ETV Bharat / state

ಫೋರ್ಟಿಸ್​ನಲ್ಲಿ ಅತಿ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ: ಮಹಿಳೆಗೆ ಸಂಜೀವಿನಿಯಾದ ಹೈಬ್ರಿಡ್ ತಂತ್ರಜ್ಞಾನದ ಕವಾಟ ಬದಲಾವಣೆ - etv bharat kannada

ಹೃದಯ ವೈಫಲ್ಯದಿಂದ ಬಳಲುತ್ತಿದ್ದ 64 ವರ್ಷದ ಮಹಿಳೆಗೆ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಿದ್ದಾರೆ.

Etv Bharatvery-rare-heart-surgery-to-a-woman-at-fortis-hospital-in-bengaluru
ಫೋರ್ಟಿಸ್​ನಲ್ಲಿ ಅತಿ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ: ಮಹಿಳೆಗೆ ಸಂಜೀವಿನಿಯಾದ ಹೈಬ್ರಿಡ್ ತಂತ್ರಜ್ಞಾನದ ಕವಾಟ ಬದಲಾವಣೆ
author img

By ETV Bharat Karnataka Team

Published : Sep 27, 2023, 10:53 PM IST

Updated : Sep 27, 2023, 11:00 PM IST

ಫೋರ್ಟಿಸ್​ನಲ್ಲಿ ಅತಿ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ

ಬೆಂಗಳೂರು: ಹೃದಯದಿಂದ ರಕ್ತಸಾಗಿಸುವ ಮಹಾಪಧಮನಿಯ ಕವಾಟವು ಸಂಪೂರ್ಣ ತಿರುಚಿಕೊಂಡು, ಹೃದಯ ವೈಫಲ್ಯದಿಂದ ಬಳಲುತ್ತಿದ್ದ 64 ವರ್ಷದ ಮಹಿಳೆಗೆ ಬೆಂಗಳೂರಿನ ಎಲ್ಲಾ ಪ್ರತಿಷ್ಠಿತ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಸಾಧ್ಯವಾಗದೇ ಕೈಚೆಲ್ಲಿದ ಸಂದರ್ಭದಲ್ಲಿ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಕ್ಲಿಷ್ಟಕರವಾದ ಸ್ಥಿತಿಯಲ್ಲಿದ್ದ ವೃದ್ಧ ಮಹಿಳೆಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಸಾವಿನ ದವಡೆಯಿಂದ ತಪ್ಪಿಸಿದ್ದಾರೆ.

ದೆಶದಲ್ಲಿಯೇ ಅತಿ ಅಪರೂಪದ ಹೈಬ್ರಿಡ್ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ (TAVR) ಆಧುನಿಕ ತಂತ್ರಜ್ಞಾನದ ಹಾರ್ಟ್​ನ ಮಹಾಪಧಮನಿಯ ಕವಾಟದ ಬಲಾವಣೆ ಮಾಡಿ ಜೀವನದ ಆಸೆಯನ್ನೇ ಮರೆತಿದ್ದ ಮಹಿಳೆಯ ಹೃದಯದಲ್ಲಿ ನಗು ಅರಳಿದೆ. ಬೆಂಗಳೂರಿನ ಹೊರವಲಯದ ದೇವನಹಳ್ಳಿ ನಿವಾಸಿಯಾದ ಶ್ರೀಮತಿ ಹಂಸವೇಣಿಯವರು ಹೈದಯ ವೈಫಲ್ಯದಿಂದ ನರಳುತ್ತಿದ್ದರು. ರಾಜಧಾನಿಯ ಪ್ರತಿಷ್ಠಿತ ಹೃದಯ ಚಿಕಿತ್ಸೆ ಆಸ್ಪತ್ರೆಗಳು ರೋಗಿಯ ಕ್ಲಿಷ್ಟಕರ ಪರಿಸ್ಥಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೇ ಅಸಹಾಯಕತೆ ವ್ಯಕ್ತಪಡಿಸಿದವು. ನಂತರ ಹಂಸವೇಣಿಯವರು ಬನ್ನೇರುಘಟ್ಟ ರಸ್ತೆಯ ಫೋರ್ಟೀಸ್ ಆಸ್ಪತ್ರೆಯನ್ನು ಸಂಪರ್ಕಿಸಿದಾಗ ಅಲ್ಲಿನ ವೈದ್ಯರ ತಂಡ ಬಹು ಅಂಗಾಂಗದಿಂದ ಬಳಲುತ್ತಿರುವ ಹಿರಿಯ ಮಹಿಳೆಗೆ ಚಿಕಿತ್ಸೆ ನೀಡುವುದನ್ನು ಸವಾಲಾಗಿ ಸ್ವೀಕರಿಸಿದರು.

