ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಾಲ್ಮೀಕಿ ಸಮುದಾಯದವರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದ ಕಾರಣ ಬಹುತೇಕ ನಗರದ ಹೃದಯ ಭಾಗ ಟ್ರಾಫಿಕ್ ಜಾಮ್ ನಿಂದ ತತ್ತರಿಸಿ ಹೋಗಿತ್ತು.
ಪ್ರತಿಭಟನೆಯಿಂದಾಗಿ ಕೆಜಿ ರಸ್ತೆ, ರೆಸ್ ಕೋರ್ಸ್, ಗಾಂಧಿನಗರ, ವಿಧಾನಸೌಧ, ನೃಪತುಂಗ ರಸ್ತೆ, ಕಾರ್ಪೊರೇಷನ್ ವೃತ್ತದಲ್ಲಿ ವಾಹನ ಸವಾರರು ಗಂಟೆಗಟ್ಟಲೆ ನಿಂತು ಹಿಡಿ ಶಾಪ ಹಾಕಿದರು.