ETV Bharat / state

ಕಸದ ರಾಶಿಯಲ್ಲಿ ಅಡಗಿಸಿಟ್ಟಿದ್ದ ಹಸುಗೂಸಿನ ಮೇಲೆ ಹರಿದ ವಾಹನಗಳು: ಬೆಂಗಳೂರಿನಲ್ಲೊಂದು ದಾರುಣ ಘಟನೆ

ನಾಲ್ಕೈದು ತಿಂಗಳ ಹಸುಗೂಸನ್ನು ಪ್ಲಾಸ್ಟಿಕ್ ಕವರ್​ನಲ್ಲಿ ಕಟ್ಟಿ ಕಸದ ರಾಶಿಗೆ ಬಿಸಾಡಲಾಗಿದ್ದ ಮಗುವಿನ ಮೇಲೆ ವಾಹನ ಹರಿದು ಸಾವನ್ನಪ್ಪಿರುವ ಘಟನೆ ಫೆ.28ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

vehicles-that-ran-over-a-bairn-hidden-in-a-garbage-heap
ಕಸದ ರಾಶಿಯಲ್ಲಿ ಅಡಗಿಸಿಟ್ಟಿದ್ದ ಹಸುಗೂಸಿನ ಮೇಲೆ ಹರಿದ ವಾಹನಗಳು: ಬೆಂಗಳೂರಿನಲ್ಲೊಂದು ದಾರುಣ ಘಟನೆ
author img

By

Published : Mar 4, 2023, 4:11 PM IST

ಬೆಂಗಳೂರು : ಕಸದ ರಾಶಿಯಲ್ಲಿ ಬಿಸಾಡಲಾಗಿದ್ದ ನಾಲ್ಕೈದು ತಿಂಗಳ ಹಸುಗೂಸಿನ ಮೇಲೆ ವಾಹನಗಳು ಹರಿದ ಪರಿಣಾಮವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಫೆಬ್ರವರಿ 28ರಂದು ಅಮೃತಹಳ್ಳಿಯ ಪಂಪಾ ಲೇಔಟಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಸಾಗಿದ ಬಿಬಿಎಂಪಿ ಕಸದ ಲಾರಿಯಿಂದ ಪ್ಲಾಸ್ಟಿಕ್ ಕವರ್ ರಸ್ತೆಗೆ ಬಿದ್ದಿದೆ. ವೇಳೆ ಹಿಂದಿನಿಂದ ವೇಗವಾಗಿ ಬಂದ ವಾಹನಗಳು ಕವರ್‌ ಮೇಲೆ ಹರಿದ ಪರಿಣಾಮ ಅದರಲ್ಲಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

