ETV Bharat / state

ಶತಮಾನ ಪೂರೈಸಿದ ವೆಂಕಟೇಶ್ವರ ಸ್ವೀಟ್

author img

By

Published : Aug 8, 2019, 2:04 PM IST

ವಿಶಿಷ್ಟ ಮೈಸೂರು ಪಾಕ್ ಮೂಲಕ ನಗರದ ಜನರ ಮನ ಗೆದ್ದಿರುವ ವೆಂಕಟೇಶ್ವರ ಸ್ವೀಟ್ ಯಶಸ್ವಿ ನೂರು ವರ್ಷಗಳನ್ನು ಪೂರೈಸಿದೆ. ಸಣ್ಣ ಅಂಗಡಿಯಿಂದ ದೊಡ್ಡಮಟ್ಟದವರೆಗೆ ಬೆಳೆದು ಬಂದ ಬಗ್ಗೆ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ ಅಂಗಡಿ ಮಾಲೀಕ ರಘು.

ಶತಮಾನ ಪೂರೈಸಿದ ವೆಂಕಟೇಶ್ವರ ಸ್ವೀಟ್

ಬೆಂಗಳೂರು : ಸ್ವಾದಿಷ್ಟ ಮೈಸೂರು ಪಾಕ್​ನಿಂದಲೇ ಜನರ ಮನ ಗೆದ್ದಿರುವ ನಗರದ ವೆಂಕಟೇಶ್ವರ ಸ್ವೀಟ್ಸ್ ಒಂದು ಶತಮಾನವನ್ನು ಪೂರೈಸಿದೆ.

ನಗರದ ಬಳೆಪೇಟೆ ಮುಖ್ಯರಸ್ತೆಯಲ್ಲಿರುವ ವೆಂಕಟೇಶ್ವೇರ ಸ್ವೀಟ್ಸ್ ನೂರು ವರುಷಗಳ ಹಿಂದೆ ಆರಂಭಗೊಂಡಿದೆ. ಒಂದು ಶತಮಾನಗಳ ಕಾಲ ನಗರದ ಜನರಿಗೆ ಸಿಹಿ ತಿನಿಸುತ್ತಾ ಮನ್ನಡೆದು ಬಂದಿದೆ.

ನೂರು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ವೆಂಕಟಾಚಲಪತಿ ಎಂಬವರು ಪಾಕವನ್ನು ತಯಾರಿಸಿ ಸೈಕಲ್​ನಲ್ಲಿ ಮಾರುತ್ತಿದ್ದರು. ಅವರ ಕೆಲಸವನ್ನು ನೋಡಿದ ಕೆಲವರು ಇದೇ ಕೆಲಸವನ್ನು ಬೆಂಗಳೂರಿನಲ್ಲಿ ಮಾಡುವಂತೆ ಸಲಹೆ ನೀಡಿದರು. ಸಲಹೆ ಮೇರೆಗೆ ಬೆಂಗಳೂರಿಗೆ ಬಂದ ವೆಂಕಟಾಚಲಪತಿ ನಗರದಲ್ಲಿ ಮೈಸೂರು ಪಾಕ್ ಮಾರಾಟ ಮಾಡಲು ಆರಂಭಿಸಿದರು.

ಮೊದಲಿಗೆ ಬೆಂಗಳೂರಿನ ರಂಗಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಚಿಕ್ಕ ಅಂಗಡಿಯಲ್ಲಿ ವ್ಯಾಪಾರ ಆರಂಭಿಸುತ್ತಾರೆ. ಆರಂಭದಲ್ಲಿ ವ್ಯಾಪಾರ ಕೊಂಚ ಕಡಿಮೆಯಿತ್ತು. ಆನಂತರ ಗ್ರಾಹಕರು ಹೆಚ್ಚಾಗಿ ಬರಲು ಆರಂಭಿಸಿದರು. ನಂತರ ಚಲಪತಿ ಅವರು ಬೆಂಗಳೂರಿನಲ್ಲೇ ನೆಲೆಸಲು ನಿರ್ಧರಿಸಿದರು. ಹೀಗೆ ನೂರು ವರ್ಷಗಳ ಹಿಂದೆ ಆರಂಭಿಸಿದ ಮೈಸೂರುಪಾಕ್ ಇದೀಗ ನೂರು ವರ್ಷ ಯಶಸ್ವಿಯಾಗಿ ಪೂರೈಸಿದೆ.

