಘಟನೆ ನಡೆದಿದೆ.
ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ.ಪಾಳ್ಯ ಜಂಕ್ಷನ್ ಬಳಿ ಜುಲೈ 16ರಂದು ಘಟನೆ ನಡೆದಿದೆ. ರಸ್ತೆಯಲ್ಲಿ ವೈರ್ ಜೋತಾಡುತ್ತಿದ್ದ ಕಾರಣ ಆಟೋ ಡ್ರೈವರ್ಗೆ ಮುಂದೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಕೆಳಗಿಳಿದು ವೈರ್ ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ತಕ್ಷಣವೇ ಟ್ರ್ಯಾಕ್ಟರ್ ಅದರ ಮೇಲೆ ಹರಿದಿರುವ ಕಾರಣ ವ್ಯಕ್ತಿ ಹಾರಿ ಮಹಿಳೆ ಮೇಲೆ ಬಿದ್ದಿದ್ದಾನೆ.
ವ್ಯಕ್ತಿ ಏಕಾಏಕಿ ಮೇಲಕ್ಕೆ ಹಾರಿ ಮುಂದೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಬಿದ್ದಿದ್ದಾನೆ. ಇದರಿಂದ ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು, ಮಹಿಳೆಯ ದೇಹಕ್ಕೆ 52 ಹೊಲಿಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.