ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ, ರಾಜ್ಯದಲ್ಲಿ ಭಾನುವಾರ ಲಾಕ್‌ಡೌನ್ ಜಾರಿಯಲ್ಲಿದೆ. ಬೆಂಗಳೂರು ಬೆಳಗ್ಗೆ ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಆದರೆ ಮಧ್ಯಾಹ್ನದ ವೇಳೆಗೆ ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ.
ಲಾಕ್‌ಡೌನ್ ಇದ್ರೂ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿಲ್ಲ. ಇದರಿಂದ ಬೆಂಗಳೂರು ಜನರಿಗೆ ಎಷ್ಟು ಎಚ್ಚರಿಕೆ ನೀಡಿದರೂ ಅಷ್ಟೇನಾ ಅನ್ನೋ ಪ್ರಶ್ನೆ ಕಾಡುತ್ತಿದೆ.
ವೀಕೆಂಡ್ನಲ್ಲಿ ಹೊರಗಡೆ ಬರಬೇಡಿ ಎಂದು ಲಾಕ್ ಮಾಡಿದರೆ, ವಾಹನ ತೆಗೆದುಕೊಂಡು ಹೊರಬರುತ್ತಿರುವ ದೃಶ್ಯ ಸಾಮಾನ್ಯವಾಗಿ ಕಾಣುತ್ತಿದೆ. ಮಧ್ಯಾಹ್ನ ಆಗ್ತಿದ್ದಂತೆ ಬೆಂಗಳೂರಿನ ರಸ್ತೆಯಲ್ಲಿ ನಿಧಾನವಾಗಿ ವಾಹನ ಸಂಚಾರ ಹೆಚ್ಚುತ್ತಿದೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿ ವಾಹನಗಳು ಓಡಾಡುತ್ತಿದ್ದು, ಸರ್ಕಾರದ ಆದೇಶ ಹಾಗೂ ಕೊರೊನಾಗೂ ಡೋಂಟ್ ಕೇರ್ ಅಂತಿದ್ದಾರೆ ಜನರು.