ಮಹಿಳೆಯ ಹೃದಯ ತಪಾಸಣೆ ನಡೆಸಿದಾಗ ರಕ್ತಸರಬರಾಜು ಮಾಡುವ ಹೃದಯದ ಮಹಾಪಧಮನಿಯ ಕವಾಟವು ಸಂಪೂರ್ಣ ತಿರುಚಿಕೊಂಡು, ಅಪಾಯದ ಹಂತ ತಲುಪಿತ್ತು. 64 ವರ್ಷದ ಮಹಿಳೆಗೆ ಯಶಸ್ವಿಯಾಗಿ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ ( TAVR) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಭಾರತದಲ್ಲೇ ಮೊದಲ ಬಾರಿಗೆ ಹೈಬ್ರಿಡ್‌ TAVR ವಿಧಾನದ ಮೂಲಕ ನಡೆಸಿದ ಶಸ್ತ್ರಚಿಕಿತ್ಸೆಯಾಗಿದೆ ಎಂದು ಅಪರೂಪದ ಚಿಕಿತ್ಸೆಯ ನೇತೃತ್ವ ವಹಿಸಿದ್ದ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಹಿರಿಯ ಸಲಹೆಗಾರ ಡಾ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ಮಹಿಳಿಗೆ ಚಿಕಿತ್ಸೆ ನೀಡುವುದು ಅತ್ಯಂತ ಸವಾಲಿನ ಹಾಗೂ ಕ್ಲಿಷ್ಟಕರವಾಗಿತ್ತು. ದೇಶದಲ್ಲಿಯೇ ಅತಿ ಅಪರೂಪವೆನ್ನಬಹುದಾದಂತ ಶಸ್ತ್ರಚಿಕಿತ್ಸೆ ನಡೆಸಲು ಹೃದ್ರೋಗ ತಜ್ಞರು, ಹೃದಯ ಶಸ್ತ್ರಚಿಕಿತ್ಸಕರು, ಸಾಮಾನ್ಯ ಶಸ್ತ್ರಚಿಕಿತ್ಸಕರು, ಆಂತರಿಕ ಔಷಧ ತಜ್ಞರು, ಗ್ಯಾಸ್ಟ್ರೋಎಂಟರಾಲಜಿಸ್ಟ್‌, ನೆಫ್ರಾಲಜಿಸ್ಟ್‌ ಮತ್ತು ಅರಿವಳಿಕೆಶಾಸ್ತ್ರಜ್ಞ ಸೇರಿದಂತೆ ಬಹುದೊಡ್ಡ ತಂಡವೇ ಶ್ರಮಿಸಿ ಅತ್ಯಾಧುನಿಕ ತಂತ್ರಜ್ನಾದ ಮಾದರಿ ಬಳಸಿಕೊಂಡು ಚಿಕಿತ್ಸೆ ಯಶಸ್ವಿಗೊಳಿಸಲಾಗಿದೆ ಎಂದು ಡಾ. ಶ್ರೀನಿವಾಸ್ ಮಾಹಿತಿ ನೀಡಿದರು.

ಫೋರ್ಟಿಸ್ ಆಸ್ಪತ್ರೆ ಹಿರಿಯ ಹೃದಯತಜ್ಞ ಡಾ ವಿವೇಕ್ ಜವಳಿ ಮಾತನಾಡಿ, 64 ವರ್ಷದ ಹಂಸವೇಣಿ ಎಂಬ ಮಹಿಳೆ ಹತ್ತು ವರ್ಷದಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಇದಲ್ಲದೆ, ವಂಶ ಹೃದಯ ಕವಾಟದ ಅಸ್ವಸ್ಥತೆಯಿಂದ ಬಳಲಿ, ಮಹಾಪಧಮನಿಯ ಕವಾಟ ಬದಲಾವಣೆ ಮತ್ತು ಸಿಎಬಿಜಿ (ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟ್) ಶಸ್ತ್ರಚಿಕಿತ್ಸೆಗೆ ಒಳಗೊಂಡಿದ್ದರು. ಇತ್ತೀಚಿಗೆ ಅವರು ಎದೆಯ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆಗೆ ಒಳಗಾದರು. ಪರೀಕ್ಷೆಯಲ್ಲಿ ಏಕನಾಳದ ಪರಿಧಮನಿಯ ಕಾಯಿಲೆ ಇರುವುದು ಪತ್ತೆಯಾಯಿತು. ಮಹಿಳೆಯ ಹಿಂದಿನ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಳವಡಿಸಲಾದ ಪ್ರಾಸ್ಥೆಟಿಕ್ ಕವಾಟವು ವಿಫಲವಾಗಿದ್ದರಿಂದ, ರಕ್ತನಾಳವು ತೀವ್ರವಾಗಿ ಹಾನಿಗೊಳಗಾಗಿತ್ತು. ಇದರಿಂದ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು ಎಂದರು.