ಶತಮಾನ ಪೂರೈಸಿದ ವೆಂಕಟೇಶ್ವರ ಸ್ವೀಟ್

ವೆಂಕಾಟಚಲಪತಿ ಬಳಿಕ ಅವರ ಮಗ ವಿ.ನಾಗರಾಜ್ ತಂದೆಯ ಜವಾಬ್ದಾರಿಯನ್ನು ಹೊತ್ತು ಸಾಗಿದರು. ರಂಗಸ್ವಾಮಿ ಸ್ಟ್ರೀಟ್​ನಿಂದ ಪೇಟೆಯ ಮುಖ್ಯ ರಸ್ತೆಗೆ ಅಂಗಡಿ ಶಿಫ್ಟ್ ಆಯ್ತು. ದಿನಕಳೆದಂತೆ ಬಳೆಪೇಟೆಯ ಮುಖ್ಯರಸ್ತೆಗೆ ಬಂದು ದೊಡ್ಡ ಅಂಗಡಿಯಾಗಿದೆ. ಇದೀಗ ನಾಗರಾಜ್ ಮಕ್ಕಳಾದ ಶ್ರೀನಾಥ್ ಹಾಗೂ ರಘು ಅಂಗಡಿಯನ್ನು ಮುನ್ನಡೆಸುತ್ತಿದ್ದಾರೆ.

ನೂರು ವರ್ಷಗಳ ಹಿಂದೆ ನಮ್ಮ ತಾತನವರು ಮಾಡುತ್ತಿದ್ದ ರುಚಿ ಈಗಲೂ ಮುಂದುವರಿಸಲಾಗುತ್ತಿದೆ. ಜನರು ಇಲ್ಲಿಗೆ ಹುಡುಕಿಕೊಂಡು ಬಂದು ಮೈಸೂರುಪಾಕ್ ಕೊಂಡು ಹೋಗುತ್ತಾರೆ ಎನ್ನುತ್ತಾರೆ ಅಂಗಡಿ ಮಾಲೀಕ ರಘು.

Intro:ಹೀಗೆ ಮೈಸೂರು ಪಾಕನ್ನು ಮಾಡುವುದನ್ನು ನೋಡುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ. ಮೈಸೂರು ಪಾಕನ್ನು ಬಾಯಿಗಿಟ್ಟುಕೊಂಡರೆ ಕರಗಿಹೋಗುತ್ತದೆ. ಹೌದು ಬೆಂಗಳೂರಿನ ಬಳೆಪೇಟೆ ಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲ್ ನಲ್ಲಿ ತಯಾರಾಗುತ್ತಿರುವ ತುಪ್ಪದ ಮೈಸೂರುಪಾಕ್.

