ETV Bharat / state

ಚಿಮೂ ಅವರ ಹೋರಾಟಕ್ಕೆ ಕಿಚ್ಚು ಹಚ್ಚಿಸಿದ್ದು ಆ ಒಂದು ಘಟನೆ...! - chidananda murthy death news

ಡಾ. ಎಂ. ಚಿದಾನಂದ ಮೂರ್ತಿ ಅವರು ನಾಡಿನ ಹಿರಿಯ ಸಾಹಿತಿ, ಹೋರಾಟಗಾರ, ಸಂಶೋಧಕ, ಇತಿಹಾಸಕಾರರಾಗಿದ್ದರು. ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಗಾಗಿ ದಶಕಗಳ ಕಾಲ ಹೋರಾಟ ಮಾಡಿಕೊಂಡು ಬಂದಿದ್ದರು. ಇಂದು ಅವರು ನಮ್ಮನ್ನ ಅಗಲಿದ್ದು, ಅವರು ಬೆಳೆದು ಬಂದ ಹಾದಿ ಹೀಗಿದೆ.

chidananda murthy
ಚಿಮೂ ಅವರ ಹೋರಾಟಕ್ಕೆ ಕಿಚ್ಚು ಹಚ್ಚಿಸಿದ್ದು ಆ ಒಂದು ಘಟನೆ...!
author img

By

Published : Jan 11, 2020, 10:37 AM IST

ಬೆಂಗಳೂರು: 1982 ರ ಮೊದಲ ತಿಂಗಳಿನಲ್ಲಿ ನಡೆದ ಒಂದು ಘಟನೆಯಿಂದ ಡಾ.ಎಂ. ಚಿದಾನಂದಮೂರ್ತಿ ಅವರು ಇಡೀ ನಾಡಿಗೆ ಖ್ಯಾತನಾಮರಾದರು.

ಬೆಂಗಳೂರಿನ ದಂಡು ಪ್ರದೇಶದ (ಈಗಿನ ಕಂಟೋನ್ಮೆಂಟ್ ರೈಲ್ವೆ) ಒಂದು ಸಿನಿಮಾ ಮಂದಿರದಲ್ಲಿ ಮುಂಗಡ ಟಿಕೆಟ್​​ಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಗಿಡ್ಡು ಎತ್ತರದ ಒಬ್ಬ ಕನ್ನಡ ಪ್ರಾಧ್ಯಾಪಕರು, “ನಾಲ್ಕು ಟಿಕೆಟ್ ಕೊಡಿ”ಎಂದು ಕೇಳಿದರು. ಕೌಂಟರ್​ನಲ್ಲಿ ಇದ್ದ ವ್ಯಕ್ತಿ ಇಂಗ್ಲಿಷ್​ನಲ್ಲಿ ಮಾತನಾಡಲು ಒತ್ತಾಯಿಸಿದ. ಅವರು ಮತ್ತೆ ಕನ್ನಡದಲ್ಲಿ ಕೇಳಿದರು. ಮಾತಿಗೆ ಮಾತು ಬೆಳೆಯಿತು. ಸಿನಿಮಾ ಮಂದಿರದ ಮ್ಯಾನೇಜರ್ ಬಂದ. ಕನ್ನಡದಲ್ಲಿ ಮಾತನಾಡಿದುದಕ್ಕೆ ಅವರನ್ನು ಆವರಣದಿಂದ ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದ. ಅಲ್ಲಿದ್ದ ಕನ್ನಡಿಗರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು. ಇಡೀ ಘಟನೆ ಪ್ರಾಧ್ಯಾಪಕರಲ್ಲಿ ನೋವು, ಕುಪಿತ, ಅಪಮಾನದ ಬೇಗೆ ಉಂಟುಮಾಡಿತ್ತು. ಕನ್ನಡದ ದುಃಸ್ಥಿತಿಯ ಬಗ್ಗೆ ಸಂಕಟ ತರಿಸಿತ್ತು.