ಹಂಸವೇಣಿಯವರ ಪ್ರಾಸ್ಥೆಟಿಕ್‌ ಕವಾಟವು ಈಗಾಗಲೇ ವಿಫಲವಾಗಿದ್ದರಿಂದ. ಮತ್ತೊಮ್ಮೆ ಕವಾಟ ಬದಲಾವಣೆ ಸಾಧ್ಯವಾಗಿದ್ದಿಲ್ಲ. ಈ ಕಾರಣಕ್ಕಾಗಿಯೇ ಹಲವಾರು ಆಸ್ಪತ್ರೆಗಳು ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದವು. ಮೂರು ತಿಂಗಳು ಎಲ್ಲೂ ಚಿಕಿತ್ಸೆ ದೊರೆತಿರಲಿಲ್ಲ, ಇದರಿಂದ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಸಾಕಷ್ಟು ಪರೀಕ್ಷೆಗಳ ಬಳಿಕ ಬಹು ಅಂಗಾಂಗಗಳ ವೈಫಲ್ಯ ವಿರುವುದು ಗೊತ್ತಾಯಿತು. ಮಹಾಪಧಮಮನಿ (ಹೃದಯದಿಂದ ರಕ್ತವನ್ನು ಸಾಗಿಸುವ ದೇಹದಲ್ಲಿನ ಅತಿದೊಡ್ಡ ಅಪಧಮನಿ) ಅಸಹಜವಾಗಿ ದಪ್ಪವಾಗಿರುವುದು ಮತ್ತು ಕ್ಯಾಲ್ಸಿಫೈಡ್ (ಕ್ಯಾಲ್ಸಿಯಂ ನಿಕ್ಷೇಪಗಳಿಂದ ಗಟ್ಟಿಯಾಗುತ್ತದೆ) ಆಗಿರುವುದು ಕಂಡು ಬಂತು. ಇದರಿಂದ ಹೃದಯದ ಮಹಾಪಧನಿಯ ಕವಾಟವು ಸಂಪೂರ್ಣ ತಿರುಚಿಕೊಂಡಿತ್ತು ಎಂದು ತಿಳಿಸಿದರು.

ಆಸ್ಪತ್ರೆಗಳಲ್ಲಿ ಈ ಹಿಂದೆ ಚಿಕಿತ್ಸೆ ಪಡೆಯುವಾಗ ಬದಲಾಯಿಸಲಾದ ಪ್ರಾಸ್ಥೆಟಿಕ್ ಕವಾಟವನ್ನು ಅಸಹಜವಾಗಿ ಹೊರೆಯಾಗಿ ಬದಲಾಗಿತ್ತು. ಹೊಸ ಕವಾಟವನ್ನು ಪತ್ತೆಹಚ್ಚುವುದು ಹೆಚ್ಚು ಸವಾಲಿನ ಸಂಗತಿಯಾಗಿತ್ತು. ಆಪರೇಟಿಂಗ್ ಟೇಬಲ್‌ನಲ್ಲಿ ಹೃದಯಾಘಾತಕ್ಕೆ ಕಾರಣವಾಗುವ ಪರಿಧಮನಿಯ ರಕ್ತನಾಳವನ್ನು ತಡೆಯುವ ಹೆಚ್ಚಿನ ಅಪಾಯವನ್ನು ಇದು ಒಡ್ಡಿತ್ತು. ಹೀಗಾಗಿ ವಿನೂತನವಾದ ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ವಾಲ್ವ್ ರಿಪ್ಲೇಸ್‌ಮೆಂಟ್ ( TAVR) ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ವಿವರಿಸಿದರು.

ಫೋರ್ಟಿಸ್ ಆಸ್ಪತ್ರೆಯಲ್ಲಿನ ಯಶಸ್ವಿ ಚಿಕಿತ್ಸೆ ಬಗ್ಗೆ ಹಂಸವೇಣಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಚಿಕಿತ್ಸೆ ಪಡೆದು ಮೂರು ತಿಂಗಳಾಗಿದೆ. ತಾವು ಸಂಪೂರ್ಣ ಆರೋಗ್ಯದಿಂದ ಇದ್ದೇನೆ. ವೈದ್ಯರ ತಂಡಕ್ಕೆ ಕೃತಜ್ಞತೆಗಳನ್ನು ಹೇಳಿದರು.

ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮಾದರಿಯ ಹಾಗೂ ವೆಚ್ಚದಾಯಕವಾಗಿರುವ ಸುಸಜ್ಜಿತ ಚಿಕಿತ್ಸಾ ಸಾಧನ ಸಲಕರಣೆಗಳಿವೆ. ಈ ರೀತಿ ವಿಶೇಷ ಸೌಲಭ್ಯ ಇತರೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವುದಿಲ್ಲ. ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲವೆಂದು ನಿರಾಕರಿಸಲಾದ ನೂರಾರು ರೋಗಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಆರೋಗ್ಯ ಸಮಸ್ಯೆ ಗುಣಪಡಿಸಿದ ಹೆಗ್ಗಳಿಕೆ ಫೋರ್ಟಿಸ್ ನದ್ದಾಗಿದೆ ಎಂದು ಆಸ್ಪತ್ರೆ ವೈದ್ಯರ ತಂಡ ಹೆಮ್ಮೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: 30ರ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರಪಿಂಡ ಕಸಿ: ಫೋರ್ಟಿಸ್‌ ಆಸ್ಪತ್ರೆ ವೈದ್ಯರಿಂದ ವಿಶ್ವದಲ್ಲೇ ಅಪರೂಪದ ಚಿಕಿತ್ಸೆ!

Last Updated : Sep 27, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.