ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿರುವ ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮದುವೆ ಸಂಭ್ರಮದ ನಡುವೆಯೂ ತಮ್ಮ ಹಾಟ್ ಫೇವರಿಟ್ ಮಸಾಲೆ ದೋಸೆ ಸವಿಯುವುದನ್ನು ಮರೆಯಲಿಲ್ಲ.
-
Enjoyed breakfast & my favourite Dosa at Hotel Janardhana in Bengaluru, which I have been visiting for over 2 decades. I always opt for traditional Indian cuisine which is increasingly popular now. Met the present generation owners & old staff who have known me for long years. pic.twitter.com/FAbB58bwPr
— M Venkaiah Naidu (@MVenkaiahNaidu) June 5, 2023 " class="align-text-top noRightClick twitterSection" data="
">Enjoyed breakfast & my favourite Dosa at Hotel Janardhana in Bengaluru, which I have been visiting for over 2 decades. I always opt for traditional Indian cuisine which is increasingly popular now. Met the present generation owners & old staff who have known me for long years. pic.twitter.com/FAbB58bwPr
— M Venkaiah Naidu (@MVenkaiahNaidu) June 5, 2023Enjoyed breakfast & my favourite Dosa at Hotel Janardhana in Bengaluru, which I have been visiting for over 2 decades. I always opt for traditional Indian cuisine which is increasingly popular now. Met the present generation owners & old staff who have known me for long years. pic.twitter.com/FAbB58bwPr
— M Venkaiah Naidu (@MVenkaiahNaidu) June 5, 2023
ಯಾವಾಗ ಬೆಂಗಳೂರಿಗೆ ಭೇಟಿ ನೀಡಿದರೂ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್ಗೆ ವೆಂಕಯ್ಯ ನಾಯ್ಡು ಒಂದು ಭೇಟಿ ನೀಡಿಯೇ ನೀಡುತ್ತಾರೆ. ರುಚಿರುಚಿಯಾದ ಮಸಾಲೆ ದೋಸೆ ಸವಿದು ಬಿಸಿ ಬಿಸಿಯಾದ ಚಹಾ ಹೀರಿ ಆಪ್ತರ ಜೊತೆ ಕೆಲ ಸಮಯ ಕಳೆಯುವುದನ್ನು ಅವರು ರೂಢಿಸಿಕೊಂಡಿದ್ದಾರೆ.
ಅದರಂತೆ ಇಂದು ಕೂಡ ನಗರಕ್ಕೆ ಆಗಮಿಸಿದ ವೆಂಕಯ್ಯ ನಾಯ್ಡು ಮೊದಲು ಭೇಟಿ ನೀಡಿದ್ದೇ ಜನಾರ್ದನ ಹೋಟೆಲ್ಗೆ. ತಮ್ಮ ಫೇವರಿಟ್ ಮಸಾಲೆ ದೋಸೆ ಸವಿದು ಚಹಾ ಹೀರಿದ ವೆಂಕಯ್ಯ ನಾಯ್ಡು, ಸಾಕಷ್ಟು ವರ್ಷದಿಂದ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿರುವವರನ್ನು ಮಾತನಾಡಿಸಿದರು. ಇದೇ ವೇಳೆ ಹೋಟೆಲ್ ಮಾಲೀಕರನ್ನೂ ಭೇಟಿಯಾದರು. ಈ ವಿಷಯವನ್ನು ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ಅವರು ಬರೆದುಕೊಂಡಿದ್ದಾರೆ.