ಆಗಲೇ ಅವರು ನಿರ್ಧಾರ ಮಾಡಿದ್ದರು. ಕರ್ನಾಟಕದಾದ್ಯಂತ ಕನ್ನಡದ ಎಚ್ಚರ ಮೂಡಿಸುವ, ಕನ್ನಡಕ್ಕಾಗಿ ತಮ್ಮ ಉಳಿದ ಬದುಕಿನ ವೇಳೆ, ಆಯಸ್ಸುನ್ನು ಮೀಸಲಿಡುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ದೃಢ ಸಂಕಲ್ಪವನ್ನು ಚಿಮೂ ಮಾಡಿದರು. ಇದಕ್ಕೆಂದೇ ಹಂಪಿಯ ಕನ್ನಡ ಭುವನೇಶ್ವರಿಯ ಮುಂದೆ ಪ್ರತಿಜ್ಞೆ ಕೈಗೊಂಡರು. ಪ್ರಾಣತ್ಯಾಗಕ್ಕೆ ಕೂಡ ಸಿದ್ಧರಾಗಿ ತಮ್ಮನ್ನು “ಕನ್ನಡ ಗರುಡ’”ಎಂದು ಭಾವಿಸಿದರು.

ನಾಲ್ಕು ದಶಕಕ್ಕಿಂತ ಹೆಚ್ಚು ಕಾಲ ಅವರು ಕನ್ನಡಕ್ಕಾಗಿ ಶ್ರಮಿಸಿದರು. ತಮ್ಮ ಅಮೂಲ್ಯ ಬರಹ, ಸಂಶೋಧನೆ ತೊರೆದರು. ಬಳಗ ಕಟ್ಟಿದರು. ಕೇಂದ್ರ ಸ್ಥಾಪಿಸಿದರು. ಚಳವಳಿ ಮಾಡಿದರು. ಕನ್ನಡದ ಕಾರಣಕ್ಕೆ, ಸಮಸ್ಯೆಗಳ ಪರಿಹಾರಕ್ಕೆ ನೂರಾರು ಕಾರ್ಯಕರ್ತರನ್ನು ಸಂಘಟಿಸಿದರು. ಕನ್ನಡ ಮಾಧ್ಯಮ, ಕನ್ನಡ ಶಾಲೆ, ಕನ್ನಡಿಗರಿಗೆ ಉದ್ಯೋಗ, ಕರ್ನಾಟಕದ ನೆಲಜಲಗಳ ಹಕ್ಕುಗಳಿಗೆ ಹೋರಾಡಿದರು. ಇದರಿಂದ ಕನ್ನಡದ ಬಗ್ಗೆ ಕರ್ನಾಟಕದಲ್ಲಿ ಸಮಗ್ರ ಜಾಗೃತಿ ಆಗದಿದ್ದರೂ ಸಾಮಾನ್ಯ ಎಚ್ಚರ ಮೂಡಿತು.

ಕಳೆದ ಹಲವು ದಶಕಗಳಲ್ಲಿ ಚಿದಾನಂದ ಮೂರ್ತಿ ಕನ್ನಡ - ಕರ್ನಾಟಕದ ಉಳಿವಿಗೆ ಮಾಡಿದ ಹೋರಾಟ ಪ್ರತ್ಯೇಕ ಉಲ್ಲೇಖಕ್ಕೆ ಅರ್ಹವಾದದ್ದು. 1982ರಲ್ಲಿ ಗೋಕಾಕ್ ವರದಿಯ ಜಾರಿಗೆ ಕನ್ನಡ ಸಾಹಿತಿಗಳು, ಕಲಾವಿದರು ಹೋರಾಟ ಹೂಡಿದರು. ಅದೇ ವರ್ಷದ ಎಪ್ರಿಲ್ 13ರಂದು ‘ಸಾಹಿತಿಗಳ ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು. ಚಿದಾನಂದಮೂರ್ತಿಯವರು ಕನ್ನಡ ಚಳವಳಿಯ ಹೊಸ ನಾಯಕರಾದರು.ಗೋಕಾಕ್ ಚಳವಳಿಯಲ್ಲಿ ಮೂರ್ತಿ ಅವರು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನ ಕನ್ನಡ ಚಳವಳಿಗೆ ಹೊಸ ರೂಪ ವರ್ಚಸ್ಸು, ಗೌರವಗಳನ್ನು ತಂದಿದ್ದವು. ಕನ್ನಡ ಚಳವಳಿಯ ಬಗ್ಗೆ ಜನಸಾಮಾನ್ಯರಲ್ಲಿದ್ದ ಕೀಳು ಮನೋಭಾವ ಹೋಗಲಾಡಿಸುವಲ್ಲಿ ಚಿಮೂ ಅವರ ಪಾತ್ರ ದೊಡ್ಡದು.