ನಾಲ್ಕೈದು ತಿಂಗಳ ಮಗುವನ್ನ ಯಾರೋ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಕಸದ ಲಾರಿಯಲ್ಲಿರಿಸಿದ್ದು,‌ ಲಾರಿ ಸಾಗುವಾಗ ಕವರ್ ನೆಲಕ್ಕೆ ಬಿದ್ದಿದೆ. ಪ್ಲಾಸ್ಟಿಕ್‌ ಕವರಿನೊಳಗೆ ಮಗು ಇರುವುದನ್ನ ಗಮನಿಸದೇ ಅದರ ಮೇಲೆ ವಾಹನಗಳು ಹರಿದ ಪರಿಣಾಮ ಮಗು ಸಾವನ್ನಪ್ಪಿದೆ. ಮಗುವಿನ ದೇಹ ನಜ್ಜು ಗುಜ್ಜಾಗಿರುವುದರಿಂದ ಗಂಡೋ ಹೆಣ್ಣೋ ಎಂಬುದನ್ನ ತಿಳಿಯುವುದು ಸಹ ಕಷ್ಟವಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಅನ್ವಯ ಪೊಲೀಸರು ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಘಟನೆಯ ಬಗ್ಗೆ ಠಾಣಾ ಎಎಸ್​ಐ ದೇವರಾಜು ನೀಡಿದ ಮಾಹಿತಿ ಹೀಗಿದೆ: ದಿನಾಂಕ ಫೆಬ್ರವರಿ 28ರಂದು ಠಾಣೆಯಲ್ಲಿ ಹಗಲು ಕರ್ತವ್ಯದಲ್ಲಿದ್ದು, ಎಸ್​ಹೆಚ್​ಓ ಅವರು ನನಗೆ ಹಾಗೂ ಪೊಲೀಸ್​ ಕಾನ್​ಸ್ಟೇಬಲ್​ ಉಳವೇಶ್​ ಈಶ್ವರ್​​ ಕನಕ ಗೌಡರ ಅವರಿಗೆ ಹೊಯ್ಸಳ ಠಾಣಾ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಾವು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 1.30ರ ಸಮಯದಲ್ಲಿ ಪಂಪಾನಗರದಲ್ಲಿ ಗಸ್ತಿನಲ್ಲಿರಬೇಕಾದರೆ ಸಾರ್ವಜನಿಕರು ನಮಗೆ ಪಂಪಾನಗರ ಲೇಔಟ್​, ಪಂಪಾ ಎಕ್ಸಟೆನ್ಷನ್​ 8ನೇ ಎ ಕ್ರಾಸ್​ ರಸ್ತೆಯಲ್ಲಿ ಕಸದ ಗಾಡಿ ಹೋಗಿದ್ದು, ಅಲ್ಲಿಂದ ಬಿದ್ದ ಪ್ಲಾಸ್ಟಿಕ್​ ಕವರ್​ ಮೇಲೆ ವಾಹನವೊಂದು ಹರಿದಿದೆ. ದುರದೃಷ್ಟವಶಾತ್​ ಆ ಕವರ್​ನಲ್ಲಿ 4 ರಿಂದ 5 ತಿಂಗಳ ಮಗುವಿದ್ದು, ಆ ಮಗು ವಾಹನ ಹರಿದಿದ್ದರಿಂದ ಮೃತಪಟ್ಟಿದೆ. ಗಂಡು ಮಗುವೋ ಹೆಣ್ಣು ಮಗುವೋ ತಿಳಿಯುತ್ತಿಲ್ಲ ಎಂದು ಸ್ಥಳಕ್ಕೆ ಬರುವಂತೆ ಮಾಹಿತಿ ನೀಡಿದರು ಎಂದು ಎಸ್​​​ಎಚ್​​ಒ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಬಂದ ಮಾಹಿತಿ ಅನ್ವಯ, ಸ್ಥಳಕ್ಕೆ ಹೋಗಿ ನೋಡಿದಾಗ 4 ರಿಂದ 5 ತಿಂಗಳ ಮಗು ಯಾವುದೋ ವಾಹನ ಹರಿದು ಮೃತಪಟ್ಟಿರುವುದು ಕಂಡುಬಂತು. ಸ್ಥಳದಲ್ಲಿದ್ದ ಅಕ್ಕಪಕ್ಕದವರಲ್ಲಿ ಈ ಬಗ್ಗೆ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಈ ಮಗು ಗಂಡೋ ಅಥವಾ ಹೆಣ್ಣು ಮಗುವೋ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಯಾರೋ ದುರಾತ್ಮರು ಮಗುವಿನ ಜನನವನ್ನು ಬಚ್ಚಿಡುವ ಉದ್ದೇಶದಿಂದ ರಸಹ್ಯವಾಗಿ ವಿಲೇವಾರಿ ಮಾಡಲು ಈ ಮಗುವನ್ನು ಪ್ಲಾಸ್ಟಿಕ್​ ಕವರಿನಲ್ಲಿ ಕಟ್ಟಿ ಕಸದ ತೊಟ್ಟಿಗೆ ಎಸೆರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಮಹಿಳೆಯ ಖಾಸಗಿ ಚಿತ್ರ ಸೆರೆ ಹಿಡಿದು ಬ್ಲ್ಯಾಕ್​ಮೇಲ್​.. ನಿರಂತರ ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.