ETV Bharat / state

ಯಾರದ್ದೋ ವರದಿ, ಯಾರೋ ಡಿಸ್ಜಾರ್ಜ್... ವಿಕ್ಟೋರಿಯಾದಲ್ಲಿ ಯಡವಟ್ಟು?

ಇಬ್ಬರು ವ್ಯಕ್ತಿಗಳ ಹೆಸರು ಒಂದೇ ಆಗಿದ್ದರಿಂದ ಎಡವಟ್ಟು ಆಗಿದ್ದು, 40 ವರ್ಷದ ವ್ಯಕ್ತಿಗೆ ಇನ್ಯಾರದ್ದೋ ವರದಿ ನೀಡಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

victoria hospital committed mistake
ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದ ಆಸ್ಪತ್ರೆ ಸಿಬ್ಬಂದಿ
author img

By

Published : Jun 25, 2020, 9:28 PM IST

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಯಡವಟ್ಟು ಯಾಕೋ ಏನೋ ಮುಗಿಯುವ ಹಾಗೇ ಕಾಣುತ್ತಿಲ್ಲ. ಕಳಪೆ ಆಹಾರದಿಂದ ಹಿಡಿದು ಮೂಲಭೌತ ಸೌಲಭ್ಯ ಸರಿಯಾಗಿಲ್ಲ ಅಂತ ಅಲ್ಲಿನ ಸೋಂಕಿತರೇ ವಿಡಿಯೋ ವೈರಲ್ ಮಾಡಿದ್ದರು.‌ ಇದೀಗ ಯಾರದ್ದೋ ವರದಿಗೆ ಇನ್ಯಾರೋ ಕೊರೊನಾ ಸೋಂಕಿತನನ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿ

ಇಬ್ಬರು ವ್ಯಕ್ತಿಗಳ ಹೆಸರು ಒಂದೇ ಆಗಿದ್ದರಿಂದ ಈ ಯಡವಟ್ಟು ಆಗಿದೆ ಎನ್ನಲಾಗಿದ್ದು, 40 ವರ್ಷದ ವ್ಯಕ್ತಿಗೆ ಇನ್ಯಾರದ್ದೋ ವರದಿ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಮೂರು ದಿನದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತ ವ್ಯಕ್ತಿಯನ್ನು ಡಿಸ್ಚಾರ್ಜ್​ ಮಾಡಿ ಕಳುಹಿಸಿದ್ದಾರೆ. ಈತ ವಿಶೇಷ ಚೇತನ ವ್ಯಕ್ತಿಯಾಗಿದ್ದು, ಇದೇ ಕಾರಣಕ್ಕೆ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. ಮೂರೇ ದಿನಕ್ಕೆ ಆಸ್ಪತ್ರೆಯಿಂದ ವಾಪಸ್​ ಬಂದಿರುವ ವ್ಯಕ್ತಿಯನ್ನು ಕುಟುಂಬಸ್ಥರು ಮನೆಗೆ ಸೇರಿಸಿಲ್ಲ.

ನಿನ್ನೆ ಸಂಜೆಯಿಂದ ಮಿನರ್ವ ವೃತ್ತದ ಬಳಿಯೇ ಸೋಂಕಿತ ವ್ಯಕ್ತಿ ಕಾಲ ಕಳೆದಿದ್ದಾನೆ. ಹಸಿವಿನಿಂದ ಕೂತಿದ್ದ ಸೋಂಕಿತನಿಗೆ ಅಲ್ಲಿನ ನಿವಾಸಿಗಳು ದೂರದಿಂದಲೇ ಊಟ ಕೊಟ್ಟಿದ್ದಾರೆ. ಅನುಮಾನಗೊಂಡು ಆ್ಯಂಬುಲೆನ್ಸ್​ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಆರೋಗ್ಯ ಇಲಾಖೆ ತಂಡ ತಡವಾಗಿ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ​ಸದ್ಯ 40 ವರ್ಷದ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.