ಕನ್ನಡ ಸಂಘಟನೆ ಸ್ಥಾಪನೆ : 1988ರಲ್ಲಿ ಚಿದಾನಂದಮೂರ್ತಿ ‘ಕನ್ನಡ ಶಕ್ತಿ ಕೇಂದ್ರವನ್ನು ಅಸ್ತಿತ್ವಕ್ಕೆ ತಂದರು. ಕನ್ನಡ ಶಕ್ತಿ ಕೇಂದ್ರ ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ. ಜಿಲ್ಲಾ ಮಟ್ಟಗಳಲ್ಲಿ ಇದರ ಶಾಖೆಗಳು ಆರಂಭಗೊಂಡವು. ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ.

ಚಿಮೂ ಅವರ ದೊಡ್ಡ ಸಾಧನೆ ಕನ್ನಡಕ್ಕಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ದುಡಿಯುವ ಕಾರ್ಯಕರ್ತರನ್ನು ರೂಪಿಸಿದ್ದು ಮತ್ತು ಅವರ ಬಳಗ ಕಟ್ಟಿದ್ದು. ಈ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ಮೂಡಲು, ಕನ್ನಡ-ಕರ್ನಾಟಕದ ಬಗ್ಗೆ ಕುರಿತು ಅರಿವು ಹೆಚ್ಚಲು ಅವರು ‘ಮಾತುಗಾರಿಕೆ ಶಿಬಿರ’ ಗಳನ್ನೂ ಏರ್ಪಡಿಸಿದರು. ಜನಸಾಮಾನ್ಯರಲ್ಲಿ ಕನ್ನಡತನ ಉಂಟಾಗಲು ‘ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ’ ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದರು. ಈ ಪುಸ್ತಕ ಹಲವು ಮುದ್ರಣಗಳನ್ನು ಕಂಡಿತು. ಇದಾದ ನಂತರ ಶಕ್ತಿ ಕೇಂದ್ರದ ವತಿಯಿಂದ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ಉಪಯುಕ್ತವಾದ ಅಂಕಿ-ಅಂಶಗಳನ್ನು, ಖಚಿತ ಮಾಹಿತಿಯನ್ನೂ ಒಳಗೊಂಡ ಪುಸ್ತಕವನ್ನು ಸಂಪಾದಕ ಮಂಡಳಿಯ ನೆರವಿನಿಂದ ಹೊರತಂದರು. ಇದು“ಕನ್ನಡಿಗರ ಅನಧಿಕೃತವಾದ ಸಂವಿಧಾನ” ಎಂಬ ಪ್ರಶಂಸೆಗೆ ಪಾತ್ರವಾಯಿತು.

ಕನ್ನಡದ ಬಗೆಗಿನ ಚಿದಾನಂದಮೂರ್ತಿ ಅವರ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. 1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಚಿಮೂ ಅವರಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು. ಸಾಹಿತಿಗಳ, ಕಲಾವಿದರ ಬಳಗದ ಮೂಲಕ ಆಗಿನ ಮುಖ್ಯಮಂತ್ರಿ, ಸಚಿವ ಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು. ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ, ಜಾನಪದ, ಅರ್ಥಶಾಸ್ತ್ರ,ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣ ಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು.