Body:ಬೆಂಗಳೂರಿನ ವೆಂಕಟೇಶ್ವರ ಸ್ವೀಟ್ಸ್ ನಲ್ಲಿ ತಯಾರಾಗುವ ಮೈಸೂರು ಪಾಕ್ ಸಿಹಿಗೆ ನೂರರ ಸಂಭ್ರಮ. ಇಲ್ಲಿ ಸಿದ್ಧವಾಗುತ್ತಿರುವ ಮೈಸೂರು ಪಾಕು ಸ್ವೀಟ್ ಗೆ ಬೇಡಿಕೆ ಹೆಚ್ಚಿದೆ ಹಬ್ಬ-ಹರಿದಿನಗಳಲ್ಲಿ ಡಿಮ್ಯಾಂಡೋ ಡಿಮ್ಯಾಂಡು.
ಪ್ರತಿನಿತ್ಯ ನೂರಕ್ಕೂ ಹೆಚ್ಚು ಕೆಜಿ ಮೈಸೂರುಪಾಕ್ ಇಲ್ಲಿ ತಯಾರಾಗಲಿದೆ.
ಚಿಕ್ಕಬಳ್ಳಾಪುರದಲ್ಲಿ ವೆಂಕಟಾಚಲಪತಿ ಎಂಬುವರು ಪಾಕವನ್ನು ತಯಾರಿಸಿ ಸೈಕಲ್ನಲ್ಲಿ ಮಾರುತ್ತಿದ್ದರಂತೆ ಬೆಂಗಳೂರಿನಲ್ಲಿ ಮಾಡುವಂತೆ ಸಲಹೆ ನೀಡಿದರಂತೆ. ಸಲಹೆ ಮೇರೆಗೆ ಬೆಂಗಳೂರಿಗೆ ಬಂದ ಅವರು ಮೈಸೂರುಪಾಕ್ ಮಾರಾಟ ಮಾಡಲು ಆರಂಭಿಸಿದರು. ಮೊದಲಿಗೆ ಬೆಂಗಳೂರಿನ ರಂಗಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಚಿಕ್ಕ ಅಂಗಡಿಯಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದರು ಮೊದಮೊದಲು ಹೆಚ್ಚು ಮಾರಾಟವಾಗುತ್ತಿರುವುದು ಆನಂತರ ಗ್ರಾಹಕರು ಹೆಚ್ಚಾಗಿ ಬರಲು ಆರಂಭಿಸಿದರು ನಂತರ ಚಲಪತಿ ಅವರು ಬೆಂಗಳೂರಿನಲ್ಲೇ ನೆಲೆಸಲು ನಿರ್ಧರಿಸಿದರು. ಆಗ ಆರಂಭಿಸಿದ ಮೈಸೂರುಪಾಕ್ ಇದೀಗ ನೂರು ವರ್ಷ ತುಂಬಿದೆ.
ಆಗ ತಮ್ಮ ತಾತನವರು ಮಾಡುತ್ತಿದ್ದ ರುಚಿ ಈಗಲೂ ಅದನ್ನೇ ಮುಂದುವರಿಸಲಾಗುತ್ತಿದೆ ಎನ್ನುತ್ತಾರೆ ಅಂಗಡಿ ಮಾಲಿಕ ರಘು. ಈ ಸಿಹಿಯನ್ನು ತಯಾರಿಸಲು ಶುದ್ಧ ತುಪ್ಪ ಹಾಗೂ ಕಡ್ಲೆಹಿಟ್ಟು ಬಳಸಲಾಗುತ್ತದೆ. ಗುಣಮಟ್ಟ ಹಾಗೂ ರುಚಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜನರು ಇಲ್ಲಿಗೆ ಹುಡುಕಿಕೊಂಡು ಬರುತ್ತಾರೆ. ಮೈಸೂರುಪಾಕ್ ಕೊಂಡು ಹೋಗುತ್ತಾರೆ ಎನ್ನುತ್ತಾರೆ ಅವರು.
ಇವರ ಬಳಿಕ ಅವರ ಮಗ ವಿ. ನಾಗರಾಜ್ ತಂದೆಯ ಜವಾಬ್ದಾರಿಯನ್ನು ಹೊತ್ತು ಸಾಗಿದರು. ರಂಗಸ್ವಾಮಿ ಸ್ಟ್ರೀಟ್ ನಿಂದ ಪೇಟೆಯ ಮುಖ್ಯ ರಸ್ತೆಗೆ ಅಂಗಡಿ ಶಿಫ್ಟ್ ಆಯ್ತು. ದಿನಕಳೆದಂತೆ ಬಳೆಪೇಟೆ ಯ ಮುಖ್ಯರಸ್ತೆಗೆ ಬಂದು ದೊಡ್ಡ ಅಂಗಡಿ ಯಾಗಿದೆ. ಇದೀಗ ನಾಗರಾಜ್ ಅವರ ಮಕ್ಕಳಾದ ಶ್ರೀನಾಥ್ ಹಾಗೂ ರಾಘು ಅಂಗಡಿಯನ್ನು ಮುನ್ನಡೆಸುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.