ಇಂದು ಬೆಳಗ್ಗೆಯ ಉಪಹಾರಕ್ಕೆ ನನ್ನ ನೆಚ್ಚಿನ ಮಸಾಲೆ ದೋಸೆಯನ್ನು ಸವಿದೆ, ಎರಡು ದಶಕದಿಂದ ಬೆಂಗಳೂರಿಗೆ ಬಂದಾಗ ಜನಾರ್ದನ ಹೋಟೆಲ್ಗೆ ತೆರಳಿ ಉಪಹಾರ ಸೇವಿಸುವ ರೂಢಿಯಿದೆ. ಅದರಂತೆ ಇಂದು ಕೂಡ ದೋಸೆ ಸವಿದೆ. ನಾನು ಯಾವಾಗಲೂ ಸಾಂಪ್ರದಾಯಿಕ ಭಾರತೀಯ ಪಾಕ ಪದ್ದತಿಯನ್ನೇ ಆರಿಸಿಕೊಳ್ಳುತ್ತೇನೆ. ಅಲ್ಲದೇ ದಕ್ಷಿಣ ಭಾರತೀಯ ಖಾದ್ಯಗಳೇ ಇಷ್ಟ. ಹೋಟೆಲ್ನಲ್ಲಿ ಈಗಿನ ತಲೆಮಾರಿನ ಮಾಲೀಕರು ಹಾಗೂ ಹಳೆಯ ತಲೆಮಾರಿನ ಸಿಬ್ಬಂದಿಯನ್ನು ಭೇಟಿಯಾದೆ ಎಂದು ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯಾವಾಗ ರಾಜ್ಯಕ್ಕೆ ಭೇಟಿ ನೀಡಿದರೂ ಕನ್ನಡ, ಕರ್ನಾಟಕದ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳನ್ನಾಡುವ ವೆಂಕಯ್ಯ ನಾಯ್ಡು ಇಂದು ಕೂಡ ಕರ್ನಾಟಕದ ಜನರ ಸ್ನೇಹ ಮನೋಭಾವ ನನಗೆ ಬಹಳ ಇಷ್ಟ. ಜನಾರ್ದನ ಹೊಟೇಲ್ ದೋಸೆ ನನ್ನ ಫೇವರಿಟ್, ಇದು ಬ್ಯೂಟಿಫುಲ್ ಪ್ಲೇಸ್ ಎಂದು ಸಂತಸ ಹಂಚಿಕೊಂಡಿದ್ದಾರೆ.
ನಂತರ ನಗರದಲ್ಲಿ ನಡೆದ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಮದುವೆ ಸಮಾರಂಭದಲ್ಲಿ ಅವರು ಭಾಗಿಯಾದರು. ನೂತನ ವಧು ವರರಿಗೆ ಆಶೀರ್ವಾದ ಮಾಡಿ ಶುಭ ಕೋರಿದರು.
ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಜೊತೆ ಹಸೆಮಣೆ ಏರಿದ ಅಭಿಷೇಕ್ ಅಂಬರೀಶ್: ಜೂ.7ರಂದು ಆರತಕ್ಷತೆ
ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಅಂಬರೀಶ್ ಮದುವೆ ಶುಭಕಾರ್ಯ ನಡೆಯುತ್ತಿದೆ. ಒಕ್ಕಲಿಗ ಸಂಪ್ರದಾಯದಂತೆ ಸುಮಲತಾ ಅಂಬರೀಶ್ ಮಗನ ಮದುವೆ ನಡೆಸಿದ್ದಾರೆ. ನಟ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮದುವೆ ಸಮಾರಂಭದ ಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಇದೇ ಜೂನ್ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿಯಲ್ಲಿ ಅದ್ದೂರಿಯಾಗಿ ಅಭಿಷೇಕ್ ಮತ್ತು ಅವಿವಾ ಆರತಕ್ಷತೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸುಮಲತಾ ಅವರು ಈಗಾಗಲೇ 10 ಸಾವಿರ ಮಂದಿಗೆ ಆಮಂತ್ರಣ ನೀಡಿದ್ದಾರೆ.
ಖ್ಯಾತ ಸೆಲೆಬ್ರಿಟಿಗಳ ಭಾಗಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವಾ ಅವರ ಅದ್ಧೂರಿ ಮದುವೆ ನಡೆದಿದ್ದು, ನಟರಾದ ರಜನಿಕಾಂತ್, ಕಿಚ್ಚ ಸುದೀಪ್, ಯಶ್, ಮೋಹನ್ ಬಾಬು ಸೇರಿದಂತೆ ಸಾಕಷ್ಟು ತಾರೆಯರು ಆಗಮಿಸಿ ಹೊಸ ಜೋಡಿಗೆ ಶುಭ ಹಾರೈಯಿಸಿದರು.
ಇದನ್ನೂ ಓದಿ: ಅಭಿನಂದನೆಗೆ ಶಾಲು-ಹಾರ, ಹುಟ್ಟುಹಬ್ಬಕ್ಕೆ ಕೇಕ್ ಕಟ್ ಬೇಡ: ಪ್ರೀತಿಯಿಂದ ಪುಸ್ತಕ ನೀಡಿ - ಸಚಿವ ಶಿವರಾಜ ತಂಗಡಗಿ