ಚಿದಾನಂದಮೂರ್ತಿಗಳಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡೆಮಿ ಪುರಸ್ಕಾರಗಳು, ಗೌರವಗಳು ದೊರೆತಿವೆಯಲ್ಲದೆ, ಅವರ ಹೆಸರಿನಲ್ಲಿ ‘ಚಿದಾನಂದ ಪ್ರಶಸ್ತಿ’ ಎಂಬುದನ್ನು ಸ್ಥಾಪಿಸಿ ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ 10 ರಂದು ಪ್ರತೀವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಅದನ್ನು ನೀಡಲಾಗುತ್ತಿದೆ.

Intro:ಬೆಂಗಳೂರು : 1982 ರ ಮೊದಲ ತಿಂಗಳಿನಲ್ಲಿ ನಡೆದ ಒಂದು ಘಟನೆಯಿಂದ ಡಾ.ಎಂ. ಚಿದಾನಂದಮೂರ್ತಿ ಅವರು ಇಡೀ ನಾಡಿಗೆ ಖ್ಯಾತನಾಮರಾದರು.Body:ಬೆಂಗಳೂರಿನ ದಂಡು ಪ್ರದೇಶದ (ಈಗಿನ ಕಂಟೋನ್ಮೆಂಟ್ ರೈಲ್ವೆ) ಒಂದು ಸಿನಿಮಾ ಮಂದಿರದಲ್ಲಿ ಮುಂಗಡ ಟಿಕೆಟ್ಟಿಗಾಗಿ ಸರದಿಯ ಸಾಲಿನಲ್ಲಿ ನಿಂತಿದ್ದ ಗಿಡ್ಡು ಎತ್ತರದ ಒಬ್ಬ ಕನ್ನಡ ಪ್ರಾಧ್ಯಾಪಕರು,  “ನಾಲ್ಕು ಟಿಕೆಟ್ ಕೊಡಿ”ಎಂದು ಕೇಳಿದರು. ಕೌಂಟರ್ ನಲ್ಲಿ ಇದ್ದ ವ್ಯಕ್ತಿ ಇಂಗ್ಲಿಷ್ ನಲ್ಲಿ ಮಾತನಾಡಲು ಒತ್ತಾಯಿಸಿದ.  ಅವರು ಮತ್ತೆ ಕನ್ನಡದಲ್ಲಿ ಕೇಳಿದರು. ಮಾತಿಗೆ ಮಾತು ಬೆಳೆಯಿತು.  ಸಿನಿಮಾ ಮಂದಿರದ ಮ್ಯಾನೇಜರ್ ಬಂದ. ಕನ್ನಡದಲ್ಲಿ ಮಾತನಾಡಿದುದಕ್ಕೆ ಅವರನ್ನು ಆವರಣದಿಂದ ಹೊರಹಾಕಿಸುತ್ತೇನೆ ಎಂದು ಅಬ್ಬರಿಸಿದ. ಅಲ್ಲಿದ್ದ ಕನ್ನಡಿಗರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರು.  ಇಡೀ ಘಟನೆ ಪ್ರಾಧ್ಯಾಪಕರಲ್ಲಿ ನೋವು, ಕುಪಿತ, ಅಪಮಾನದ ಬೇಗೆ ಉಂಟುಮಾಡಿತ್ತು.  ಕನ್ನಡದ ದುಃಸ್ಥಿತಿಯ ಬಗ್ಗೆ ಸಂಕಟ ತರಿಸಿತ್ತು. 
ಆಗಲೇ ಅವರು ನಿರ್ಧಾರ ಮಾಡಿದ್ದರು. ಕರ್ನಾಟಕಾದ್ಯಂತ ಕನ್ನಡ ಎಚ್ಚರ ಮೂಡಿಸುವ, ಕನ್ನಡಕ್ಕಾಗಿ ತಮ್ಮ ಉಳಿದ ಬದುಕಿನ ವೇಳೆ, ಆಯಸ್ಸುಗಳನ್ನು ಮೀಸಲಿಡುವ, ಕನ್ನಡಕ್ಕಾಗಿ ಅಹರ್ನಿಶಿ ದುಡಿಯುವ ದೃಢ ಸಂಕಲ್ಪವನ್ನು ಚಿಮೂ ಮಾಡಿದರು.  ಇದಕ್ಕೆಂದೇ ಹಂಪಿಯ ಕನ್ನಡ ಭುವನೇಶ್ವರಿಯ ಮುಂದೆ ಪ್ರತಿಜ್ಞೆ ಕೈಗೊಂಡರು.  ಪ್ರಾಣತ್ಯಾಗಕ್ಕೆ ಕೂಡ ಸಿದ್ಧರಾಗಿ ತಮ್ಮನ್ನು “ಕನ್ನಡ ಗರುಡ’”ಎಂದು ಭಾವಿಸಿದರು.
ನಾಲ್ಕು ದಶಕಕ್ಕಿಂತ ಅವರು ಕನ್ನಡಕ್ಕಾಗಿ ಶ್ರಮಿಸಿದರು.  ತಮ್ಮ ಅಮೂಲ್ಯ ಬರಹ, ಸಂಶೋಧನೆ ತೊರೆದರು. ಬಳಗ ಕಟ್ಟಿದರು.  ಕೇಂದ್ರ ಸ್ಥಾಪಿಸಿದರು.  ಚಳುವಳಿ ಮಾಡಿದರು.  ಕನ್ನಡದ ಕಾರಣಕ್ಕೆ, ಸಮಸ್ಯೆಗಳ ಪರಿಹಾರಕ್ಕೆ ನೂರಾರು ಕಾರ್ಯಕರ್ತರನ್ನು ಸಂಘಟಿಸಿದರು.  ಕನ್ನಡ ಮಾಧ್ಯಮ,ಕನ್ನಡ ಶಾಲೆ, ಕನ್ನಡಿಗರಿಗೆ ಉದ್ಯೋಗ, ಕರ್ನಾಟಕದ ನೆಲಜಲಗಳ ಹಕ್ಕುಗಳಿಗೆ ಹೋರಾಡಿದರು.  ಇದರಿಂದ ಕನ್ನಡದ ಬಗ್ಗೆ ಕರ್ನಾಟಕದಲ್ಲಿ ಸಮಗ್ರ ಜಾಗೃತಿ ಆಗದಿದ್ದರೂ ಸಾಮಾನ್ಯ ಎಚ್ಚರ ಮೂಡಿತು. 
ಕಳೆದ ಹಲವು ದಶಕಗಳಲ್ಲಿ ಚಿದಾನಂದ ಮೂರ್ತಿ ಕನ್ನಡ-ಕರ್ನಾಟಕದ ಉಳಿವಿಗೆ ಮಾಡಿದ ಹೋರಾಟ ಪ್ರತ್ಯೇಕ ಉಲ್ಲೇಖಕ್ಕೆ ಅರ್ಹವಾದದ್ದು.  1982ರಲ್ಲಿ ಗೋಕಾಕ್ ವರದಿಯ ಜಾರಿಗೆ ಕನ್ನಡ ಸಾಹಿತಿಗಳು, ಕಲಾವಿದರು ಹೋರಾಟ ಹೂಡಿದರು.  ಅದೇ ವರ್ಷದ ಎಪ್ರಿಲ್ 13ರಂದು ‘ಸಾಹಿತಿಗಳ ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂತು.  ಚಿದಾನಂದಮೂರ್ತಿಯವರು ಕನ್ನಡ ಚಳುವಳಿಯ ಹೊಸ ನಾಯಕರಾದರು. ಗೋಕಾಕ್ ಚಳುವಳಿಯಲ್ಲಿ ಮೂರ್ತಿ ಅವರು ತೋರಿದ ಕ್ರಿಯಾಶೀಲತೆ, ಹಿರಿಯರನ್ನು, ಕಿರಿಯರನ್ನು ಉತ್ಸಾಹಿಸಿ ತಮ್ಮೊಂದಿಗೆ ಕೊಂಡೊಯ್ದ ರೀತಿ, ಮೌನ ಮೆರವಣಿಗೆ, ಧರಣಿ, ನಿರಶನ ಸಮಾವೇಶಗಳನ್ನು ಏರ್ಪಡಿಸಿದ ವಿಧಾನ ಕನ್ನಡ ಚಳವಳಿಗೆ ಹೊಸ ರೂಪ ವರ್ಚಸ್ಸು, ಗೌರವಗಳನ್ನು ತಂದಿದ್ದವು. ಕನ್ನಡ ಚಳವಳಿಯ ಬಗ್ಗೆ ಜನಸಾಮಾನ್ಯರಲ್ಲಿದ್ದ ಕೀಳು ಮನೋಭಾವ ಹೋಗಲಾಡಿಸುವಲ್ಲಿ ಚಿಮೂ ಅವರ ಪಾತ್ರ ದೊಡ್ಡದು.
ಕನ್ನಡ ಸಂಘಟನೆ ಸ್ಥಾಪನೆ : 1988ರಲ್ಲಿ ಚಿದಾನಂದಮೂರ್ತಿ ‘ಕನ್ನಡ ಶಕ್ತಿ ಕೇಂದ್ರವನ್ನು ಅಸ್ತಿತ್ವಕ್ಕೆ ತಂದರು.  ಕನ್ನಡ ಶಕ್ತಿ ಕೇಂದ್ರ ಕರ್ನಾಟಕದಾದ್ಯಂತ ವ್ಯಾಪಿಸಿದ ಸಂಘಟನೆ.  ಜಿಲ್ಲಾ ಮಟ್ಟಗಳಲ್ಲಿ ಇದರ ಶಾಖೆಗಳು ಆರಂಭಗೊಂಡವು.  ಕನ್ನಡದ ಕಾರಣಕ್ಕಾಗಿಯೇ ರಾಜ್ಯಾದ್ಯಂತ ವ್ಯಾಪಿಸಿದ ಏಕೈಕ ಸಂಘಟನೆ ಇದೊಂದೇ. 
ಚಿಮೂ ಅವರ ದೊಡ್ಡ ಸಾಧನೆ ಕನ್ನಡಕ್ಕಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ದುಡಿಯುವ ಕಾರ್ಯಕರ್ತರನ್ನು ರೂಪಿಸಿದ್ದು ಮತ್ತು  ಅವರ ಬಳಗ ಕಟ್ಟಿದ್ದು.  ಈ ಕಾರ್ಯಕರ್ತರಲ್ಲಿ ಆತ್ಮ ವಿಶ್ವಾಸ ಮೂಡಲು, ಕನ್ನಡ-ಕರ್ನಾಟಕದ ಬಗ್ಗೆ ಕುರಿತು ಅರಿವು ಹೆಚ್ಚಲು ಅವರು ‘ಮಾತುಗಾರಿಕೆ ಶಿಬಿರ’ಗಳನ್ನೂ ಏರ್ಪಡಿಸಿದರು.  ಜನಸಾಮಾನ್ಯರಲ್ಲಿ ಕನ್ನಡತನ ಉಂಟಾಗಲು ‘ಕನ್ನಡ ಸಂಸ್ಕೃತಿ: ನಮ್ಮ ಹೆಮ್ಮೆ’ ಎಂಬ ಕಿರುಹೊತ್ತಗೆಯನ್ನು ಪ್ರಕಟಿಸಿದರು.  ಈ ಪುಸ್ತಕ ಹಲವು ಮುದ್ರಣಗಳನ್ನು ಕಂಡಿತು.  ಇದಾದ ನಂತರ ಶಕ್ತಿ ಕೇಂದ್ರದ ವತಿಯಿಂದ ‘ಕನ್ನಡ-ಕನ್ನಡಿಗ-ಕರ್ನಾಟಕ’ ಎಂಬ ಉಪಯುಕ್ತವಾದ ಅಂಕಿ-ಅಂಶಗಳನ್ನು, ಖಚಿತ ಮಾಹಿತಿಯನ್ನೂ ಒಳಗೊಂಡ ಪುಸ್ತಕವನ್ನು ಸಂಪಾದಕ ಮಂಡಳಿಯ ನೆರವಿನಿಂದ ಹೊರತಂದರು.  ಇದು“ಕನ್ನಡಿಗರ ಅನಧಿಕೃತವಾದ ಸಂವಿಧಾನ” ಎಂಬ ಪ್ರಶಂಸೆಗೆ ಪಾತ್ರವಾಯಿತು. 
ಕನ್ನಡದ ಬಗೆಗಿನ ಚಿದಾನಂದಮೂರ್ತಿ ಅವರ ಚರಿತ್ರಾರ್ಹ ಸಾಧನೆ ಎಂದರೆ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ.  1985ರಲ್ಲಿ ಕಾಲ್ನಡಿಗೆಯ ಮೂಲಕ ಬೆಂಗಳೂರಿನಿಂದ ಹಂಪಿಗೆ ಪ್ರಯಾಣ ಮಾಡುವಾಗ ಚಿಮೂ ಅವರಿಗೆ ಕನ್ನಡಕ್ಕೆ ಏಕೆ ಒಂದು ಪ್ರತ್ಯೇಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರಬಾರದು ಎನಿಸಿತು.  ಸಾಹಿತಿಗಳ, ಕಲಾವಿದರ ಬಳಗದ  ಮೂಲಕ ಆಗಿನ ಮುಖ್ಯಮಂತ್ರಿ,  ಸಚಿವ ಸಂಪುಟ, ಶಾಸಕರ ಮೇಲೆ ಒತ್ತಾಯ ತಂದು ಅದರ ಸ್ಥಾಪನೆಗೆ ಓಡಾಡಿ ಮುಂದಿನ ಒಂದೆರಡು ವರ್ಷಗಳಲ್ಲಿ ಅದರ ಕಾರ್ಯಾರಂಭಕ್ಕೆ ಕಾರಣರಾದರು.  ಕರ್ನಾಟಕದ ಬಾಷೆ, ಸಾಹಿತ್ಯ, ಇತಿಹಾಸ, ಭೂಶೋಧ, ಲಲಿತಕಲೆ, ಸಮಾಜಶಾಸ್ತ್ರ,  ಜಾನಪದ, ಅರ್ಥಶಾಸ್ತ್ರ,ವಿಜ್ಞಾನ, ಸಮೂಹ ಮಾಧ್ಯಮ ಮುಂತಾದವುಗಳ ಅಧ್ಯಯನ ನಡೆಯಲು ಪೂರ್ಣಪ್ರಮಾಣದ ಉನ್ನತ ವಿಶ್ವವಿದ್ಯಾನಿಲಯವನ್ನು ಅಸ್ತಿತ್ವಕ್ಕೆ ತಂದು ಕನ್ನಡದ ಕೆಲಸಗಳಿಗೆ ಹೊಸ ಚಾಲನೆ ಕೊಟ್ಟರು. 
ಚಿದಾನಂದಮೂರ್ತಿಗಳಿಗೆ ಅನೇಕ ಗೌರವಗಳು, ಅವರ ಕೃತಿಗಳಿಗೆ ಸಾಹಿತ್ಯ ಆಕಾಡೆಮಿ ಪುರಸ್ಕಾರಗಳು, ಗೌರವಗಳು ದೊರೆತಿವೆಯಲ್ಲದೆ, ಅವರ ಹೆಸರಿನಲ್ಲಿ ‘ಚಿದಾನಂದ ಪ್ರಶಸ್ತಿ’ ಎಂಬುದನ್ನು ಸ್ಥಾಪಿಸಿ ಚಿದಾನಂದಮೂರ್ತಿಯವರ ಜನ್ಮದಿನವಾದ ಮೇ 10 ರಂದು ಪ್ರತೀವರ್ಷ ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಕೆಲಸ ಮಾಡಿದ ವಿದ್ವಾಂಸರಿಗೆ ಅದನ್ನು ನೀಡಲಾಗುತ್ತಿದೆ. Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.